ಜಗಳೂರು:   ಸರ್ಕಾರದಿಂದ ಜನತಾ ದರ್ಶನ ಕಾರ್ಯಕ್ರಮ ಆರಂಭ

ಸರ್ಕಾರ  ಸಂಬಳ ನೀಡುತ್ತಿದೆ ಅಧಿಕಾರಿಗಳು ಬೇಜವಾಬ್ದರಿತನ  ತೋರಿದರೆ ನಾನು ಸಹಿಸುವುದಿಲ್ಲ ಸರ್ಕಾರದ ಕೆಲಸ ದೇವರ ಕೆಲಸ ಸರ್ಕಾರದ  ಸೌಲಭ್ಯಗಳನ್ನು ನಮ್ಮ ಜನತೆಗೆ ಒದಗಿಸಲು ಚುರುಕಾಗಿ ಕೆಲಸ .ಶಾಸಕ ಬಿ ದೇವೆಂದ್ರಪ್ಪ.ಅಧಿಕಾರಿಗಳಿಗೆ ಎಚ್ಚರಿಕೆ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 25.

 ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ  ವಿವಿಧ ಇಲಾಖೆಯ  ಅಧಿಕಾರಿಗಳಿಂದ ತಾಲ್ಲೂಕು ಪಂಚಾಯತ್. ಕೃಷಿ. ತೋಟಗಾರಿಕೆ.ಪಶುಪಾಲನ.ಕಂದಾಯ ಸೇರಿದಂತೆ .ಕುಡಿಯುವ ನೀರು ನೈರ್ಮಲ್ಯ ಇಲಾಖೆ ಲೋಕಪಯೋಗಿ ಇಲಾಖೆ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಬೆಳಿಗ್ಗೆ10.30 ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ 11.30 ಕ್ಕೆ ಆರಂಭವಾಯಿತು‌. ಸಾರ್ವಜನಿಕರಿಂದ ವಿವಿಧ ಅಹವಾಲುಗಳನ್ನು ಸಲ್ಲಿಸಲು ಬಂದಿದ್ದ ಸಾರ್ವಜನಿಕರು ಕಾದು  ಕುಳಿತಿದ್ದರು .ಆದರೆ  ಸರ್ಕಾರದ ಮೊದಲ ಜನತಾ ದರ್ಶನ ಪ್ರಾರಂಭದ ದಿನವೆ ಕೇವಲ 6 ಅರ್ಜಿಗಳು ಸ್ವೀಕೃತವಾದವು ಕಂದಾಯ ಇಲಾಖೆ ಸರಿಯಾದ ರೀತಿ ಜಾಗೃತಿ ಮೂಡಿಸಲು ನಿರಸ ಪ್ರತಿಕ್ರಿಯೆ ಕಂಡು ಬಂದ ವ್ಯಕ್ತವಾಯಿತು.

ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಜನತಾ ದರ್ಶ‌ನ ಕಾರ್ಯಕ್ರಮದಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಕಾರ್ಯಕ್ರಮವನ್ನು ಉದ್ಗಾಟಸಿ ನಂತರ ಮಾತನಾಡಿದರು

ತಾಲ್ಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ‌ ಸೌಲಭ್ಯಗಳನ್ನು ಆರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡಿ .ಪ್ರತಿಯೊಂದು ಸಮಸ್ಯೆಗಳನ್ನು ಸಹ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪರಿಹರಿಸಲು ಸಾದ್ಯವಿಲ್ಲ  .ಕೆಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಅಧಿಕಾರಿಗಳ ಮದ್ಯ ಮತ್ತು ಸಾರ್ವಜನಿಕರ ನಡುವೆ ಸೇತುಬಂಧುವಾಗಿ ನಾವು ಸಂವಿಧಾನ ಬದ್ದವಾಗಿ ಪಾರದರ್ಶಕ ಆಡಳಿತ ನೀಡಲು ಬದ್ದವಾಗಿದ್ದು ಗ್ರಾಮೀಣ ಬಾಗದ ಜನಸಾಮಾನ್ಯರು ತಮ್ಮ ಸಮಸ್ಯೆಗಳು ಯಾವುದೆಯಿದ್ದರು ಮುಕ್ತವಾಗಿ ಕರೆ ಮಾಡಿ ನಾನು ನಿಮ್ಮ ಸೇವಕನಾಗಿ ಸೇವೆ ಮಾಡುವೆ . ತಾಲ್ಲೂಕು ಅಭಿವೃದ್ಧಿಗೆ ಅಧಿಕಾರಿಗಳುನ್ನು  ಚುರುಕುಗೊಳಿಸಿದ್ದೆನೆ.ಪ್ರತಿ ಇಲಾಖೆ ಅಧಿಕಾರಿಗಳು ಸಹ ಸಾರ್ವಜನಿಕ ಸಮಸ್ಯೆಗಳಿಗೆ ಸ್ವಂದಿಸಿ ಅಗತ್ಯ ಸೇವೆ ನೀಡಬೇಕು.

 ಸರ್ಕಾರ ನಿಮಗೆ ಸಂಬಳ ನೀಡುತ್ತಿದ್ದು ಅಧಿಕಾರಿಗಳು ಬೇಜವಾಬ್ದರಿತನ  ತೋರಿದರೆ ನಾನು ಸಹಿಸುವುದಿಲ್ಲ ಸರ್ಕಾರದ ಕೆಲಸ ದೇವರ ಕೆಲಸ ಎಂದು  ಅಗತ್ಯ ಸೌಲಭ್ಯಗಳನ್ನು ನಮ್ಮ ಜನತೆಗೆ ಒದಗಿಸಬೇಕು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಬಾಗದ ಜನರೊಂದಿಗೆ ನಿಕಟ ಸಂಪರ್ಕದಿಂದ ಸೇವೆ ನೀಡಬೇಕು.ಇನ್ನುಮುಂದೆ ನಿಮ್ಮಗಳ ಚಿನ್ನಾಟ ನಡೆಯುವುದಿಲ್ಲ ನಾನು ಜನರಿಗೊಸ್ಕರ್ ಅಧಿಕಾರಿಗಳಿಗೆ ಕಡಕ್ ವಾರ್ನಿಂಗ್ ಮಾಡುವೆ ಎಂದು ಶಾಸಕರು ಕಡಕ್ ಆಗಿ ಎಚ್ಚರಿಕೆ ನೀಡಿದರು.

ಜಗಳೂರು ಪ್ರದೇಶಕ್ಕೆ ಎರಡು ಮಹತ್ವದ ಯೋಜನೆಗಳು ಸಹಕಾರಿಯಾಗಲಿವೆ ಇಷ್ಟೊತ್ತಿಗೆ 57 ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣವಾಗಬೇಕಾಗಿತ್ತು ಕಳೆದ ಆಡಳಿತದವರ ತಾತ್ಸರ ಮನೋಭಾವನೆಯಿಂದ ವಿಳಂಬವಾಗಿದೆ. ನಾನು ಕೂಡ ಕೆಲ ಬಾಗಗಳಲ್ಲಿ ಕಾಮಗಾರಿ ಹಾದುಹೋಗುವ ಸ್ಥಳಗಳಲ್ಲಿ ರೈತರು ಅಡ್ಡಿಪಡಿಸಿದ್ದುಂಟು ರೈತರುನ್ನು  ಮನವೋಲುಸಿ ಪರಿಹಾರ ನೀಡಿ ಕಾಮಗಾರಿ ಚರುಕುಗೊಂಡಿದೆ ಆದರೆ ಎಲ್ಲಾ ಕೆರೆಗಳು ಭರ್ತಿಯಾಗಲು ನದಿಯಲ್ಲಿ ನೀರು ಬಂದರೆ ಮಾತ್ರ ಮಳೆಗಾಲದಲ್ಲಿ ತುಂಬಲಿವೆ.ಈಗಾಗಲೇ 11 ಕೆರೆಗಳಿಗೆ ನೀರು ಬಂದಿವೆ.ಮುಂಬರುವ ದಿನಗಳಲ್ಲಿ ಅಪ್ಪರ್ ಭದ್ರಾ ಯೋಜನೆಯಿಂದ ಮತ್ತೂಷ್ಟು ಕೆರೆಗಳಿಗೆ ನೀರು ತುಂಬಿ ನೀರಾವರಿ ಪ್ರದೇಶವಾಗುವ ಆಶಾಭಾವನೆಯಿದೆ   ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಭಾರ ತಹಶೀಲ್ದಾರ್ ಅರುಣ್ ಕಾರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಗ್ರಾಮೀಣ ಬಾಗದ ಜನರ ಆವಲುಗಳುನ್ನು ಸ್ವಿಕರಿಸುವ ಮೂಲಕ ಅಯಾ ಗ್ರಾಮದ ಜನರ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹಾರ ನೀಡಿ ಸರ್ಕಾರದ ಯೋಜನೆಗಳುನ್ನು  ಜನರಿಗೆ ತಲುಪಿಸುವ   ಕೆಲಸವೆ ಜನತಾದರ್ಶನ ಉದ್ದೇಶವಾಗಿದೆ .

ಜಗಳೂರು ಬರಪೀಡಿತ ಪ್ರದೇಶದವೆಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.

ಗ್ರಾಮೀಣ ಬಾಗದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಮ್ಮ ಆವಾಲುಗಳುನ್ನು ನಮಗೆ ನೀಡಿ ಎಂದು ತಿಳಿಸಿದರು.

 ಜನತಾ ದರ್ಶನದಲ್ಲಿ ದೇವಿಕೆರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಚರಂಡಿ ಸ್ವಚತೆಯಾಗುತ್ತಿಲ್ಲ   ಜಲಜೀವನ ಮಿಷನ್ ಯೋಜನೆಡಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಕಳಪೆಯಾಗಿದೆ ಉತ್ತಮ ಗುಣಮಟ್ಟದ ರಸ್ತೆಯನ್ನ ಜಲಜೀವನ್ ಮಿಷನ್ ನೆಪದಲ್ಲಿ ಹಾಳುಮಾಡಲಾಗುತ್ತಿದೆ ಎಂದು ಮುಖಂಡ ಬಸವಾಪುರ ರವಿಚಂದ್ರ ಆರೋಪಿಸಿದರು.

ಶೆಟ್ಟಿಗೊಂಡನಹಳ್ಳಿ ಗ್ರಾಮಕ್ಕೆ ಸ್ಮಶಾನ ಸೇರಿದಂತೆ ದೇವಿಕೆರೆ ಗ್ರಾಮದಲ್ಲಿ ಕಾಲೇಜು ಶಿಕ್ಷಣವಿಲ್ಲದೆ ವಿದ್ಯಾರ್ಥಿಗಳ ವಿದ್ಯಾಬ್ಯಾಸ ಕುಂಠಿತವಾಗಲಿದೆ ಆದ್ದರಿಂದ ಪಿಯುಸಿ ಕಾಲೇಜು ಹಾಗೂ ಹಾಸ್ಟೇಲ್ .ಪ್ರಾರಂಭಿಸಿ ಸರ್ಕಾರಿ ಶಾಲೆ ನವೀಕರಿಸುವಂತೆ ಗ್ರಾಪಂ ಸದಸ್ಯ ಗುರುಸ್ವಾಮಿ ಮನವಿ ಮಾಡಿಕೊಂಡರು.

ಗ್ರಾಮದಲ್ಲಿ ಆಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ .ಗ್ರಾಮದ ಕೆರೆ ತೂಬಿನಲ್ಲಿ ನೀರು ಸೋರಿಕೆಯಾಗಿ ರೈತರ ಜಮೀ‌ಗಳು ಜೌಗುತ್ತಿವೆ.ಬಹುರಾಷ್ಟ್ರೀಯ ವಿಂಡ್ ಕಂಪನಿಗಳ ಹಾವಳಿ ಹೆಚ್ಚಾಗಿ ರೈತರ ಜಮೀನುಗಳ ಮಾರಾಟ ಮಾಡಿ ಬಡವರು ಭೂಮಿ ಕಳೆದಕೊಳ್ಳುವಂತಾಗಿದೆ ಇವುಗಳಿಗೆ ತಾಲ್ಲೂಕು ಆಡಳಿತ ನೀಯಂತ್ರಿಸಬೇಕೆಂದು ಗ್ರಾಮದ ಮುಖಂಡ ಅನಂತಕುಮಾರ್ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷೆ ರಣದಮ್ಮ ಉಪಾಧ್ಯಕ್ಷ ಕರಿಬಸಪ್ಪ ತಾಪಂ ಇಓ ಕರಿಬಸಪ್ಪ. ಆರ್ ಐ ಧನುಂಜಯ್ . ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಷಂಷೀರ್ ಆಹಮದ್.ಬಿಇಓ ಹಾಲಮೂರ್ತಿ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಬಿ ಮಹೇಶ್.ತಿಪ್ಪೇಸ್ವಾಮಿ. ಮುಖಂಡ ಕಲ್ಲೇಶ್ ರಾಜ್ ಪಟೇಲ್..ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಬಿ ಆರ್ ಸಿ. ಡಿ ಡಿ ಹಾಲಪ್ಪ.ಮುಖಂಡ ಗೌಸ್ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!