ಎಲ್ಲರಿಗೂ ಶಿಕ್ಷಣ….. ಇಪ್ಟಾ ಕಲಾ ತಂಡದಿಂದ ಅಧ್ಬುತ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 25.
ದಾವಣಗೆರೆ ಸಿಎಂ.25
ಶಿಕ್ಷಣ ಎಲ್ಲಾರಿಗೂ ಸಿಗುತ್ತಿಲ್ಲ
ಯಾರಿಗೆ ತಾನೇ ಬೇಡ, ಶಿಕ್ಷಣವಿಲ್ಲದೇ ಏನನ್ನು ಸಾಧಿಸಲು ಸಾಧ್ಯವಿಲ್ಲ, ಅಂತಹ
ಶಿಕ್ಷಣ ಎಲ್ಲಾರಿಗೂ ಸಿಗಬೇಕು ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯದ ಅವರಗೆರೆ ಅಂಬೇಡ್ಕರ್ ಕಾಲೋನಿ, ಎಸ್ ಎಸ್ ಎಂ ನಗರ ಹಾಗೂ ಬೂದಾಳ್ ರಸ್ತೆಯಲ್ಲಿ ಇರುವ ಎಸ್ ಪಿ ಎಸ್ ನಗರದಲ್ಲಿ ಜಿಲ್ಲಾ ಇಪ್ಟಾ ಕಲಾ ತಂಡದ ಕಲಾವಿದರು ಎಲ್ಲರೂ ಶಿಕ್ಷಣವಂತರಾಗಿ, ಮಕ್ಕಳ ನ್ನು ವಿದ್ಯಾವಂತರನ್ನಾಗಿ ಮಾಡಿ ಎಂಬ ಸಂದೇಶ ಸಾರುವ ಬೀದಿ ನಾಟಕ, ಜಾಗೃತಿ ಮೂಡಿಸುವ ಹಲವಾರು ಗೀತೆಗಳನ್ನು ಹಾಡಿದರು
.
ವಯಸ್ಕರ ಶಿಕ್ಷಣ ಈಗ ಬದಲಾಗಿ ಎಲ್ಲರಿಗೂ ಶಿಕ್ಷಣ ಎಂಬ ಸಂದೇಶ ಹೊತ್ತು 15ವರ್ಷ ಮೇಲ್ಪಟ್ಟು ಎಲ್ಲರೂ ಅಕ್ಷರ ಕಲಿತು, ಕಲಿಸುವ,ಓದುವ,ಬರೆವ,ಸುಲಭ ಲೆಕ್ಕಾಚಾರ, ಕೌಶಲ್ಯಾಭಿವೃದ್ಧಿ ಚಟುವಟಿಕೆ ಗಳ ಅಭಿವೃದ್ಧಿ ಪಡಿಸಿ ಜೀವನ ಪರ್ಯಂತ ಕಲಿವ ಆಸಕ್ತಿ, ಆರ್ಥಿಕ ಸಬಲೀಕರಣ ಕಲಿಕೆ ಜೊತೆ ಅರಿವು ಜಾಗೃತಿ ಮೂಡಿಸುವ ಸಮಸಮಾಜದ ನಿರ್ಮಾಣ ಮಾಡಲು ಎಲ್ಲರಿಗೂ ಶಿಕ್ಷಣ ಪಡೆದು ಮುಂದೆ ಬನ್ನಿ ಎಂದು
ಸಂದೇಶ ಸಾರ್ಥಕತೆ ಪಡೆಯುತ್ತದೆ
ಆರಂಭದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಗುರುಸಿದ್ಧ ಸ್ವಾಮಿ, ಸೊಸೈಟಿ ಅಧ್ಯಕ್ಷ ಹೆಚ್ ಎಂ ಮಂಜಪ್ಪ, ದಲಿತ ಸಂಘರ್ಷ ಸಮಿತಿ ಜಯಣ್ಣಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇಪ್ಟಾ ಜಿಲ್ಲಾಧ್ಯಕ್ಷ ಐರಣಿ ಚಂದ್ರು, ಪ್ರಧಾನ ಕಾರ್ಯದರ್ಶಿ ಬಾನಪ್ಪ, ಇಪ್ಟಾ ಗೌರವ ಸಲಹೆಗಾರ ಪುರಂದರ್ ಲೋಕಿಕೆರೆ, ಶಾಂಭವಿ, ರಾಜ್ಯ ಇಪ್ಟಾ ಸಧಸ್ಯ ಸಂಘಟನೆ ಹೆಗ್ಗರೆ ರಂಗಪ್ಪ, ಶಿವಣ್ಣ, ರುದ್ರೇಶ್ ಲೋಕಿಕೆರೆ, ಹಲವರು ಪಾಲ್ಗೊಂಡಿದ್ದರು.