ಜಗಳೂರು ಸುದ್ದಿ  

 ದಶಾವತಾರ  ಜನ್ಮವೆತ್ತಿ ಶ್ರೀ ಕೃಷ್ಣ ಪರಮಾತ್ಮ ಅವತಾರ ಪುರುಷನಾಗಿದ್ದು, ಶ್ರೀ ಕೃಷ್ಣ ಜಗತ್ತಿಗೆ ಉತ್ತಮ ಸಂದೇಶಗಳನ್ನು ಸಾರಿದ್ದಾನೆ  , ಅವರ  ಸಂದೇಶಗಳು ಸರ್ವಕಾಲಕ್ಕೂ  ಉಪಯುಕ್ತವಾಗಿವೆ.ಕಷ್ಟ ಬಂದಾಗ ನೆನೆದರೆ ಕಷ್ಟಗಳು ಕಳೆದು ಹೋಗುತ್ತವೆ  ಎಂದು  ದಿವ್ಯ ಸಾನಿದ್ಯದಲ್ಲಿ   ಶ್ರೀ ಕೃಷ್ಣ ಯಾದವನಂದ ಸ್ವಾಮಿಜಿ  ಆಶಿರ್ವಾಚನ ನೀಡಿದರು 

Editor m rajappa vyasagondanahalli

By shukradeshenews Kannada | online news portal |Kannada news online  august 31 

By shukradeshenews | published on September 7 

ತಾಲ್ಲೂಕು ಯಾದವ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ, ಶ್ರೀಕೃಷ್ಣ ಜಯಂತಿ ಜನಾಷ್ಟಮಿ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಶಾಸಕರು ಸಮಾಜದ ಬಾಂಧವರು ವಿವಿಧ ಗಣ್ಯರು ಭಾಗವಹಿಸಿ ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಸಾಕ್ಷಿಯಾದರು ಬೆಳ್ಳಿ ಸಾರೋಟದಲ್ಲಿರುವ ಶ್ರೀ ಕೃಷ್ಣ ನ ಭಾವಚಿತ್ತಕ್ಕೆ ಪೂಜಿಸಿ ಪುಷ್ಪಾರ್ಚನೆ ಮಾಡಿ   ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹೊರಟ ಮೆರವಣಿಗೆ ಗಾಂಧಿ ವೃತ್ತದಲ್ಲಿ ಮೊಸರು ಗಡಿಗೆ ಹೊಡೆಯುವ ಮೂಲಕ ಮೆರವಣಿಗೆ ಸಾಗಿತು. ನಂತರ ಪಟ್ಟಣದ ವೀರಶೈಮ ಕಲ್ಯಾಣ ಮಂಟಪದಲ್ಲಿ  ಕಾರ್ಯಕ್ರಮ   ವಿದ್ಯುಕ್ತವಾಗಿ ದೀಪಾ ಬೆಳಗಿಸುವ ಮೂಲಕ  ಕಾರ್ಯಕ್ರಮವನ್ನ   ಉದ್ಘಾಟಿಸಲಾಯಿತು.  

 . ಸರ್ವೇಜನ ಸುಕಿನೋ ಭವಂತು ಎಂಬ ಮಾತನ್ನು ಸನಾತನ ಧರ್ಮ ತಿಳಿಸಿಕೊಡುತ್ತದೆ.  ಭಗವಂತನಿಂದ ಸೃಷ್ಠಿಯಾದ ಸಮಾಜದಲ್ಲಿ ಶ್ರೀಕೃಷ್ಣ ಅವತಾರವೆತ್ತಿದ್ದಾನೆ. ಸಮಾಜದಲ್ಲಿ ಧರ್ಮ ನಶೀಸಿಹೋಗುವವಾಗ ಧರ್ಮ ರಕ್ಷಣೆಗೆ ಹಾಗೂ ದುಷ್ಟರಿಗೆ ಶಿಕ್ಷೆ ನೀಡಲು ಹಾಗೂ ಶಿಷ್ಟರನ್ನು ರಕ್ಷಣೆ ಮಾಡಲು ಮತ್ತೆ ಹುಟ್ಟುವುದಾಗಿ ಶ್ರೀಕೃಷ್ಣ ಜನ್ಮವೆತ್ತುವುದಾಗಿ ಭಗವತ್ಗೀತೆಯಲ್ಲಿ ತಿಳಿಸಿರುವುದು ನಮಗೆಲ್ಲಾ ತಿಳಿದಿದೆ.ಜಾತಿಗಳನ್ನು ಮರೆತು ನಾವು ಸೇವೆ ಮಾಡಲು ಮುಂದಾಗಬೇಕು .ಬಹುತೇಕ ರಾಜಕಾರಣಿಗಳು ಅಧಿಕಾರದ ಲಾಲಸೆಗೆ ಒಳಗಾಗಿ ಅಧಿಕಾರ ವ್ಯಾಮೋಹವೆ ಹೆಚ್ಚು ಆದರೆ ಕ್ಷೇತ್ರದ ಶಾಸಕ ಬಿ ದೇವೆಂದ್ರಪ್ಪರವರು ಅವರ ಶಾಸಕರ ಅವಧಿ ಮುಗಿದ ನಂತರ ನಾನು ಸನ್ಯಾಸಿ ಆಗುವೆ ಎಂದಿದ್ದಾರೆ ಅವರಿಗೆ ಅಧಿಕಾರದ ವ್ಯಾಮೋಹವಿಲ್ಲ ಅವರು ಅದೃಷ್ಟದ ಶಾಸಕರು ಎಂದು ಬಣ್ಣಿಸಿದರು‌.

 ನಮ್ಮ ಯಾದವ  ಸಮಾಜದ ಬಾಂದವರು ಮಹಾತ್ಮ ನ  ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.. ಜಗಳೂರು ಪಟ್ಟಣದಲ್ಲಿ ನಮ್ಮ ಬಹುದಿನದ ಬೇಡಿಕೆ ನಮ್ಮ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಪ್ರಾರಂಭಿಸಲು ಮತ್ತು ಸಮುದಾಯ ಭವನ ನಿರ್ಮಿಸಲು ಈಗಾಗಲೆ ಸ್ಥಳ ಗುರುತಿಸಲಾಗಿದ್ದು  ಕ್ಷೇತ್ರದ ಶಾಸಕರು ಅನುದಾನ ಕಲ್ಪಿಸುವಂತೆ ತಿಳಿಸಿದರು. .ಶ್ರೀ ಕೃಷ್ಣ ಯಾದವನಂದ ಸ್ವಾಮೀಜಿ

ಈ ವೇಳೆ.   

 ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಮಾತನಾಡಿ ಶ್ರೀಕೃಷ್ಣ ವಂಶಸ್ಥರೆ  ಯಾರು ಯಾದವರು ಕಷ್ಠದಲ್ಲಿ ಆದವರೆ ಯಾದವರು ಎಂದು ಬಣ್ಣಿಸಿದರು . ಶ್ರೀ ಕೃಷ್ಣನು ಮಾನವರಿಗೆ ಉತ್ತಮ ಜೀವನ ಸಂದೇಶಗಳನ್ನು ನೀಡಿದ್ದು, ಧರ್ಮವನ್ನು ರಕ್ಷಿಸುವ ಕುರಿತು ಹಾಗೂ ಕರ್ತವ್ಯ ಪಾಲನೆ ಹಾಗೂ ಹಲವು ಸಂದೇಶಗಳನ್ನು ಬೋದಧಿಸಿರುತ್ತಾರೆ. ಎಂಬ ವಿಚಾರವನ್ನು ಜಗತ್ತಿಗೆ ಸಾರಿದ ಕೀರ್ತಿ ಅವರಿಗೆ ಸಲ್ಲುತ್ತಿದೆ.ಜಗದ ನೀಯಮ ಪರಿವರ್ತನೆ ನೀಯಮವಾಗಿದ್ದು 10 ಅವತಾರಗಳನ್ನು ಎತ್ತಿದ ಶ್ರೀಕೃಷ್ಣ ತ್ರೇತಾಯುಗದಲ್ಲಿ ದ್ವಾಪರಯುಗದಲ್ಲಿ ಕಲಿಯುಗದಲ್ಲಿ ಯುಗ ಯುಗದಲ್ಲೂ ಸಹ ಧರ್ಮಾ ರಕ್ಷಣೆಗಾಗಿ ಅವತಾರಗಳಲ್ಲಿ ಈ ಲೋಕಕ್ಕೆ ಬಂದರು ನಾನು ಯಾರ ಮೇಲೆಯು ಕೂಡ ದ್ವೇಷವಿಲ್ಲ  ಕ್ಷೇತ್ರ ಅಭಿವೃದ್ಧಿಗಾಗಿ  ಕ್ಷೇತ್ರದ ಎಲ್ಲಾ  ಮಾಜಿ ಶಾಸಕರುಗಳ ಸಲಹೇ ಸೂಚನೆಗಳುನ್ನು ಪಡೆದು ಮಾದರಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಬದ್ದವಾಗಿದ್ದೆನೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ. ಈ ಯೋಜನೆಗಳಿಗೆ ಬಹುತೇಕ ಅನುದಾನ ವ್ಯಯ ಮಾಡಿದ್ದು ಯಾದವ .ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಅನುದಾನ ಕಲ್ಪಿಸಿ ಸಮುದಾಯ ಭವನ ಸೇರಿದಂತೆ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವೆ ಎಂದು ಭರವಸೆ ನೀಡಿದರು. ನನ್ನ ಶಾಸಕರ ಅಧಿಕಾರಾವಧಿ ಮುಗಿದ ನಂತರ  ನಾನು ಸನ್ಯಾಸಿ ಆಶ್ರಮ ಸ್ವಿಕರಿಸುವೆ ಎಂದು ತಿಳಿಸಿದರು.

 ಮಾಜಿ ಶಾಸಕ ಹೆಚ್ ಪಿ ರಾಜೇಶ್ ಮಾತನಾಡಿ  ಯಾದವ ಸಮುದಾಯದಲ್ಲಿ  ಸಂಘಟನೆ ಕೊರತೆಯಿದೆ .ಸಮಾಜದಲ್ಲಿ ಸಮುದಾಯವು ಕೂಡ ಆರ್ಥಿಕವಾಗಿ .ರಾಜಕೀಯವಾಗಿ .ಸಾಮಾಜಿಕವಾಗಿ .ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಾಗಿದೆ.  ಮೌಡ್ಯತೆ ಕಂದಚಾರಗಳು ದೂರವಾಗಲು ಸಮಾಜದವರು ಜಾಗೃತಿ ಮೂಡಿಸಲು ಅಗತ್ಯವಾಗಿ ಮುಂದಾಗಬೇಕು. ಸಮಾಜದ ಸ್ವಾಮೀಜಿಗಳು ಆಗಮಿಸಿದ ಸಂದರ್ಭದಲ್ಲಿ ನಿರುತ್ಸಾಹದ ತೋರದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಕೃಷ್ಣ ಜನಾಷ್ಠಮಿಗೆ ಭಾಗವಹಿಸುವಂತೆ ಸಲಹೇ ನೀಡಿದರು. 

ಈ ಸಂದರ್ಭದಲ್ಲಿ  ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ ಪಾಲಯ್ಯ .ಸಂಸದರ ಪುತ್ರ ಜಿ ಎಸ್ ಅನಿತಾಕುಮಾರ್..ವಿಧಾನ ಪರಿಷತ್ ಮಾಜಿ ಸದಸ್ಯರಾದ ಜಯಮ್ಮ ಬಾಲರಾಜ್.ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಷಂಷೀರ್ ಆಹಮದ್.ಮಾಜಿ ಅದ್ಯಕ್ಷ ತಿಪ್ಪೇಸ್ವಾಮಿ ಗೌಡ.ಯಾದವ ಸಮಾಜದ ಅದ್ಯಕ್ಷ ಕೃಷ್ಣ ಮೂರ್ತಿ.ಮುಖಂಡ ಕಲ್ಲೇಶ್ ರಾಜ್ ಪಟೇಲ್.ಮಾಜಿ ಸಂಸದ ಚನ್ನಯ್ಯ ಒಡೆಯರ್ ಪುತ್ರ ಶಿವಕುಮಾರ್ ಒಡೆಯರ್.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನುರ್ದೇಶಕ ಬಿ ಮಹೇಶ್.  .ಕಾಡುಗೊಲ್ಲ ಯುವ ಸೇನೆ ಅದ್ಯಕ್ಷ ಇಂದ್ರೇಶ್.ಪಪಂ ನಾಮನಿರ್ದೇಶಿತ ಸದಸ್ಯ ಶಿವಣ್ಣ.ಮುಖಂಡ ಬಡಪ್ಪ. ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್.ಮುಖಂಡ ತಿಪ್ಪೇಸ್ವಾಮಿ. ತಾಪಂ ಮಾಜಿ ಸದಸ್ಯ ಕುಬೇಂದ್ರಪ್ಪ..ಯಾದವ ಸಮಾಜದ ಮುಖಂಡ ಜೀವಣ್ಣ. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!