ಜಗಳೂರು ತಾಲ್ಲೂಕುನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಅಧಿಕೃತವಾಗಿ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿ ರೈತರಿಗೆ ಪರಿಹಾರ ಮತ್ತು ಜಾನುವಾರುಗಳಿಗೆ ಗೋಶಾಲೆ ಮತ್ತು ಕುಡಿಯುವ ನೀರು ಒದಗಿಸಿ ರೈತರ ಸಂಕಷ್ಠಕ್ಕೆ ಸ್ವಂದಿಸುತ್ತಿರುವುದು ಶ್ಲಾಘನೀಯ. ಬರ ಪರಿಸ್ಥಿತಿ ವೇಳೆಯಲ್ಲಿ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅತ್ಯಂತ ಪ್ರಯೋಜಕಾರಿಯಾಗಲಿವೆ ಶಾಸಕ ಬಿ ದೇವೆಂದಪ್ಪ.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 14
ಜಗಳೂರು ತಾಲೂಕುನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿ ಈ ಬಾಗದ ರೈತರ ನೆರವಿಗೆ ಸಹಾಯಸ್ತ ಚಾಚಿದ್ದು ರೈತರು ನಿಟ್ಟಸಿರು ಬಿಟ್ಟಂತಾಗಿದೆ ಎಂದು ಶಾಸಕ ಬಿ ದೇವೆಂದ್ರಪ್ಪ ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೆಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಾರಿ ನಮ್ಮ ತಾಲ್ಲೂಕಿನಲ್ಲಿ ಮಳೆ ಬೆಳೆಯಿಲ್ಲದೆ ರೈತರು ಕಂಗಲಾಗಿದ್ದರು ಆದ್ದರಿಂದ ನಾವು ಕಳೆದ ದಿನಗಳಲ್ಲಿ ತಾಲ್ಲೂಕಿನ ರೈತರ ಜಮೀನಗಳಿಗೆ ತೆರಳಿ ಬರ ಸ್ಥಿತಿಗತಿ ಬಗ್ಗೆ ನಮ್ಮ ಪ್ರದೇಶದ ತೀರ್ವತರ ಬರ ಸಮೀಕ್ಷೆ ನಡೆಸಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ನೀಡಲಾಗಿತ್ತು . ಈ ವರ್ಷದ ಮುಂಗಾರು ಅಂಗಾಮಿನ ಮಳೆ ಶೇ 75 ರಷ್ಟು ಮಳೆ ಪ್ರಮಾಣ ಕೊರತೆಯಿಂದ ಸಂಪೂರ್ಣವಾಗಿ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗಿಹೋಗಿವೆ .ಇದೀಗ ಬರ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಸಜ್ಜಾಗಿದ್ದು ಅಧಿಕೃತವಾಗಿ ಮೊದಲ ಪಟ್ಟಿಯಲ್ಲಿ ಆದೇಶ ಹೊರಡಿಸಿ ತಾಲ್ಲೂಕುನ್ನು ತೀವ್ರ ಬರಪೀಡಿತ ಎಂದು ಘೋಷಿಸಿದೆ ಎಂದು ಸರ್ಕಾರದ ಸುತ್ತೊಲೆ ಕಡತ ಹಿಡಿದು ಶಾಸಕರು ಸ್ವಷ್ಟನೆ ನೀಡಿದರು.
ತಾಲ್ಲೂಕಿನ ರೈತರು ಸಂಕಷ್ಟದಲ್ಲಿದ್ದು ಅದಿಕಾರಿಗಳು ಬರ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಸರ್ಕಾರಿ ಸೌಲಭ್ಯಗಳುನ್ನು ಒದಗಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ . ಜನಜಾನುವಾರುಗಳಿಗೆ ಕುಡಿಯುವ ನೀರು.ಗೋಶಾಲೆ ದುಡಿಯುವ ಕೈಗಳಿಗೆ ನರೇಗಾ ಯೋಜನೆಡಿಯಲ್ಲಿ ಖಾತ್ರಿ ಕೆಲಸ ಬೆಳೆ ನಷ್ಟ ಪರಿಹಾರ ಒದಗಿಸಿ ಜನರ ಸಂಕಷ್ಠಗಳಿಗೆ ಸ್ವಂದಿಸಿ ಅಗತ್ಯ ಸೇವೆ ಒದಗಿಸಬೇಕು ಎಂದು ತಿಳಿಸಿದರು.
ಕ್ಷೇತ್ರದ ಮಹತ್ವದ ಯೋಜನೆ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಚುರುಕು ನೀಡಲು ಶೀಘ್ರವೆ ಕಾಮಗಾರಿ ವೀಕ್ಷಣೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಬರಪರಿಸ್ಥಿತಿಯನ್ನ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳ ಪಾತ್ರ ಬಹುಮುಖ್ಯ .ನಮ್ಮ ತಾಲ್ಲೂಕು ಕೇಂದ್ರ ಸ್ವಾತಂತ್ರ್ಯ ಪೂರ್ವದಿಂದಲೂ ಸಹ ಬರದ ಬವಣೆಗೆ ತುತ್ತಾಗುತ್ತಾ ಬಂದಿದೆ . ನಮ್ಮ ರೈತರು ಕೂಡ ಬರ ಪರಿಸ್ಥಿತಿಗೆ ಅನುಗುಣವಾಗಿ ಗಟ್ಟಿ ಜೀವನ ನಡೆಸುತಾ ಬಂದಿದ್ದಾರೆ ಇದನ್ನ ಮನಗಂಡ ಸರ್ಕಾರಗಳು 57 ಕೆರೆ ತುಂಬಿಸುವ ಯೋಜನೆ ಅಪ್ಪರ್ ಭದ್ರ ಯೊಜನೆಯಂತ ಯೋಜನೆಗಳು ಜಾರಿಗೆ ತಂದು ಅನುಷ್ಠಾನ ಮಾಡಿ ಕಾಮಗಾರಿಗಳು ಪ್ರಗತಿಯಲ್ಲಿವೆ ಈ ವಿಶಿಷ್ಟ ಯೋಜನೆಗಳಿಂದ ನಮ್ಮ ಬಾಗದ ರೈತಾಪಿ ವರ್ಗಕ್ಕೆ ಮುಂದಿನ ದಿನಗಳಲ್ಲಿ ವರದಾನವಾಗುವುವು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕರು
ಈ ಸಂದರ್ಭದಲ್ಲಿ ತಹಶೀಲ್ದಾರ್ ಅರುಣ್ ಕಾರಗಿ.ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಷಂಷೀರ್ ಆಹಮದ್. ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥನ್ ಕಿಮಾವತ್.ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟದಯ್ಯ.ಮುಖಂಡರಾದ ಅನೂಪ್ ರೆಡ್ಡಿ.ಪಲ್ಲಾಗಟ್ಟೆ ಶೇಖರಪ್ಪ.ಮಹಮದ್ ಗೌಸ್ ಸೇರಿದಂತೆ ಹಾಜರಿದ್ದರು