Byshukradeshenews Posted on October 5, 2023
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 5
ಆಲೂರು ಸರ್ಕಾರಿ ಆಸ್ಪತ್ರೆಗೆ ಶಾಸಕರು ಭೇಟಿ
ಕಾನ ಹೊಸಹಳ್ಳಿ: ಸಮೀಪದ ಆಲೂರು ಗ್ರಾಮದಲ್ಲಿ ಜನರ ಕಷ್ಟಗಳನ್ನು ಆಲಿಸಿ ತಡರಾತ್ರಿವರೆಗೂ ವಿವಿಧ ಸರಕಾರಿ ಕಛೇರಿಗಳಿಗೂ ಭೇಟಿ ನೀಡಿದರು. ಶಿಕ್ಷಕರು ಮತ್ತು ವೈದ್ಯರಿಗೆ ಒಳ್ಳೆಯ ಸಂಬಳ ನೀಡಿದಾಗ ಮಾತ್ರ ಸಮಾಜವನ್ನು ಸುಭದ್ರವಾಗಿ ಕಟ್ಟಲು ಸಾಧ್ಯ ಎಂಬ ಮಾತನ್ನು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಹಂಚಿಕೊಂಡರು. ಅನುಧಾನ ಹಂಚಿಕೆಯಲ್ಲಿ ಜಾತಿ, ವರ್ಗ, ಪ್ರದೇಶ ಅಂತಹ ನೋಡುವುದಿಲ್ಲ. ಸುಂದರ ಸಮಾಜ ನಿರ್ಮಾಣಕ್ಕಾಗಿ ಪಣತೊಡುವುದೇ ನನ್ನ ಮುಖ್ಯ ಧೇಯ ಎಂದೂ ಆಲೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾತನಾಡಿದರು. ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಆಲೂರು ಗೊಲ್ಲರಹಟ್ಟಿ ಹಾಗೂ ಪಿ. ಗೊಲ್ಲರಹಟ್ಟಿ ಗಳಲ್ಲಿ ಕಾಣಲಾಯಿತು. ಎರಡು ಕಡೆ ಧ್ವಾರಬಾಗಿಲು ಬೇಡಿಕೆ ಮುಂದಿಟ್ಟರು. ಚುನಾವಣೆ ವೇಳೆ ದುಡಿದ ಕಾಡುಗೊಲ್ಲ ಮಹಿಳೆಯರನ್ನು ಶಾಸಕರು ಸನ್ಮಾನಿಸಿ ಸರಕಾರದಿಂದ ಯಾವ ಕೆಲಸ ಆಗಬೇಕಾಗಿದೆ ಕೇಳಿ ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಧಿಕಾರಿಗಳು, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ಮುಖಂಡರು, ಸಾರ್ವಜನಿಕರು ಇದ್ದರು.