Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 17
ಪ್ರಾಣಿ ಸಂಕುಲಕ್ಕೆ ಆಮ್ಲಜನಕ ಅತ್ಯವಶಕ:ಶಾಸಕ ಬಿ.ದೇವೇಂದ್ರಪ್ಪ
ಜಗಳೂರು ಸುದ್ದಿ:ಪ್ರಾಣಿ ಸಂಕುಲಕ್ಕೆ ಆಮ್ಲಜನಕ ಅವಶ್ಯಕವಾಗಿದ್ದು.ಪ್ರತಿಯೊಬ್ಬರೂ ಪ್ರಕೃತಿಯಲ್ಲಿ ಹಾನಿಕಾರಕ ವಿಷಯುಕ್ತ ಗಾಳಿ ನಿಯಂತ್ರಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣ ಪಂಚಾಯಿತಿ ವತಿಯಿಂದ ಸಂತೆಮೈದಾನದಲ್ಲಿ ಸ್ವಚ್ಛತಾ ಲೀಗ್ ಸೀಜನ್ -2 ಕಾರ್ಯಕ್ರಮದಡಿ ಸ್ವಚ್ಛತಾ ದಿನಾಚರಣೆ ಹಾಗೂ ವಿಶ್ವ ಓಝೋನ್ ಪರದೆ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಆಕ್ರಮಣ ಸಂದರ್ಭದಲ್ಲಿ ಮುಂಜಾಗ್ರತೆ ಕೊರತೆಯಿಂದ ಹಾಗೂ ಪ್ರಕೃತಿ ವೈಪರಿತ್ಯದಿಂದ ಕೃತಕ ಆಮ್ಲಜನಕ ಸಮರ್ಪಕವಾಗಿ ಪೂರೈಕೆ ಮಾಡುವಲ್ಲಿ ವಿಫಲವಾದ್ದರಿಂದ ಸಾಕಷ್ಟು ಕೋವಿಡ್ ಪೀಡಿತ ರೋಗಿಗಳು ಸಾವನ್ನಪ್ಪಿದರು.ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಆಧುನಿಕ ತಂತ್ರಜ್ಞಾನದ ಅನ್ವೇಷಣೆಯಿಂದ ಚಂದ್ರಯಾನ,ಮಂಗಳಯಾನಗಳು ನಡೆದಿವೆ.ಆದರೆ ಜನಸಂಖ್ಯಾ ಸ್ಫೋಟದಿಂದ ಶುದ್ದಗಾಳಿ ಲಭ್ಯವಾಗದೆ ಮನುಷ್ಯ ಆಪತ್ತಿನಲ್ಲಿದ್ದಾನೆ.ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದರು.
ಶಾಸಕರು
ಶಾಲಾಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಓಝೋನ್ ಪರದೆ ಸಂರಕ್ಷಣೆ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ,ತೃತೀಯ ಬಹುಮಾನಗಳನ್ನು ವೈಯಕ್ತಿಕವಾಗಿ ಅದ್ದೂರಿ ಕಾರ್ಯಕ್ರಮವನ್ನು ಸಂತೆಮೈದಾನದಲ್ಲಿಯೇ ಆಯೋಜಿಸಿ ವಿತರಿಸಲಾಗುವುದು ಎಂದು ತಿಳಿಸಿದರು.
ಕುಹಕ ನಗುವಿಗೆ ಕಿವಿಗೊಡುವುದಿಲ್ಲ:ನಾನು ಪೌರಕಾರ್ಮಿಕರ ಸೇವೆಗೆ ನೈತಿಕ ಬೆಂಬಲ ವ್ಯಕ್ತಪಡಿಸುವೆ.ಶಾಸಕ ಪೌರಕಾರ್ಮಿಕರ ಜೊತೆ ಕಸಗುಡಿಸುತ್ತಾರೆ.ತಿಂಡಿ ಸೇವಿಸುತ್ತಾರೆ ಎಂಬ ಕುಹಕ ನಗುವಿಗೆ ಕಿವಿಗೊಡುವುದಿಲ್ಲ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದರು.
ಎನ್ ಎಂ ಕೆ ಸಂಸ್ಥೆಯ ಕಾರ್ಯದರ್ಶಿ ಲೊಕೇಶ್ ಮಾತನಾಡಿ,ಸೂರ್ಯನಿಂದ ಆಲ್ಟ್ರಾ ವೊಲ್ಟಾ ನೇರವಾದ ಕಿರಣಗಳು ಭೂಮಿಗೆ ಹಾಗೂ ಓಝೋನಗ ಪರದೆಗೆ ಪ್ರತಿಫಲನಗೊಂಡರೆ ಪ್ರಾಣಿಗಳ ಬದುಕಿಗೆ ಪರಿಣಾಮ ಬೀರುತ್ತದೆ.ಅಲ್ಲದೆ ಮನುಷ್ಯನ ಚರ್ಮಕ್ಕೆ ಪರಿಣಾಮ ಬೀರುತ್ತದೆ.ವಾಹನಗಳಿಂದ ಬಿಡುಗಡೆಯಾಗುವ ಮಾರಕ ಅನಿಲಗಳಿಂದ ರಂಧ್ರಗಳು ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಪ.ಪಂ ಸದಸ್ಯರಾದ ರವಿಕುಮಾರ್,ರಮೇಶ್ ರೆಡ್ಡಿ,ಶಕೀಲ್ ಅಹಮ್ಮದ್,ಲುಕ್ಮಾನ್ ಖಾನ್,ಮಂಜುನಾಥ್,ನಾಮನಿರ್ದೇಶಿತ ಸದಸ್ಯ ತಾನಾಜಿ ಗೋಸಾಯಿ,ತಿಪ್ಪೇಸ್ವಾಮಿ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಆರೋಗ್ಯ ನಿರೀಕ್ಷಕ ಖಿಫಾಯತ್,
ಕರವೇ ಸಂಘಟನೆ ತಾಲೂಕು ಅಧ್ಯಕ್ಷ ಮಹಾಂತೇಶ್,ಸೇರಿದಂತೆ ಇದ್ದರು.