Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 2
ಗ್ರಾಪಂ. ಅಧ್ಯಕ್ಷರಾದ ನಾಗಮ್ಮನವರು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸ್ವತಂತ್ರ ಭಾರತದ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಶುಭ ಕೋರಿದರು.
ಸಸಿ ನೆಡುವುದರ ಮೂಲಕ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ
ಜಗಳೂರು: ತಾಲೂಕಿನ ಅಸಗೋಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಸರ್ಕಾರಿ ಶಾಲಾ ಆವರಣದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕೆ.ರಾಘವೇಂದ್ರರವರು ಮಾತನಾಡಿ, ಗಾಂಧಿಜೀ ಹೆಸರಿನಲ್ಲಿಯೆ ಒಂದು ಶಕ್ತಿ ಇದೆ. ಬ್ರಿಟಿಷರ ದಾಸ್ಯ ಪದ್ಧತಿಯನ್ನು ವಿರೋಧಿಸಿ ಅಹಿಂಸಾತ್ಮಕ ಮಾರ್ಗವನ್ನು ಅನುಸರಿಸಿ ಸ್ವಾತಂತ್ರ್ಯವನ್ನು ತಂದು ಕೊಟ್ಟವರು ಎಂದು ಮಕ್ಕಳಿಗೆ ಗಾಂಧೀಜಿಯವರ ಬಗ್ಗೆ ಕಿರು ಪರಿಚಯಿಸಿದರು.
ಗ್ರಾಪಂ. ಅಧ್ಯಕ್ಷರಾದ ನಾಗಮ್ಮನವರು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸ್ವತಂತ್ರ ಭಾರತದ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಶುಭ ಕೋರಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕರು ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ್ ರವರ ಮಾತನಾಡಿ, ಮಹಾತ್ಮರಿಗೆ ಮರಣವಿಲ್ಲ ಅವರು ಸದಾ ಅಮರರು ಹಾಗೂ ಭಾರತಾಂಬೆಯ ಹೆಮ್ಮೆಯ ಪುತ್ರರು. ಬೇರೆಯವರಿಗೆ ಯಾರು ಹಿಂಸೆ ನೀಡುತ್ತಾರೋ ಅವರು ತಮ್ಮನ್ನು ತಾವೇ ಹಿಂಸಿಸಿ ಕೊಂಡಂತಾಗುತ್ತದೆ ಎಂದು ಹೇಳುವ ಮೂಲಕ ಅಹಿಂಸೆ ತತ್ವವನ್ನು ಭಗವಾನ್ ಬುದ್ಧರಿಂದ ತಿಳಿದುಕೊಂಡು ಗಾಂಧಿಜಿವರು ಈಗಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಒಡೆದರೆ ಹೊಡೆಸಿಕೊಳ್ಳಿ ಬಡಿದರೆ ಬಡಿಸಿಕೊಳ್ಳಿ ಬಡಿಯುವವರು ಎಷ್ಟಂತ ಬಡಿವರು ಎಂಬ ಸಿದ್ದಾಂತವನ್ನು ಸಾರಿದ್ದಾರೆ. ಹಾಗೂ ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ನೆನೆಯುತ್ತಾ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಗಾಂಧೀಜಿಯವರ ಕಟ್ಟ ಅನುಯಾಯಿ ಆಗಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಎಚ್.ಮೂರ್ತಿರವರು ಮಾತನಾಡಿ ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶ ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷರಾದ ರವಿಕುಮಾರ್,
ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಎ.ಬಿ.ಗುಡ್ದಯ್ಯ ಹಾಗೂ ಕಾರ್ಯದರ್ಶಿಗಳಾದ ರವಿಕುಮಾರ್, ಮಲ್ಲಪ್ಪ, ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಶಂಭು, ವಿರೂಪಾಕ್ಷ, ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶಿವಕುಮಾರ್, ಹಾಗೂ ಅಸಗೋಡು ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಶ್ರೀ ಶಂಭುಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.