ಜಗಳೂರು ನ್ಯೂಸ್.
.
ನಾಳೆ ಬರ ಅದ್ಯಯನ ಸಮೀಕ್ಷೆ ನಡೆಸಲು ತಾಲ್ಲೂಕಿಗೆ ಕೇಂದ್ರ ಅಧಿಕಾರಿಗಳ ತಂಡ ಆಗಮನ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 6
ರಾಜ್ಯಕ್ಕೆ ಬಹುತೇಕ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಲಿರುವ ಕೇಂದ್ರ ಬರ ಅದ್ಯಯನ ತಂಡ ಕೆಲವು ಕಡೆ ರೈತರಿಂದಲೂ ಮಾಹಿತಿ ಪಡೆಯಲಿದೆ. ರೈತರ ಜಮೀನುಗಳಿಗೆ ಖುದ್ದು ಭೇಟಿ ಬರಪರಿಸ್ಥಿತಿ ಮಳೆಯಿಲ್ಲದೆ ಬಿತ್ತಿದ ಬೆಳೆ ಒಣಗಿರುವ ಬೆಳೆ ಸಮೀಕ್ಷೆ ಜನ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ. ಸೇರಿದಂತೆ ಮಳೆಮಾಪನ ವಿವಿಧ ರೀತಿ ಮಾಹಿತಿ ಕಲೆ ಹಾಕಿ ಕೇಂದ್ರಕ್ಕೆ ವರದಿ ನೀಡಿ ರೈತರಿಗೆ ಬೆಳೆ ಹಾನಿಗೆ ಅನುಗುಣವಾಗಿ ಸರ್ಕಾರ ಪರಿಹಾರ ಘೋಷಿಸಲಿದೆ.ಎಂದು ತಹಶೀಲ್ದಾರ್ ಅರುಣ್ ಕಾರಗಿ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಅದ್ಯಯನ ನಡೆಸಲು ಆಗಮಿಸಿದ ಅಧಿಕಾರಿಗಳ ತಂಡ ವರದಿ ತಯಾರಿಸಿ ಪಾರದರ್ಶಕ ವರದಿ ನೀಡುವಂತೆ ಅಧಿಕಾರಿಗಳಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೇಂದ್ರ ತಂಡ ಆಗಮಿಸುವ ಹಿನ್ನೆಲೆಯಲ್ಲಿ ಪ್ರಾಗಿಯೋಗಿಕವಾಗಿ ಜಿಲ್ಲಾಧಿಕಾರಿಗಳು ಕ್ಷೇತ್ರದ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪರವರು ರೈತರ ಜಮೀನಿಗೆ ತೆರಳಿ ಬರ ಆವರಿಸಿರುವ ಸ್ಥಿತಿಯನ್ನ ಕೇಂದ್ರ ಅಧಿಕಾರಿಗಳ ತಂಡಕ್ಕೆ ವೀಕ್ಷಣೆ ನಡೆಸುವ ಸ್ಥಳಗಳುನ್ನು ಗುರುತು ಮಾಡಲಾಗಿದೆ. ಈ ವೇಳೆ ಶಾಸಕರು ಮಾತನಾಡಿ ಈ ಬಾರಿ ತಾಲ್ಲೂಕಿನಲ್ಲಿ ಮಳೆ ಬೆಳೆ ಇಲ್ಲದೆ ರೈತರು ಕಂಗಲಾಗಿದ್ದು ರೈತರು ಜೀವನ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಸರ್ಕಾರ ಬರ ಪರಿಸ್ಥೀತಿಯನ್ನ ಅರಿತು ವರದಿ ತಯಾರಿಸಿ ಕೇಂದ್ರಕ್ಕೆ ವರದಿ ನೀಡುವ ಮೂಲಕ ಹೆಚ್ಚಿನ ಬೆಳೆ ಪರಿಹಾರ ಘೋಷೀಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕಸಬಾ ಹೊಬಳಿ ಆರ್ ಐ ಧನುಂಜಯ್.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ತಾಪಂ ಎನ್ ಆರ್ ಇ ಜಿ ಸಹಾಯಕ ನಿರ್ದೇಶಕ ಚಂದ್ರಶೇಖರ್. ಸೇರಿದಂತೆ ಮುಂತಾದವರು ಹಾಜರಿದ್ದರು.