Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on October 9

ತಾಲೂಕಿನ ಯುವ ಪ್ರತಿಭೆಗಳ ಕಿರುಚಿತ್ರದ ಹೆಸರೇ ಟೈಟ್ಲಿಲ್ಲ

ಜಗಳೂರು: ತಾಲೂಕಿನ ಯುವ ಪ್ರತಿಭೆಗಳು ‘ಟೈಟ್ಲಿಲ್ಲ’ ಎಂಬ ಶೀರ್ಷಿಕೆಯಡಿಯಲ್ಲಿ ಕಿರುಚಿತ್ರವನ್ನು ಮಾಡಿದ್ದಾರೆ.
ತಾಲೂಕಿನ ಹುಚ್ಚವನಹಳ್ಳಿ ಕುಗ್ರಾಮದ ನಿವಾಸಿಯಾದ ಹಳ್ಳಿಪ್ರತಿಭೆಯಾದ ಆರ್ ಎಲ್ ಜಗಜೀವನ್ ರಾಮ್ ಅವರ ನಿರ್ದೇಶನದಲ್ಲಿ ಹಾಗೂ ಜೆಎಲ್ ಕ್ರಿಯೇಶನ್ಸ್ ನವರ ನಿರ್ಮಾಣದ ಟೈಟ್ಲಿಲ್ಲ ಎಂಬ ಕಿರುಚಿತ್ರವನ್ನು ತಯಾರಿಸಿದ್ದಾರೆ. ಈ ಚಿತ್ರವು ಇಂದು ಸಂಜೆ 6:30ಕ್ಕೆ ಸರಿಯಾಗಿ ಯೂಟ್ಯೂಬ್ ನ JL CREATIONS ಎಂಬ ಚಾನಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಅನೇಕ ಮುಖಂಡರು ಶುಭ ಹಾರೈಸಿದ್ದಾರೆ.
ತಾರಾಗಣ:ರಮೇಶ್ ವ್ಯಾಸಗೊಂಡನಹಳ್ಳಿ, ನಾಗರಾಜ್ ವ್ಯಾಸಗೊಂಡನಹಳ್ಳಿ, ಶಿವು ಕುಮಾರ್ ಅಸಗೊಡು, ನಾಗರಾಜ್ ಮಹರ್ಷಿ, ಅಂಜಿನಿ ಬಿಸ್ತುವಳ್ಳಿರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಂದೀಪ್ ಹೆಚ್ ಮರೆನಹಳ್ಳಿ, ಹಾಗೂ ಜಗಜೀವನ್ ರಾಮ್ ಆರ್.ಎಲ್ ರವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ನಿಮ್ಮ ತಾಲೂಕಿನ ಯುವ ಪ್ರತಿಭೆಗಳು ಸಣ್ಣ ಪ್ರಯತ್ನ ಮಾಡಿದ್ದಾರೆ. ದಯವಿಟ್ಟು ಎಲ್ಲರೂ ವೀಕ್ಷಿಸಿ ಪ್ರೋತ್ಸಾಹಿ ಆಶೀರ್ವಾದಿಸಬೇಕು” ಎಂದು ಮಾಧ್ಯಮದವರ ಈ ಮೂಲಕ ಸಮಸ್ತ ಜನತೆಗೆ ತಿಳಿಸುವಂತೆ ಕಿರು ಚಿತ್ರದ ತಂಡದವರು ಮನವಿ ಮಾಡಿಕೊಂಡಿದ್ದಾರೆ

Leave a Reply

Your email address will not be published. Required fields are marked *

You missed

error: Content is protected !!