Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 17

ಜಗಳೂರು ಸುದ್ದಿ:ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಪ್ರಧಾನಿ ಮೋದಿಜಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಪಕ್ಷದಿಂದ ಹಣ್ಣು ಹಂಪಲು ವಿತರಿಸಲಾಯಿತು.

ಈ ವೇಳೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ವಿಶ್ಚಕ್ಕೆ ಭಾರತ ದೇಶವನ್ನು ಪರಿಚಯಿಸಿದ ಪ್ರಧಾನಿ ಮೋದಿಜಿ ಅವರು ಮೊದಲಿಗರು ಅಲ್ಲದೆ ತಂತ್ರಜ್ಞಾನ,ಶಿಕ್ಷಣ,ಸೇರಿದಂತೆ ವಿವಿಧ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ದಿಯ ಹರಿಕಾರರಾಗಿದ್ದು ಅವರ ಹಬ್ಬದ ಅಂಗವಾಗಿ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದ್ದು‌.ಮೋದಿಜಿ ಅವರ ಆಡಳಿತ ಪ್ರಪಂಚಕ್ಕೆ ಮಾದರಿ ಎಂದು ಬಣ್ಣಿಸಿದರು‌.

ಸಂಪೂರ್ಣ ಬರ ಪೀಡಿತ ಪಟ್ಟಿಗೆ ಜಗಳೂರು ಸೇರ್ಪಡೆಗೊಂಡಿದ್ದು.ಸ್ವಾಗತರ್ಹ ಆದರೆ ರಾಜ್ಯ ಸರಕಾರ ಇಲಾಖೆಯ ನೈಜ ವರದಿ ಅನ್ವಯ ರೈತರಿಗೆ ಬರಪರಿಹಾರ ಒದಗಿಸಲಿ.ತಾಲೂಕಿನ ರೈತರ ಸಮಸ್ಯೆಗಳನ್ನು ಪರಿಹರಿಸಲು ಮನವಿ ಮಾಡಲಾಗುವುದು.ಪಟ್ಟಣದ ನೂತನ ಸರಕಾರಿ ಸರಕಾರಿ ಆಸ್ಪತ್ರೆ ಕಟ್ಟಡಕ್ಕೆ ನನ್ನ ಆಡಳಿತಾವಧಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್,ಪ.ಪಂ ಸದಸ್ಯರಾದ ಪಾಪಲಿಂಗಪ್ಪ,ನವೀನ್ ಕುಮಾರ್,ದೇವರಾಜ್,ಮುಖಂಡರಾದ ಹನುಮಂತಪ್ಪ,ಬಿದರಕೆರೆ ರವಿಕುಮಾರ್,ಪೂಜಾರ್ ಸಿದ್ದಪ್ಪ,ಓಬಳೇಶ್,ವಕೀಲ ಹನುಮಂತಪ್ಪ ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!