Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 5 blr news
ಬೆಂಗಳೂರು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ 2023 ಸಾಲಿನ ಸಾಧಕರಿಗೆ ಕೊಡಮಾಡುವ ರಾಜ್ಯ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಪೂಜಾರ್ ಸಿದ್ದಪ್ಪ ಭಾಜನರಾಗಿದ್ದಾರೆ.
ಸಮಾಜದಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿರುವ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿ ಗೌರವ ಸನ್ಮಾನಕ್ಕೆ ಜಗಳೂರಿನ ಅಂಬೇಡ್ಕರ್ ಪುತ್ಥಳಿ ನಿರ್ವಹಣೆ ಸಮಿತಿ ಅಧ್ಯಕ್ಷರು ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪರವರು ರಾಜ್ಯ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ಬೆಂಗಳೂರಿನ ಹೆಸರಾಂತ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ಕನ್ನಡ ಭವನ ರವೇಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿ ಇದೆ ದಿ. 8 _10_2023 ರಂದು ಭಾನುವಾರ ನಡೆಯಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಮತ್ತು ಸಂವಿಧಾನ ಪೀಠಿಕೆ ವಿಚಾರ ಸಂಕೀರ್ಣ ಹಾಗೂ ಕನ್ನಡ ಜಾಗೃತಿ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆ ಜಗಳೂರಿನ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ನಿರ್ವಹಣೆ ಸಮಿತಿ ಅಧ್ಯಕ್ಷರಾದ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪರವರ ರಾಜ್ಯ ಸಮಾಜ ಸೇವಾ ರತ್ನ ಪ್ರಶಸ್ತಿ ಸ್ವಿಕರಿಸಲಿದ್ದಾರೆ.
ಸಿಲಿಖಾನ್ ಸಿಟಿ ಬೆಂಗಳೂರಿನ ಹೆಸರಾಂತ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಬೆಂಗಳೂರು ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಪೀಠಿಕೆ ಓದು ಮತ್ತು ಗೌರವಿಸುವ ಕಾರ್ಯಕ್ರಮ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ವಿಚಾರ ಸಂಕೀರ್ಣ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜೆಲ್ಲೆಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವಿವಿಧ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಕೊಡಮಾಡುವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಅಧ್ಯಕ್ಷರು ಹಾಗೂ ನಟ ನಿರ್ದೇಶಕ ಪತ್ರಕರ್ತ ಸಾಹಿತಿ ಗುಣುವಂತ ಮಂಜುರವರು ತಿಳಿಸಿದ್ದಾರೆ.
ಸಮಾಜದಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ನಿರ್ವಹಣೆ ಸಮಿತಿ ಅದ್ಯಕ್ಷರು ಹಾಗೂ ಮಾಜಿ ಗ್ರಾಪಂ ಸದಸ್ಯರು ಮತ್ತು ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆರೋಗ್ಯ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಯುವ ಉತ್ಸಾಹಿ ಮುಖಂಡ ಪೂಜಾರ್ ಸಿದ್ದಪ್ಪರವರನ್ನು ಪ್ರಶಸ್ತಿ ಆಯ್ಕೆಯಾಗಿದ್ದು ರಾಜ್ಯ ಪ್ರಶಸ್ತಿ ಕೊಡಮಾಡುವ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಸ್ವಿಕರಿಸಲಿದ್ದಾರೆ.
ಪೂಜಾರ್ ಸಿದ್ದಪ್ಪ ಮಾತನಾಡಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ನನ್ನ ಸೇವೆಯನ್ನ ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ ತಾಲ್ಲೂಕಿನ ಎಲ್ಲಾ ದಲಿತಪರ ಸಂಘಟನೆ ಹಿರಿಯರು ಹಾಗೂ ಪ್ರಗತಿ ಸಂಘಟಕರು ಮತ್ತು ಸಮಸ್ತ ತಾಲ್ಲೂಕಿನ ಸರ್ವರು ಸಹ ನನಗೆ ಸಹಕಾರ ನೀಡಿ ನಮ್ಮ ಬಹುದಿನದ ಕನಸು ಆಗಿದ್ದ ಜಗಳೂರು ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ನಮ್ಮ ಮುಂಚೂಣಿ ನಾಯಕತ್ವದಲ್ಲಿ ಸಹಕರಿಸಿದ ಸಮಸ್ತ ದಲಿತ ಬಂಧುಗಳಿಗೂ ಸರ್ವರಿಗೂ ನಾನು ಚಿರ ಋಣಿಯಾಗಿದ್ದೆನೆ