ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Editor m rajappa vyasagondanahalli

By shukradeshenews Kannada | online news portal |Kannada news online  august 31 

By shukradeshenews | published on September 10

ಕಾನ ಹೊಸಹಳ್ಳಿ: ಪಟ್ಟಣದ ಎಸ್.ಎ.ಪಿ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ಪಿ ಎಸ್ ಶೇಖರಪ್ಪ ಮುಖ್ಯ ಗುರುಗಳು ವಹಿಸಿ ಮಾತನಾಡಿದರು ಯುವಜನತೆಯಲ್ಲಿ ದುಶ್ಚಟಗಳನ್ನು ದೂರ ಮಾಡಿ ದುಶ್ಚಟ ಮುಕ್ತ ಸಮಾಜ, ಆರೋಗ್ಯವಂತ ಭಾರತವನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಇಂತಹ ಮಾದಕ ವ್ಯಸನದಿಂದ ಸಮಾಜ ಮುಕ್ತವಾಗಬೇಕಾದರೆ ಮೊದಲು ತನ್ನನ್ನು ತಾನು ವ್ಯಸನದಿಂದ ದೂರವಿರುವಂತೆ ಮನಸ್ಸನ್ನು ಹತೋಟಿಯಲ್ಲಿಡಬೇಕು. ಇದರಿಂದ ಮಾತ್ರ ಇಡೀ ಸಮಾಜವನ್ನು ಸ್ವಾಸ್ಥ್ಯ ಸಮಾಜವನ್ನಾಗಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು..

ಈ ವೇಳೆ ಮಾದಕ ದ್ರವ್ಯಗಳ ಇಂದಾಗುವ ಮಾದಕ ವಸ್ತು, ದುಶ್ಚಟಾಗಳಿಂದ ಅರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಒಂದು ಕಿರುಚಿತ್ರದ ಮೂಲಕ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಎಸ್ ಶ್ವೇತಾ ವಿದ್ಯಾರ್ಥಿ ನೆರವೇರಿಸಿದರು, ಜಿ ಬಿ ವೀರಭದ್ರಪ್ಪ ವಿಜ್ಞಾನ ಶಿಕ್ಷಕರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಟಿ.ಎಸ್ ಆನಂದ್, ಉಪನ್ಯಾಸಕರಾದ ಅಜ್ಜನಗೌಡ್ರು, ನಾಗಭೂಷಣ್ ಹಾಗೂ ಮಹಾಂತೇಶ್ ಕೃಷಿ ಅಧಿಕಾರಿಗಳು, ಅಂಜಿನಪ್ಪ, ಪವನ್ ವಿ.ಎಲ್.ಇ ಸೇವಾ ಪ್ರತಿನಿಧಿ, ರೇಣುಕಮ್ಮ ಸೇವಾ ಪ್ರತಿನಿಧಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!