ಜೆ.ಡಿ.ಎಸ್ ಕಲ್ಲೇರುದ್ರೇಶ್ ರವರ ಅಳಿಯ ಆರೋಗ್ಯ ಇಲಾಖೆ ನೌಕರ ರುದ್ರೇಶ್ ಆಸ್ಪತ್ರೆ ನೌಕರನಾಗಿದ್ದು.ಕರ್ತವ್ಯ ನಿರ್ವಹಿಸದೆ ಪೂರ್ಣಕಾಲಿಕ ರಾಜಕಾರಣದಲ್ಲಿ ತೊಡಗಿದ್ದಾರೆ ಮೇಲಾಧಿಕಾರಿಗಳ ಗಮನಕ್ಕಿಲ್ಲವೆ ಎಂದು ಮುಖಂಡ ಬಸಾವಪುರ ರವಿಚಂದ್ರ ಪ್ರಶ್ನೆಸಿ ದೇವಿಕೆರೆ ಗ್ರಾಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on October 9

ಸರ್ವಜನಾಂಗದ ಹಿತಾ ಕಾಪಾಡುವ ಮೂಲಕ ಕ್ಷೇತ್ರದಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ದಿಗೆ ಒತ್ತು ನೀಡುವೆ :ಶಾಸಕ.ಬಿ.ದೇವೇಂದ್ರಪ್ಪ ವಿಶ್ವಾಸ.

ಜಗಳೂರು ಸುದ್ದಿ:ಜಗಳೂರು ತಾಲ್ಲೂಕಿನಲ್ಲಿ ಬಹುತೇಕ ಶಾಸಕರುಗಳು ಕ್ಷೇತ್ರದಲ್ಲಿ ಶಾಸಕರಾಗಿ ಆಡಳಿತ ನಡೆಸಿ ಉತ್ತಮ ಸಂದೇಶಗಳುನ್ನು ಬಿಟ್ಟುಹೋಗಿದ್ದಾರೆ ಸ್ವಾತಂತ್ರ್ಯ ನಂತರ ತಾಲ್ಲೂಕಿನ ನರೇನಹಳ್ಳಿ ಗ್ರಾಮದ ಕೃಷ್ಣಸಿಂಗ್ ಮೊಟ್ಟಮೊದಲ ಶಾಸಕರಾಗಿದ್ದಾರೆ ನಂತರ ದಿನಮಾನಗಳಲ್ಲಿ ಹಾಲಸ್ವಾಮಿ ಮಾಜಿ ಶಾಸಕರಾದ ಆಶ್ವತರೆಡ್ಡಿ ಎಂ ಬಸಪ್ಪರಂತಹ ನಾಯಕರು‌ ಜಗಳೂರು ಕ್ಷೇತ್ರದಲ್ಲಿ ಉತ್ತಮ ಆಡಳಿತ ನಡೆಸಿ ಸರ್ವರ ಹಿತಾ ಕಾಪಾಡಿಕೊಂಡು ಸಮಾಜದಲ್ಲಿ ಸಾಮರಸ್ಯತೆಯ ಬದುಕು ಹಾಗೂ ಕ್ಷೇತ್ರ ಅಭಿವೃದ್ದಿಗೆ ಒತ್ತು ನೀಡಿದಂತೆ ನಾನು ಕೂಡ ಎಲ್ಲಾ ಜನ ಸಮುದಾಯದ ಪ್ರಿತಿ ವಿಶ್ವಾಸದೊಂದಿಗೆ ಉತ್ತಮ ಆಡಳಿತ ಸೇವಾ ಕಾರ್ಯಕ್ಕೆ ಒತ್ತು ಕೊಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಭರವಸೆ ನೀಡಿದರು.

ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ನೂತನ ಶಾಸಕರಿಗೆ ಅಭಿನಂದನೆ‌ ಸನ್ಮಾನ ಸಮಾರಂಭದಲ್ಲಿ ಗ್ರಾಮಸ್ಥರ ಆತಿಥ್ಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸರ್ಕಾರಿ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ತಮ್ಮ ಕಛೇರಿ ಕೆಲಸಗಳಿಗಾಗಿ ಬರುವಂತ ನಾಗರೀಕರಿಗೆ ಉದಾಸೀನ ಮಾಡದೇ ತಮ್ಮ ಕರ್ತವ್ಯ ಪಾಲಿಸಬೇಕು ಸುಖ ಸುಮ್ಮ ನೆ ರೈತರನ್ನು ಅಲೆದಾಡಿಸಿದರೆ ಶಿಸ್ತುಕ್ರಮ ಕೈಗೊಳ್ಳುವೆ ಎಂದು ಖಡಕ್ ಎಚ್ಚರಿಕೆ ನೀಡುವ ಮೂಲಕ ಅಧಿಕಾರಿ ವರ್ಗದವರುನ್ನು ಎಚ್ಚರಿಸಿ ಕೆಲಸ ಮಾಡುವೆ..ನಾನೂ ಭಾವನಾತ್ಮಕ ಜೀವಿ ಕಂಬನಿಗೆ ಮಿಡಿಯುವೆ ಕೆಟ್ಟದ್ದನ್ನು ಯಾರಿಗೂ ಬಯಸಲಾರೆ .ಹಲವು ದೇವರುಗಳ ಸನ್ನಿಧಿಯಾಗಿರುವ ದೇವಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನರು ನನಗೆ ಅದ್ದೂರಿ ಸ್ವಾಗತೊಂದಿಗೆ ವಿಜೃಂಭಿಸಿದ್ದು ಹರ್ಷ ತಂದಿದೆ.ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳಾದ ಶಾಲಾ‌ಕಟ್ಟಡ,ರಸ್ತೆ,ಸಾರಿಗೆ ಸೌಕರ್ಯ,ಕಲ್ಯಾಣಮಂಟಪ,ಹೈಟೆಕ್ ಶೌಚಾಲಯ,ನೀರು,ಸೂರು ಸೇರಿದಂತೆ ಸೌಲಭ್ಯಗಳನ್ನು ಹಂತಹಂತವಾಗಿ ನನ್ನ ಆಡಳಿತಾವಧಿಯಲ್ಲಿ ಈಡೇರಿಸುವೆ ಎಂದು ಭರವಸೆ ನೀಡಿದರು. ಶಾಸಕ ಬಿ ದೇವೆಂದ್ರಪ್ಪ

ಅದ್ದೂರಿ ಮೆರವಣಿಗೆ ನಡೆಸುವ ಮೂಲಕ ಶಾಸಕರುನ್ನು ಬರಮಾಡಿಕೊಂಡ ದೇವಿಕೆರೆ ಗ್ರಾಮಸ್ಥರು ಗ್ರಾಮದಲ್ಲಿ ಸಂಭ್ರಮದಿಂದ ನಡೆದ ನೂತನ ಶಾಸಕರಿಗೆ ಅಭಿನಂದನ ಸಮಾರಂಭ

ನಾನು ಶಾಸಕನಾಗಲು ಈ ಸ್ಥಾನಕ್ಕೆ ಬರಲು ಬಸಾವಪುರ ರವಿಚಂದ್ರ ಕಾರಣ ನಾನು ಕಳೆದ ದಿನಗಳಲ್ಲಿ ಜೆಡಿಎಸ್ ಪಕ್ಷ ತೊರೆದು ಉಸ್ತುವಾರಿ ಸಚಿವರಾದ ಮಲ್ಲಿಕಾರ್ಜುನ್ ಅವರ ನೆತೃತ್ವದಲ್ಲಿ ಪಕ್ಷದ ಬಲವರ್ಧನೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು.ಬಸವಾಪುರ ರವಿಚಂದ್ರ ಅಂದಿನಿಂದ ಪಕ್ಷನಿಷ್ಠೆಯಿಂದ ಶ್ರಮಿಸಿದ ಫಲವಾಗಿ ದೈವಾನುಗ್ರಹದಿಂದ ಇಂದು ಶಾಸಕನಾಗಿರುವೆ.ವ್ಯಕ್ತಿಗೆ ಒಳ್ಳೆಯದು ಬಯಸಿದವರನ್ನು ಸ್ಮರಿಸಬೇಕು ಎಂದು ಶಾಸಕರು ಮಾರ್ಮಿಕವಾಗಿ ನುಡಿದರು.

ನೀರಾವರಿ ನಾಡಾಗಲಿದೆ:57 ಕೆರೆ ತುಂಬಿಸುವ ಯೋಜನೆಯಡಿ 11ಕೆರೆಗಳಿಗೆ ನೀರು ಬಂದಿದ್ದು.5ಕಿ.ಮೀ ದೂರ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡು ಎಲ್ಲಾ ಕೆರೆಗಳು ಭರ್ತಿಯಾಗಲಿವೆ.ಅಲ್ಲದೆ ಭದ್ರಾಮೇಲ್ದಂಡೆ ಯೋಜನೆ ಸಾಕಾರಗೊಂಡಿದ್ದು.ಬರದನಾಡು ನೀರಾವರಿ ನಾಡಾಗಲಿದೆ .

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ರಾಜ್ಯದಲ್ಲಿ ಯಾವ ಒಂದು ಸರಕಾರ ನೀಡದ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಮತ್ತು ನಾವು ನೀಡಿದ್ದೆವೆ.ಆದರೆ ಇದೀಗ ಬರಗಾಲ ದೊಡ್ಡ ಸವಾಲಾಗಿ ಎದುರಾಗಿದೆ.ಹಿಂಗಾರು ಮಳೆಯಾದರೂ ರೈತರನ್ನು ಕೈಹಿಡಿಯಬೇಕಿದೆ.10 ವರ್ಷ ಆಡಳಿತ ನಡೆಸಿದ ಬಿಜೆಪಿ ಸರಕಾರ ನರೇಗಾ ಯೋಜನೆಯನ್ನು ಮಾನದಂಡಗಳೊಂದಿಗೆ ಸಂಪೂರ್ಣ ಕುಂಠಿತಗೊಳಿಸಿದೆ.ಸುಳ್ಳಿನ ಪ್ರಚಾರದ ಅಬ್ಬರದಲ್ಲಿ ರಾಜ್ಯದಲ್ಲಿನ ಕೂಲಿಕಾರ್ಮಿಕ,ರೈತರನ್ನು,ಯುವಕರನ್ನು ಕಂಗಾಲುಗೊಳಿಸಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಗ್ರಾ.ಪಂ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಅಬಿನಂದನಾ ಕಾರ್ಯಕ್ರಮ ದೇವಿಕೆರೆಯಲ್ಲಿ ವಿಳಂಬವಾಗಿತ್ತು.ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷ ಕೊಟ್ಟಮಾತಿನಂತೆ ಆರ್ಥಿಕ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡಿಕೊಂಡು ₹76000 ಕೋಟಿ ತೆರಿಗೆ ಹಣ ಸಂಗ್ರಹಿಸಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರಮಾಡುತ್ತಿದ್ದ ಬಿಜೆಪಿ ಪಕ್ಷದವರಿಗೆ ತಕ್ಕ ಪಾಠ ಕಲಿಸಿದೆ ಎಂದು ತಿಳಿಸಿದರು.

ಮುಖಂಡ ಬಸವಾಪುರ ರವಿಚಂದ್ರ ಮಾತನಾಡಿ,2018 ‌ರಿಂದ ದೇವಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿ ಅಭಿವೃದ್ದಿ ಮರೀಚಿಕೆಯಾಗಿದೆ.ಗ್ರಾಮಪಂಚಾಯಿತಿ ಅನುದಾನ ಮಾತ್ರ ಬಳಕೆಯಾಗಿದೆ.ಬಡಕೂಲಿಕಾರ್ಮಿಕರಿಗೆ ವರದಾನವಾಗಿದ್ದ ನರೇಗಾ ಯೋಜನೆಯನ್ನು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರು ಸ್ಥಗಿತಗೊಳಿಸಿದ್ದರು ಎಂದು ದೂರಿದರು.

ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್ ಅವರು ಮಾಜಿ ಪ್ರಧಾನಿ ದೇವಗೌಡರ ಹೆಸರಿನಲ್ಲಿ ಸುಳ್ಳಿನ ರಾಜಕಾರಣಮಾಡುವುದಲ್ಲದೆ ಸೊಸೈಟಿಯಲ್ಲಿ
ಬೇನಾಮಿ ಸಾಲಸೃಷ್ಠಿಸಿ ಶೇ‌. 12 ರಷ್ಟು ಬಡ್ಡಿಯೊಂದಿಗೆ ನವೀಕರಣಗೊಳಿಸಿ ಅವ್ಯವಹಾರ ಮಾಡಿದ್ದಾರೆ.ಅವರ ಅಳಿಯ ರುದ್ರೇಶ್ ಆಸ್ಪತ್ರೆ ನೌಕರನಾಗಿದ್ದು.ಕರ್ತವ್ಯ ನಿರ್ವಹಿಸದೆ ಪೂರ್ಣಕಾಲಿಕ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಸಕರಿಗೆ ಹಾಗೂ ಮುಖಂಡರುಗಳಿಗೆ ಸೇಬು ಹಣ್ಣಿನ ಹಾರಹಾಕಿ,ಮೆರವಣಿಗೆಯಲ್ಲಿ ಕಾರ್ಯಕರ್ತರು ವಿಜೃಂಭಿಸಿದರು.

ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ಮೆದಗಿನಕೆರೆ ವೀರಣ್ಣ,ವಕೀಲ ಪ್ರಕಾಶ್,ರುದ್ರಸ್ವಾಮಿ,ರಾಮರೆಡ್ಡಿ,ಸಣ್ಣಸೂರಜ್ಜ,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,ಗೌಸ್ ಪೀರ್,ಪಲ್ಲಾಗಟ್ಟೆ ಶೇಖರಪ್ಪ,ರುದ್ರೇಶ್,ಗ್ರಾ.ಪಂ.ಸದಸ್ಯರಾದ ನಾಗರಾಜ್,ಕರಿಬಸಮ್ಮ,ಚೌಡಮ್ಮ,ತಿಪ್ಪಕ್ಕ,ಗುರುಸ್ವಾಮಿ ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!