Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on September 29

ಜಗಳೂರಿನಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ:ಪ್ರಗತಿ ಪರ ಸಂಘಟನೆ ಕಾವೇರಿ ಹೊರಾಟಕ್ಕೆ ಬೆಂಬಲ

ಜಗಳೂರು ಸುದ್ದಿ:ಪಟ್ಟಣದಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ತಾಲೂಕಿನ ಪ್ರಗತಿ ಪರ ಸಂಘಟನೆ ಮುಖಂಡರುಗಳು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದು ಹೊರತು ಪಡಿಸಿದರೆ.ಉಳಿದ ಯಾವುದೇ ಕನ್ನಡ ಪರ ಸಂಘಟನೆಗಳು ಬೀದಿಗಿಳಿಯದೆ ಎಂದಿನಂತೆ ಸಹಜವಾಗಿ ವ್ಯಾಪಾರ ವಹಿವಾಟು ಸಾರಿಗೆ ಸಂಚಾರ ಸಾಮಾನ್ಯವಾಗಿತ್ತು.

ಕಾವೇರಿ ಹೊರಾಟಕ್ಕೆ ಬೆಂಬಲಿಸಿ ಕನ್ನಡ ಪರ ಸಂಘಟನೆಗಳು‌‌ ನೀಡಿದ್ದ ಕರೆಗೆ ಜಗಳೂರು ತಾಲೂಕಿನಲ್ಲಿ ಕನ್ನಡ ಪರ‌ ಸಂಘಟನೆಗಳು ಮೌನವಹಿಸಿದ್ದು.ಬೆಳಿಗ್ಗೆ ಯಿಂದ ಹಾಲು,ಹಣ್ಣು,ತರಕಾರಿ,ದಿನಸಿ ಅಂಗಡಿ ಮುಗ್ಗಂಟು,ತರಕಾರಿ,ವಾಹನ ಸಂಚಾರ ದಟ್ಟಣೆಗೆ ಕರ್ನಾಟಕ ಬಂದ್ ನ ಬಿಸಿ ಮುಟ್ಟಲಿಲ್ಲ.

ಪ್ರಗತಿಪರ ಸಂಘಟನೆ ನೇತೃತ್ವದಲ್ಲಿ ತಹಶೀಲ್ದಾರ್ ಗೆ ಮನವಿ:ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಬಾಗ ಜಮಾಯಿಸಿ ಪ್ರಗತಿ ಪರ ಸಂಘಟನೆಮುಖಂಡರುಗಳು ಮನವಿ ಸಲ್ಲಿಸಿದರು.

ಪ್ರಗತಿಪರ ಸಂಘಟನೆ ಕಾರ್ಯದರ್ಶಿ ವಕೀಲ ಆರ್.ಓಬಳೇಶ್ ಮಾತನಾಡಿ,ಕನ್ನಡ ನಾಡಿನ ನೆಲ ಜಲ‌ಸಂಪನ್ಮೂಲ ರಾಜ್ಯದ ಜನತೆಗೆ ಮೊದಲು ಸದ್ಬಳಕೆಯಾಗಬೇಕು.ಕಾವೇರಿ ನದಿ ನೀರು ರಾಜ್ಯದ ನೆರೆಹೊರೆಯ ಜಿಲ್ಲೆಗಳಿಗೆ ಸಮರ್ಪಕವಾಗಿ ನೀರಾವರಿಗೆ ಪೂರೈಕೆಯಾಗುತ್ತಿಲ್ಲ. ಆದರೆ ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಹರಿಸಲು ಮುಂದಾಗಿದ್ದು.ಕಾವೇರಿ ಉಗಮಸ್ಥಾನ ಕರ್ನಾಟಕವಾಗಿದೆ.ತವರು ರಾಜ್ಯಕ್ಕೆ ಮೊದಲ ಆದ್ಯತೆ ನೀಡಬೇಕು.ಕೇಂದ್ರದಲ್ಲಿನ ಆಡಳಿತ ಬಿಜೆಪಿ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿರುವುದು ಮುಂದಿನ ಲೋಕಸಭಾ ಚುನಾವಣೆಯ ರಾಜಕಾರಣ ಸಲ್ಲದು .ಕೂಡಲೇ ಮದ್ಯಸ್ಥಿಕೆ ವಹಿಸಿ ಇತ್ಯರ್ಥಪಡಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.

ದಲಿತ ಮುಖಂಡ ಶಂಭುಲಿಂಗಪ್ಪ ಮಾತನಾಡಿ,ರಾಜ್ಯದಲ್ಲಿ ಸಕಾಲಕ್ಕೆ ಮಳೆಯಿಲ್ಲದೆ ಬರದ ಛಾಯೆ ಆವರಿಸಿದೆ.ಕುಡಿಯುವ ನೀರಿಗೂ ಆಹಾಕಾರ ಹೆಚ್ಚುತ್ತಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಡಳಿತ ಕೇಂದ್ರ ಸರಕಾರ ನೀರಿನ ಮೇಲೆ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ.ರಾಜ್ಯದ ಜಲ ಸಂಪನ್ಮೂಲ ರಾಜ್ಯಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಪ್ರಗತಿ ಪರ ಸಂಘಟನೆ ಒಕ್ಕೂಟದ ತಾಲೂಕು ಅಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ಮುಂಗಾರು ಮಳೆಯ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಹರಿವು ಕ್ರಮೇಣ ಕ್ಷೀಣಿಸುತ್ತಿದೆ.ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದು ಸರಿಯಲ್ಲ.ಕಾವೇರಿ ನಮ್ಮ‌ನೀರು ರೈತರು ಮಳೆ ಬೆಳೆಯಿಲ್ಲದೆ ಕಂಗಾಲಾಗುತ್ತಿದ್ದು.ಇಂತಹ ಪರಿಸ್ಥಿತಿಯಲ್ಲಿ ನಮ್ಮ ನಾಡಿನ ನೀರನ್ನು ಹೊರರಾಜ್ಯಕ್ಕೆ ಹರಿಸುತ್ತಿರುವುದು ಖಂಡನೀಯ ಎಂದರು.

ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ ಸೂರಗೊಂಡನಹಳ್ಳಿ ಕುಬೇಂದ್ರಪ್ಪ,ಮುಖಂಡರಾದ ಸಿ.ತಿಪ್ಪೇಸ್ವಾಮಿ,ಗೌರಿಪುರ ಸತ್ಯಮೂರ್ತಿ,ಮಾದಿಹಳ್ಳಿ ಮಂಜುನಾಥ್,ಓಬಣ್ಣ,ರಂಗನಾಥರೆಡ್ಡಿ,ಜೀವನ್,ಯಲ್ಲಪ್ಪ,ಹನುಮಂತಪ್ಪ,ಅಣಬೂರು ರಾಜಶೇಖರ್,ಮುಸ್ಟೂರು ನಿಂಗಪ್ಪ,ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!