ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ವಿಭಾಗ ಮಟ್ಟಕ್ಕೆ ಆಯ್ಕೆ

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 27

ಜಗಳೂರು: ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಬಾಲಕಿಯರ ಥ್ರೋಬಾಲ್ ಪಂದ್ಯದಲ್ಲಿ ತಾಲೂಕಿನ ಹುಚ್ಚವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಒಟ್ಟು 62 ಮಕ್ಕಳಿರು ಈ ಶಾಲೆಯಲ್ಲಿ ಕೇವಲ ಮೂವರು ಶಿಕ್ಷಕರು ಮಾತ್ರ ಇದ್ದಾರೆ. ಹುಚ್ಚವ್ವನಹಳ್ಳಿ ಸ.ಹಿ.ಪ್ರಾ. ಶಾಲೆಯಲ್ಲಿ ದೈಹಿಕ ಶಿಕ್ಷಕರು ಇಲ್ಲದಿದ್ದರೂ ಸಹ ಈ ಮಕ್ಕಳು ಸತತ ಕಲಿಕೆ ಮತ್ತು ಸಹ ಶಿಕ್ಷಕರಾದ ರಾಜು, ಗ್ರಾಮದ ಕೊಟ್ರೇಶ್, ಮುಖ್ಯ ಶಿಕ್ಷಕರಾದ ಗೋವಿಂದಪ್ಪರವರ ಹಿರಿಯರ ಮಾರ್ಗದರ್ಶದಿಂದ ಮಕ್ಕಳು ಪರಿಶ್ರಮ, ಶ್ರದ್ಧೆಯಿಂದ 2023-24ಸಾಲಿನ ಕ್ರೀಡಾಕೂಟದಲ್ಲಿ

ತಾಲೂಕು ಮಟ್ಟದ ಕ್ರೀಡೆಯಲ್ಲೂ ಪ್ರಥಮ ಸ್ಥಾನವನ್ನು ಪಡೆದುಕೊಂಡು ನಂತರ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು. ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಾಥಮಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಬಾಲಕಿಯರ ಥ್ರೋಬಾಲ್ ಕೊನೆಯ ಪಂದ್ಯಾವಳಿಯಲ್ಲಿ ಹರಿಹರ vs ಜಗಳೂರು ಮುಖಾಮುಖಿಯಾಗಿದ್ದು, ರಣರೋಚಕ ಪಂದ್ಯದಲ್ಲಿ ಜಗಳೂರು ತಾಲ್ಲೂಕಿನ ಸ.ಹಿ.ಪ್ರಾ.ಶಾಲೆಯ ಬಾಲಕಿಯರಾದ ಪೂರ್ವಿಕ, ಪೂಜಾ, ಹೇಮಲತಾ, ವಂಶಿಕ, ಲಕ್ಷ್ಮಿ, ಶಮಿತಾ, ಚಂದನ, ಹರ್ಷಿತಾ ಫಾತಿಮಾ, ಶೋಭಾ, ಲಿಖಿತ, ಪ್ರಿಯಾ, ಇವರುಗಳು ಪ್ರಥಮ ಸ್ಥಾನವನ್ನು ಗಳಿಸಿಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ ಸ್ಥಾನದ ಜಯವನ್ನು ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಗೋವಿಂದಪ್ಪ, ಸಹ ಶಿಕ್ಷಕರಾದ ರಾಜು ಹಾಗೂ ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೆನ್ನಪ್ಪ, ಹಾಗೂ ಗ್ರಾಮಸ್ಥರಾದ ಕೊಟ್ರೇಶ್, ಲಕ್ಷ್ಮಣ, ರವಿ, ಮನು, ಹಾಗೂ ಸಮಸ್ತ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *

You missed

error: Content is protected !!