Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on September 28
ಜಗಳೂರು ಸುದ್ದಿ
ಈದ್ ಮಿಲಾದ್ ಅಂಗವಾಗಿ ಜಗಳೂರು ಪಟ್ಟಣದ ಬಿಲಾಲ್ ಮಸೀದಿ ಆವರಣದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಧಿಕಾರಿ ಡಾ. ಶಣ್ಮುಕಪ್ಪ ರವರಿಂದ ಸಾಂಕೇತಿಕವಾಗಿ ಚಾಲನೆ ನೀಡಿದರು.
ಇದೆ ವೇಳೆ ಮುಖಂಡ ಬಂಗಲೆ ಪರ್ವೀಜ಼್ ಮಾತನಾಡಿದರು ಪ್ರವಾದಿ ಮಹಮ್ಮದ್ ರವರ ಜನ್ಮದಿನದ ಅಂಗವಾಗಿ ಈ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪರಿಸರ ಸಂರಕ್ಷಣೆಗೆ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲಾ ಯುವ ಬಳಗದ ವತಿಯಿಂದ ಸೇವಾ ಮನೊಭಾವನೆಯನ್ನು ಬೆಳೆಸಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಲಾಲ್ ಮಸೀದಿ ಅಧ್ಯಕ್ಷ ಇಮಾಂ ಅಲಿ , ಕಾರ್ಯದರ್ಶಿ ಷಂಶುದ್ಧಿನ್ , ಮೌಲಾನಾ ಖಾಸಿಂ , ಮೌಲಾನಾ ಅಹಮದ್ , ಮುಖಂಡರಾದ ಮುನ್ನ , ಖಮರ್ ಉಲ್ಲಾ , ಪತ್ರಕರ್ತ ಎಂ.ಡಿ. ಅಬ್ದುಲ್ ರಖೀಬ್ , ಮೊಹರಮ್ ಗೌಸ್ , ದಾದಪೀರ್, ಅಕ್ಬರ್, ಶರೀಫ್ , ಅಂಜುಮ್ , ಶಾರೂಕ್ , ಶಹಗಿರ್ , ರಹಮತ್ ,ಇಮ್ರಾನ್ , ನವಾಜ್ ಸೇರಿದಂತೆ ಮತ್ತಿತರರಿದ್ದರು ಹಾಜರಿದ್ದರು.