Editor m rajappa vyasagondanahalli
By shukradeshenews Kannada | online news portal |Kannada news online august 31
By shukradeshenews | published on September 9
ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೇಟ್ ಸಿಗುವ ವಿಶ್ವಾಸವಿದೆ:ಶಿವಕುಮಾರ್ ಒಡೆಯರ್
ಜಗಳೂರು ಸುದ್ದಿ
:ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವರಿಷ್ಠರು ನನಗೆ ಟಿಕೇಟ್ ಕೊಡುವ ವಿಶ್ವಾಸ ನನಗಿದೆ ಎಂದು ಟಿಕೇಟ್ ಆಕಾಂಕ್ಷಿ ಲೋಕೋಪಯೋಗಿ ಇಲಾಖೆ ನಿವೃತ್ತ ಇಂಜಿನಿಯರ್ ಶಿವಕುಮಾರ್ ಒಡೆಯರ್ ಸಮಾಲೋಚನೆ ಸಭೆಯಲ್ಲಿ ತಿಳಿಸಿದರು..
ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಅವರು ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಸಮಾಲೋಚನಾ ಸಭೆ ನಡೆಸಲಾಗಿದ್ದು ಮತದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯ ಕಾಂಗ್ರೆಸ್ ಪಕ್ಷದ ವರಿಷ್ಠರು ಟಿಕೇಟ್ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮ ಕುಟುಂಬದ ಸದಸ್ಯರುಗಳ ಒಮ್ಮತದ ನಿರ್ಧಾರದೊಂದಿಗೆ ನಾನು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಆಕಾಂಕ್ಷಿಯಾಗಿರುವೆ.ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ .ಜಿಲ್ಲೆಯ ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಶಾಸಕರಾದ ಬಿ.ದೆವೇಂದ್ರಪ್ಪ, .ಮಾಯಕೊಂಡ ಶಾಸಕ ಬಸವಂತಪ್ಪ .ವಿವಿಧ ಶಾಸಕರುಗಳು ,ಶಾಂತನಗೌಡ, ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ,,ಹಾಗೂ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ,ಹಾಗೂ ಕೆಲ ಮಠಗಳ ಸ್ವಾಮೀಜಿಗಳು ನಮಗೆ ಬೆಂಬಲ ಸೂಚಿಸಿದ್ದಾರೆ.ನಮ್ಮ ತಂದೆ ಮಾಜಿ ಸಂಸದ ಚನ್ನಯ್ಯ ಒಡೆಯರ್ ಅವರೇ ನನಗೆ ಸ್ಪೂರ್ತಿ ಅವರ ಪಾರದರ್ಶಕ ಆಡಳಿತ ಅಭಿವೃದ್ದಿಯ ಗುರುತರ ಹೆಜ್ಜೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು.ಜಿಲ್ಲೆಯ ಜನತೆ ಜಾತ್ಯಾತೀತವಾಗಿ ಇಂದಿಗೂ ನಮ್ಮೊಂದಿಗೆ ಒಡನಾಟ ಹೊಂದಿದ್ದಾರೆ ಎಂದು ತಿಳಿಸಿದರು.
ಹಿರಿಯ ಮುಖಂಡ ಉದಯಶಂಕರ್ ಒಡೆಯರ್ ಮಾತನಾಡಿ,ನಾನು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಯಾಗಿದ್ದೆ.ಟಿಕೇಟ್ ಸಿಗಲಿಲ್ಲ.ಈ ಬಾರಿ ನನಗೆ ವಯಸ್ಸಾದ ಹಿನ್ನೆಲೆ.ನನ್ನ ಸಹೋದರ ಪ್ರಬಲ ಆಕಾಂಕ್ಷಿಯಾಗಿದ್ದು ಸರ್ವರೂ ಕೈಜೋಡಿಸಿ ಎಂದರು.
ಸಂದರ್ಭದಲ್ಲಿ ಗಿರೀಶ್ ಒಡೆಯರ್, ಕಾಂಗ್ರೆಸ್ ಮುಖಂಡರಾದ ಅಜೀಮ್ ಶಾಬ್,ಮಹಬೂಬ್ ಸಾಬ್,ನೂರುಲ್ಲಾ,ಅತಾವುಲ್ಲಾ,ವಕೀಲ ಪಂಪಣ್ಣ,ಬಿಳಿಚೋಡು ಮಹೇಶ್ ,ಹಾಲಪ್ಪ,ಧನ್ಯಕುಮಾರ್,ವೀರಭದ್ರೇಶ್ವರ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್,ರಂಗಪ್ಪ,ಸೇರಿದಂತೆ ಗ್ರಾ.ಪಂ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯರುಗಳು ಗ್ರಾಮಸ್ಥರು ಭಾಗವಹಿಸಿದ್ದರು.