ಮಾಜಿ ಸಂಸದರಾದ ಚನ್ನಯ್ಯ ಒಡೆಯರ್ ರವರ ಪುತ್ರ ಶಿವಕುಮಾರ್ ಒಡೆಯರ್  ಈ ಬಾರಿ ಲೋಕಸಭಾ ಚುನಾವಣೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಕ್ಷೇತ್ರದ ವಿವಿದ ಬಾಗಗಳಲ್ಲಿ ಸಮಾಲೋಚನೆ ಸಭೆಯಲ್ಲಿ   ಭರ್ಜರಿ ರಾಜಕೀಯ ಸಂಚಲನ 

ಮಾಜಿ ಸಂಸದರಾದ  ಚನ್ನಯ್ಯ ಒಡೆಯರ್ ರವರ ಸುಪುತ್ರರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಾದ   ಶಿವಕುಮಾರ್ ಒಡೆಯರ್ ರವರು  ದಾವಣಗೆರೆ ಲೋಕಸಭಾ ಕ್ಷೇತ್ರದ ಹರಿಹರ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯ ಹಾಲಿವಾಣ ಕೋಮಾರನಹಳ್ಳಿ, ಕುಂಬಳೂರು, ಸಂಕ್ಲಿಪುರ, ಗುಳದಹಳ್ಳಿ, ಮಾಲನಾಯಕನಹಳ್ಳಿ, ಹರಳಹಳ್ಳಿ, ಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮುಂಬರುವ ಲೋಕಸಭಾ ಚುನಾವಣೆ ಕುರಿತು ಸಮಾಲೋಚನೆ  ಸಭೆ ನಡೆಸಿದರು.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 15

ಈ ವೇಳೆ ಬರುವ ಲೋಕಸಭಾ ಚುನಾವಣೆ ಅಭ್ಯರ್ಥಿ ಶಿವಕುಮಾರ್ ಒಡೆಯರ್ ರವರು ಸಮಾಲೋಚನೆ ಸಭೆಯನ್ನುದ್ದೆಶಿಸಿ ಮಾತನಾಡಿದರು ನಮ್ಮ ತಂದೆಯವರು ಈ ಹಿಂದೆ ಸಂಸದರಾಗಿ ಉತ್ತಮ ಸರಳ ಸಜ್ಜನ ರಾಜಕಾರಣಿ ಎಂದೆ ಖ್ಯಾತಿ ಗಳಿಸಿ ಜಿಲ್ಲಾ ಕೇಂದ್ರದಲ್ಲು ಆಗಿನ ಸರ್ಕಾರಿ ಅನುದಾನಗಳ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜಿಲ್ಲೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು ಅವರ ಹೆಸರೆ ಈಗಿನ ರಾಜಕಾರಣಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಶಿಸ್ತು ಬದ್ದ ರಾಜಕಾರಣ ಜಿಲ್ಲೆಯ ಜನತೆಗೆ ಹಾಗೂ ಈ ಬಾಗದ ರಾಜಕೀಯ ಲೀಡರ್ ಗಳಿಗೆ ಗೊತ್ತಿರುವ ಸಂಗತಿಯಾಗಿದ್ದು ನಾನು ಕೂಡ ನಮ್ಮ ತಂದೆಯವರ ರಾಜಕಾರಣ ಬಲ್ಲವನಾಗಿದ್ದು ಅವರ ತತ್ವ ಸಿದ್ದಾಂತವನ್ನ ಮೈಗೂಡಿಸಿಕೊಂಡು ಅವರ ಹಾದಿಯಲ್ಲಿಯೆ ನಡೆಯುವ ನಿಮ್ಮ ಜನಸೇವಕನಾಗಿ ಕ್ಷೇತ್ರದ ಜನತೆಯ ನಂಬಿ ನಿಮ್ಮ ಮನೆ ಮಗನಾಗಿ ಬಂದಿರುವೆ ನನಗೆ ಬರುವ ಲೋಕಸಭಾ ಚುನಾವಣೆ ಟಿಕೆಟ್ ಸಿಗುವ ಎಲ್ಲಾ ಲಕ್ಷಣಗಳು ನಮ್ಮ ಹೈಕಮಾಂಡ್ ವರೀಷ್ಠರಿಂದ ಭರವಸೆಯಿದೆ ಕಾರ್ಯಕರ್ತರು ನನಗೆ ಸಹಕರಿಸಿ ತಮ್ಮಗಳ ಸೇವೆ ಮಾಡಲು ಆವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು .

ದಾವಣಗೆರೆ ಕ್ಷೇತ್ರದ ಲೋಕಸಬಾ ಚುನಾವಣೆಯಲ್ಲಿ ಸ್ವರ್ಧಿಸಲು ನಾನು ಇಚ್ಚಿಸಿದ್ದು‌ ನನಗೆ ಕಾಂಗ್ರೆಸ್ ಪಕ್ಷದಲ್ಲಿ  ಟಿಕೆಟ್ ಸಿಗುವ ಭರವಸೆಯಿದೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಜನರ ಆಶೋತ್ತರಗಳಿಗೆ ಸ್ವಂದಿಸಿ ಅಭಿವೃದ್ಧಿ  ಕೆಲಸ ಮಾಡುವ ಜನಸೇವಕನಾಗಿ ನಿಮ್ಮ ಸೇವೆ ಮಾಡಲು ಆವಕಾಶ ಕಲ್ಪಿಸಿಕೊಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಪರಮೇಶ್ವರಪ್ಪ. ರೇವಣಸಿದ್ಧಪ್ಪ, ಮಗಾನಹಳ್ಳಿ ಹಾಲಪ್ಪ, ಏಕಾಂತಪ್ಪ, ಶೇಖರಪ್ಪ, ಮಂಜುನಾಥ್, ಕುಮಾರ, ನಿಂಗಪ್ಪ, ಕಬ್ಬಾರ್ ಶೇಖರಪ್ಪ, ಮತ್ತು ಅನೇಕ ಮುಖಂಡರು ಗ್ರಾಮ ಪಂಚಾಯತಿ ಅಧ್ಯಕ್ಷರು  ಸದಸ್ಯರು ಹಾಗೂ ಅನೇಕ ಮುಖಂಡರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You missed

error: Content is protected !!