ಕೋಲಾರ ಜಿಲ್ಲಾ ನ್ಯೂಸ್
; ಕಾಂಗ್ರೆಸ್ ಶಾಸಕನಿಗೆ ಸಂಸದ ಮುನಿಸ್ವಾಮಿ ತರಾಟೆ – ಹೊರ ದಬ್ಬಿದ ಎಸ್ಪಿ
Sep 26, 2023 | ರಾಜ್ಯ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 26
ಲೇ ಕಳ್ಳ ನೀನು ; ಕಾಂಗ್ರೆಸ್ ಶಾಸಕನಿಗೆ ಸಂಸದ ಮುನಿಸ್ವಾಮಿ ತರಾಟೆ – ಹೊರ ದಬ್ಬಿದ ಎಸ್ಪಿ
ಕೋಲಾರ : ವೇದಿಕೆ ಮೇಲೆ ಶಾಸಕ ಹಾಗೂ ಸಂಸದರ ನಡುವೆ ಕಾದಾಟ ಬಾಯಿಗೆ ಬಂದಹಾಗೆ ಬೈದಾಡಿಕೊಂಡ ಘಟನೆ ಜನತಾ ದರ್ಶನ ಕಾರ್ಯಕ್ರಮ ವೇದಿಕೆ ಮೇಲೆ ನಡೆದಿದೆ.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ಜಗಳ ನಡೆದಿದೆ.
ಸಭೆಯಲ್ಲಿ ಮಾತನಾಡುತ್ತ. ಸಂಸದ ಮುನಿಸ್ವಾಮಿ, ಸಚಿವರ ಪಕ್ಕದಲ್ಲಿ ಭೂಗಳ್ಳ ಕುಳಿತಿದ್ದಾನೆ ಎಂದು ನಾರಾಯಣಸ್ವಾಮಿ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕ ಆಕ್ರೋಶ ಹೊರ ಹಾಕಿ ಯಾರು ಭೂಗಳ್ಳ ಎಂದು ಅಶ್ಲೀಲ ಪದ ಬಳಕೆ ಮಾಡಿದರು.
ಇದರಿಂದ ಕೋಪಗೊಂಡ ಸಂಸದ ಶಾಸಕರತ್ತ ನುಗ್ಗಿ ಬಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಸದರನ್ನು ತಳಿಕೊಂಡು ಹೊರ ಹೋದರು. ಒಂದು ಸಮಯದಲ್ಲಿ ಪರಿಸ್ಥಿತಿ ಕೈ ಮೀರುವ ವಾತಾವರಣ ನಿರ್ಮಾಣವಾಗಿತ್ತು.