ಮಾರ್ಚ್ 13 ರಂದು ಸೋಮವಾರ ಲೋಕರ್ಪಣೆಗೊಳ್ಳಲಿದೆ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ!! ಬಿ ಆರ್ ಅಂಬೇಡ್ಕರ್ ರವರ 8 ಅಡಿ ಎತ್ತರದ ಮೂರ್ತಿ ಅನಾವಣಗೊಳ್ಳಲಿದೆ . ಈ ಬಾಗದ ಬಹುಜನರ ಬಹುದಿನದ ಬೇಡಿಕೆ ಮಹಾನ್ ನಾಯಕ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಕನಸ್ಸು ಕೂಡ ಆಗಿತ್ತು . ಇದೀಗ ಜಗಳೂರು ಇತಿಹಾಸದಲ್ಲಿಯೆ ಇದೊಂದು ಐತಿಹಾಸಿಕ ದಾಖಲೆ ದಿನ ಮಾರ್ಚ್ 13 ರಂದು ಲೋಕರ್ಪಣೆಗೊಳ್ಳುತ್ತಿರುವುದು ಸಂತೋಷದ ಸಂಗತಿ. ಕೇಂದ್ರದ ಮಾನವ ಸಬಲಿಕರ ಸಚಿವ ಸಂಸದ ಎ ನಾರಾಯಣಸ್ವಾಮಿರವರು ವೇದಿಕೆ ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ.ದಿವ್ಯ ಸಾನಿದ್ಯ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿ.ಹಾಗೂ ಆದಿಜಾಂಬವ ಪೀಠದ ಶ್ರೀ ಷಡಕ್ಷರಿ ಮುನಿ ಸ್ವಾಮಿಜಿ .ಚಿತ್ರದುರ್ಗದ ಬಸವನಾಗಿದೇವ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.ಶಾಸಕ ಎಸ್ ವಿ ರಾಮಚಂದ್ರರವರ ಅಮೃತ ಅಸ್ತದಿಂದ ಮಹಾನಾಯಕ ಅಂಬೇಡ್ಕರ್ ರವರ ಪುತ್ಥಳಿ ಲೋಕರ್ಪಣೆಗೊಳ್ಳಲಿದ್ದು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರು ವಹಿಸಿಕೊಳ್ಳಲಿದ್ದು ಲೋಕರ್ಪಣೆ ಕಾರ್ಯಕ್ರಮದಲ್ಲಿ ಸಚಿವ ಗೊವಿಂದಕಾರಜೊಳ. ಜಿಲ್ಲಾ ಸಂಸದರಾದ ಜಿ ಎಂ ಸಿದ್ದೇಶ್ವರ. ಜಿಲ್ಲಾ ಉಸ್ತುವಾರಿ ಭೈರತಿ ಬಸವರಾಜ್.ಸೇರಿದಂತೆ ಪಪಂ ಅಧ್ಯಕ್ಷರು ವಿಶಾಲಾಕ್ಷಿ ಒಬಳೇಶ್.ಉಪಾದ್ಯಕ್ಷರಾದ ನಿರ್ಮಲಕುಮಾರಿ ತಾಲ್ಲೂಕಿನ ವಿವಿಧ ಸಂಘದ ಪದಾಧಿಕಾರಿಗಳು ವಿವಿಧ ಜನಪ್ರತಿನಿಧಿಗಳು ಪಾಲ್ಗೊಳ್ಳುವರು .ನಾಳೆ ಸೋಮವಾರ 11 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿ ಅನಾವರಣಗೋಳಿಸಿದ ನಂತರ ತಾಲ್ಲೂಕು ಕಛೇರಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಜಿ ಸಂತೋಷಕುಮಾರ್ ನೇತೃತ್ವದಲ್ಲಿ ಜರುಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!