ಪಟ್ಟಣ ಪಂಚಾಯಿತಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ.
ಜಗಳೂರು ಸುದ್ದಿ:ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ ಮಾತನಾಡಿ,ಸ್ವಾತಂತ್ರ್ಯಪೂರ್ವದಿಂದಲೂ ದೇಶಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ.ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದ ಫಲವಾಗಿ ಮಹಿಳೆಯರು ಶಿಕ್ಷಣದ ಜೊತೆ ಸಮಾಜದ ಮುಖ್ಯವಾಹಿನಿಗೆ ಆಗಮಿಸಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ದಿಗೆ ಕುಟುಂಬದಲ್ಲಿ ಪುರುಷರ ಸಹಕಾರ ಅಗತ್ಯ ಎಂದರು.
ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,ಮಹಿಳೆ ಆಧುನಿಕವಾಗಿ ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಮಾಡಿದ್ದು.ಕೌಟುಂಬಿಕ ಒತ್ತಡದ ಮಧ್ಯೆ,ಮಕ್ಕಳ ಲಾಲನೆ ಪಾಲನೆ ಜೊತೆಗೆ ಪ್ರತಿ ಕ್ಷೇತ್ರದಲ್ಲಿಯೂ ತನ್ನದೇ ಛಾಪು ಮೂಡಿಸಿದ್ದಾಳೆ.ಗೃಹಿಣಿ ಯಿಂದ ಗಗನಸಖಿಯಾಗಿ ಹೊರ ಹೊಮ್ಮಿರುವುದು ಅವರ ಆತ್ಮಸ್ಥೈರ್ಯ,ಸಾಧನೆಯ ಸಂಕಲ್ಪ ಎತ್ತಿಹಿಡಿಯುತ್ತದೆ ಅಲ್ಲದೆ ಇತಿಹಾಸದ ಪುಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ,ಲಕ್ಷ್ಮೀಭಾಯಿ,ಒನಕೆ ಓಬವ್ವನಂತಹ ಧೀಮಂತ ಮಹಿಳೆಯರ ಧೈರ್ಯಶಾಲಿ ಮನೋಭಾವ ಅವಿಸ್ಮರಣೀಯ ಎಂದು ಪ್ರಶಂಸಿಸಿದರು.
ಪ.ಪಂ ಸದಸ್ಯೆ ಮಂಜಮ್ಮ ಮಾತನಾಡಿ,ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಬೇಕು.ಪುರುಷರ ಜೊತೆಗೆ ಮಹಿಳೆಯರು ಆರ್ಥಿಕ ಸಬಲೀಕರಣಕ್ಕೆ ಶ್ರಮ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಪಟ್ಟಣ ಪಂಚಾಯಿತಿಯಲ್ಲಿ ಸೇವೆಗೈಯುತ್ತಿರುವ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಿದರು.
ಸಂದರ್ಭದಲ್ಲಿ ಪಟ್ಟಣಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್,ಸದಸ್ಯರಾದ ಲೋಲಾಕ್ಷಮ್ಮ, ಓಬಳೇಶ್,ಲಲಿತ ಶಿವಣ್ಣ,ಮಹಿಳಾ ಸ್ವಸಹಾಯ ಸಂಘದ ಅಂಬುಜಾ,ಆರೋಗ್ಯ ನಿರೀಕ್ಷಕ ಖಿಫಾಯತ್,ಕಂದಾಯ ನಿರೀಕ್ಷಕ ಮೋಹಿದ್ದೀನ್,ಮುಖಂಡರಾದ ಓಬಳೇಶ್,ಸೇರಿದಂತೆ ಇದ್ದರು.