ಮಾಧ್ಯಮ ಶ್ರೇಷ್ಠ ರಾಜ್ಯ ಪ್ರಶಸ್ತಿ ಭಾಜನ: ಎಮ್. ಸಿ.ಲೋಕೇಶ್ ದಾಸರ್
ಮಾಧ್ಯಮ ಶ್ರೇಷ್ಠ ರಾಜ್ಯ ಪ್ರಶಸ್ತಿ-2023 ನೇ ಸಾಲಿನ, ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ (ರಿ) ಅವರ 5 ನೇ ವರ್ಷದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆ ಮತ್ತು 4 ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಿನಾಂಕ :-26/02/2023 ರಂದು ಭಾನುವಾರ. ಸ್ಥಳ :- ವಾಸವಿ ಪಬ್ಲಿಕ್ ಶಾಲೆ, ಕೋಟೆ ರಸ್ತೆ. ಶಿವಮೊಗ್ಗದಲ್ಲಿ ರಾಷ್ಟ್ರ ಮತ್ತು ಅಂತರ್ ರಾಷ್ಟ್ರ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದ್ದು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುದ್ದು.ಮಾಧ್ಯಮ ಶ್ರೇಷ್ಠ ರಾಜ್ಯ ಪ್ರಶಸ್ತಿ ಈ ಬಾರಿ ನಮ್ಮ ಅಲೆಮಾರಿ ಸಮಾಜದ ಬಂಧು ಶ್ರೀ ಎಮ್. ಸಿ. ಲೋಕೇಶ್ ದಾಸರ್ ಅವರಿಗೆ ಒಲಿದು ಬಂದಿರುವುದು ನಾವೆಲ್ಲ ಹೆಮ್ಮೆ ಪಡುವ ಸಂಗತಿಯಾಗಿದೆ. ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಇವರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಶ್ರೀ.ವೆಂಕಟೇಶ್ ಎನ್. ಪಿ. ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ (ರಿ) ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳು ಅವರ ಅಧ್ಯಕ್ಷತೆಯಲ್ಲಿ ಜನವರಿ 25 ರಂದು ನೆಡೆದ ಸರ್ವ ಸದಸ್ಯರ ಸಭೆಯಲ್ಲಿ ಶ್ರೀ ಎಮ್. ಸಿ. ಲೋಕೇಶ್ ದಾಸರ್ ಅವರ ಹೆಸರನ್ನು ಮಾಧ್ಯಮ ಶ್ರೇಷ್ಠ ರಾಜ್ಯ ಪ್ರಶಸ್ತಿಗೆ ಪರಿಗಣಿಸಲಾಯಿತು.

ಇವರು ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮಹಾರಾಜನಹಟ್ಟಿ ಎಂಬ ಒಂದು ಸಣ್ಣ ಕುಗ್ರಾಮದಿಂದ ಬಂದವರು ಪ್ರಸ್ತುತ ಬಳ್ಳಾರಿ ನಿವಾಸಿಯಾಗಿದ್ದು ಕಳೆದ 15 ವರ್ಷಗಳಿಂದ ಬಳ್ಳಾರಿಯಲ್ಲಿಯೇ ವಾಸವಾಗಿದ್ದಾರೆ. ಅಲೆಮಾರಿ ಚನ್ನ ದಾಸರ್ ಸಮುದಾಯದವರಾದ ಇವರು ತಮ್ಮ ಹೆಸರಿನ ಜತೆಗೆ ಆ ಸಮುದಾಯದ ಐತಿಹಾಸಿಕ ಹೆಸರು “ದಾಸರ್” ಆಗಿರುವುದರಿಂದ, ತಮ್ಮ ಹೆಸರಿನೊಂದಿಗೆ “ದಾಸರ್” ಸೇರಿಸಿಕೊಂಡು ಎಮ್. ಸಿ. ಲೋಕೇಶ್ ದಾಸರ್ ಎಂದೇ ಹೆಸರಾದರು. ದಿ!! ಆರ್. ಎಮ್. ಚಂದ್ರಪ್ಪ ಮತ್ತು ಮಾರಕ್ಕ (ಪುಷ್ಪ) ದಂಪತಿಗಳ ಮಗನಾದ ಇವರ ಪತ್ನಿ ಶ್ರೀಮತಿ ನೇತ್ರಾವತಿ.ಎಸ್ ದಾಸರ್ ರವರು‌. ಕುಮಾರಿ ಚಿನ್ಮಯಿ ಎನ್ ಎಲ್ ದಾಸರ್, ಕುಮಾರಿ ತನ್ಮಯಿ ಎನ್ ಎಲ್ ದಾಸರ್ ಮತ್ತು ಕುಮಾರಿ ಉಮಾಶ್ರೀ ಎನ್ ಎಲ್ ದಾಸರ್ ಇವರ ಮುದ್ದಿನ ಮಕ್ಕಳು.

ಕಾಲೇಜು ದಿನಗಳಲ್ಲಿ ಹವ್ಯಾಸಿ ಬರಹಗಾರರಾಗಿ, ಕಥೆ, ಕವನ, ಹಾಗೂ ಸ್ಥಳೀಯ ದಿನ ಪತ್ರಿಕೆ ವಾರಪತ್ರಿಕೆ ಮತ್ತು ಮಾಸ ಪತ್ರಿಕೆ ಹೀಗೆ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾ ಮಾಧ್ಯಮ ಲೋಕಕ್ಕೆ ಪ್ರವೇಶಿಸಿದ ಇವರು ನಂತರ “ಜನತಾ ಬಂಧು” ವಾರ ಪತ್ರಿಕೆಗೆ ವರದಿಗಾರರಾಗಿ, ದಾವಣಗೆರೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದರು.ರಾಜ್ಯ ಮಟ್ಟದ ಪತ್ರಿಕೆಯಾದ ಜನತಾ ಬಂಧು ಪತ್ರಿಕೆಯಲ್ಲಿ 5 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದರು.ಬಳಿಕ ಅಲೆಮಾರಿ ಬಂಧು ಕನ್ನಡ ನ್ಯೂಸ್ ಚಾನಲ್ ನಲ್ಲಿ ಕೆಲಕಾಲ ತೊಡಗಿಸಿಕೊಂಡಿದ್ದವರು, ಕಳೆದ ಮೂರು ವರ್ಷಗಳಿಂದ ಪ್ರತಿಷ್ಠಿತ 🆎News “KARNATAKA” ನ್ಯೂಸ್ ಚಾನಲ್ ನಲ್ಲಿ ಸಕ್ರಿಯರಾಗಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು, ಲಯನ್ಸ್ ಕ್ಲಬ್ ಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ.ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ..ಮಾಧ್ಯಮ ಮಿತ್ರರಿಗೆ ನೀಡುವ ಅತೀ ಶ್ರೇಷ್ಠ ಪ್ರಶಸ್ತಿಯಾದ “ಮಾಧ್ಯಮ ಶ್ರೇಷ್ಠ ” ರಾಜ್ಯ ಪ್ರಶಸ್ತಿ ಪಡೆದಿರುವ ಅವರನ್ನು ಅಭಿನಂದಿಸಲು ಕರೆಮಾಡಿದ ಇತಿಹಾಸ ತಜ್ಞರಾದ ಮೈಸೂರಿನ ನಂಜರಾಜೇ ಅರಸು, ಹಂಪಿ ವಿಶ್ವವಿದ್ಯಾಲಯದ ಪ್ರೊ ಕೆ.ಎಮ್. ಮೇತ್ರಿ ಮತ್ತು ರಾಜ್ಯಮಟ್ಟದ ಪ್ರತಿಷ್ಠಿತ ಪತ್ರಿಕೆಯದ ಜಾಗೃತಿ ಕಿರಣ ಮಾಸ ಪತ್ರಿಕೆಯ ಸಂಪಾದಕರಾದ ವಲಿಭಾಷ ಅವರು ಹಾಗೂ ಬಳ್ಳಾರಿಯ ಪ್ರತಿಷ್ಠಿತ ವಾಹಿನಿಯಾದ ಬಿಪಿ ನ್ಯೂಸ್ ಮುಖ್ಯಸ್ಥರಾದ ಅರುಣ್ ಭೂಪಲ್, ಹ್ಯೂಮ್ಯಾನಿಟಿ ಟ್ರಸ್ಟ್ ಆರ್. ರಾಜು, ಕರುನಾಡ ರಕ್ಷಣಾ ಪಡೆಯ ಸಂಸ್ಥಾಪಕ ಅಧ್ಯಕ್ಷ ಮೋಹನ್ ಕುಮಾರ್,ಎಮ್. ಸಿ. ಶೇಖರಪ್ಪ (ಶಿಕ್ಷಕರು) ಶ್ರೀ ಗುರುಕುಲ CBSC ರೆಸಿಡೆನ್ಸಿಯಲ್ ಸ್ಕೂಲ್ ತುರಚಘಟ್ಟ ದಾವಣಗೆರೆ (ಜಿಲ್ಲೆ) ಎಮ್. ಎನ್. ವಿಜಯಕುಮಾರ್, ಎಸ್ ಎ ವೀರಶ್ ಇನ್ನಿತರೇ ಆಪ್ತ ಸ್ನೇಹ ಬಳಗ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಹರ್ಷೋದ್ಘಾರದ ಅಭಿನಂದನೆಗಳನ್ನು ಸಲ್ಲಿಸಿದ ಮಿತ್ರ ಬಳಗಕ್ಕೆ ಮತ್ತು ಮಾಧ್ಯಮ ಮಿತ್ರರೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡರು.ಕರ್ನಾಟಕ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರಲಿ,ಮಾಧ್ಯಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ,ಅವರ ಅಕ್ಷರಸೇವೆ ನಿರಂತರವಾಗಿರಲಿ, ಎಂದು ಅಲೆಮಾರಿ ಬಂಧು ವಾರ ಪತ್ರಿಕೆ ಬಳಗ ಶ್ರೀ ಎಮ್. ಸಿ. ಲೋಕೇಶ್ ದಾಸರ್ ಅವರಿಗೆ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *

You missed

error: Content is protected !!