ಜಗಳೂರು ಎಸ್ಸಿ ಎಸ್ಟಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನ ಪ್ರಸ್ತಾವನೆ ಓದು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 15
ಜಗಳೂರು ಸುದ್ದಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದಿಂದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸಂಘದ ಪದಾಧಿಕಾರಿಗಳು ಸಾಮೂಹಿಕವಾಗಿ ಓದುವ ಮೂಲಕ ಗೌರವ ಸೂಚಿಸಲಾಯಿತು
ಈ ವೇಳೆ ಸಂಘದ ಗೌರವ ಅಧ್ಯಕ್ಷ ಸಿ.ಬಸವರಾಜ್ ಮಾತನಾಡಿ,ದೇಶದಲ್ಲಿ ರಾಜಪ್ರಭುತ್ವ ನಂತರ ಸರ್ವಾಧಿಕಾರತ್ವ ಆಡಳಿತಕ್ಕೆ ಸಂವಿಧಾನ ಮುಕ್ತಿ ನೀಡಿದ್ದು.ಸಾರ್ವಭೌಮ ರಾಷ್ಟ್ರವಾಗಿರುವ ಭಾರತ ದೇಶದಲ್ಲಿ ಸರ್ವಧರ್ಮ,ಸಮಾಜವಾದಿ,ಜಾತ್ಯಾತೀತ,ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು..
ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಸಂವಿಧಾನ ಬದ್ದ ಹಕ್ಕುಗಳಿಗಾಗಿ,ಸಾಮಾಜಿಕ,ಆರ್ಥಿಕ ಭದ್ರತೆ ಕಾಪಾಡಲು ಸಂಘ ಶ್ರಮಿಸಲಿದೆ ರಾಜ್ಯವ್ಯಾಪಿ ಸಂಘದ ವಿಸ್ತರಣೆಗೆ ಪದಾಧಿಕಾರಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಂಘದ ಕಾನೂನು ಸಲಹೆಗಾರ ತಿಪ್ಪೇಸ್ವಾಮಿ ಮಾತನಾಡಿ,ದೇಶದಲ್ಲಿ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶ,ಸೂಕ್ತ ಸ್ಥಾನಮಾನ,ವ್ಯಕ್ತಿಗೌರವ ರಾಷ್ಟ್ರದ ಏಕತೆಯನ್ನು ಸಾರಿದೆ.ಬದ್ದರಾಗಿ ಸಂವಿಧಾನಕ್ಕೆ ಗೌರವ ಸಮರ್ಪಣೆಗೆ ಸಂಕಲ್ಪಗೈಯಬೇಕು ಎಂದರು.
ರಾಜ್ಯ ಉಪಾಧ್ಯಕ್ಷ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ಡಾ.ಬಿ.ಆರ್ ಅಂಬೇಡ್ಕರ್ ಅವರ ಅವಿರತ ಶ್ರಮದಿಂದ ಸಂವಿಧಾನ ರಚನೆಯಾಗಿ ಮೂಲಭೂತ ಹಕ್ಕುಗಳು, ಮತ್ತು ಕರ್ತವ್ಯಗಳನ್ನು ಎತ್ತಿ ಹಿಡಿಯಲಾಗಿದೆ.ಇದರಿಂದ ಪ್ರತಿಯೊಬ್ಬರಿಗೂ ನ್ಯಾಯ,ಅಭಿವ್ಯಕ್ತಿ,ವಿಶ್ವಾಸ,ಧರ್ಮಶ್ರದ್ದೆ ಲಭಿಸಿದೆ.ಧರ್ಮ,ಲಿಂಗತಾರತಮ್ಯ,ತೊಲಗಿಸಿ ಸಮಾನತ ದೃಷ್ಠಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕಮ್ಮನಹಟ್ಟಿ ಮಂಜುನಾಥ್ ಮಾತನಾಡಿ,ಸಮಾಜದಲ್ಲಿ ಶೋಷಣೆಮುಕ್ತ ಸಮಾಜಕ್ಕೆ ಸಂವಿಧಾನ ಮೂಲಮಂತ್ರವಾಗಿದೆ.ಕೆಲ ಮೂಲಭೂತವಾದಿಗಳಿಂದ ಸಂವಿಧಾನ ವಿರೋಧಿ ಮನಸ್ಥಿತಿ ಬದಲಾಗಬೇಕಿದೆ.ಮುಂದಿನ ದಿನಗಳಲ್ಲಿ ಸಂಘದಿಂದ ತಾಲೂಕಿನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನ ಓದು ಕಾರ್ಯಕ್ರಮದಡಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು..
ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಧನ್ಯಕುಮಾರ್ ಎಚ್.ಎಂ.ಹೊಳೆ,ರಾಜ್ಯಸಂಘಟನ ಕಾರ್ಯದರ್ಶಿಗಳಾದ ಮಾದಿಹಳ್ಳಿ ಮಂಜಪ್ಪ,ಸಿದ್ದಮ್ಮನಹಳ್ಳಿ ಬಸವರಾಜ್,ಖಜಾಂಚಿ ಬಿ.ಮಾರುತಿ,. ಸೇರಿದಂತೆ ಹಾಜರಿದ್ದರು.