Editor m rajappa vyasagondanahalli
- ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶ್ರೀ ಶ್ರೀ ಆದಿ ಜಾಂಬವ ಕೋಡಿಹಳ್ಳಿ ಬೃಹನ್ ಮಠ ಆವರಣದಲ್ಲಿ ಶ್ರೀ ಶ್ರೀ ರುದ್ರಾಕ್ಷಿ ಮುನಿ ದೇಶಿ ಕೇಂದ್ರ ಸ್ವಾಮೀಜಿ ಹಾಗೂ ಶ್ರೀ ಮಾರ್ಕಂಡಯ್ಯ ಮುನಿ ಸ್ವಾಮೀಜಿ ಕೃಪಾ ಅಶಿರ್ವಾದೊಂದಿಗೆ ಶರನ್ನವರಾತ್ರಿ ಉತ್ಸವ ಅಂಗವಾಗಿ ಶ್ರೀ ಮಠದಲ್ಲಿ ದೀಪಾರಾಧನೆ. ಚಂಡಿಕಾ ಹೋಮ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸುವಂತೆ ಆದಿಜಾಂಬವ ಶ್ರೀ ಷಡಾಕ್ಷರಿ ದೇಶಿ ಕೇಂದ್ರ ಸ್ವಾಮಿಜಿ ತಿಳಿಸಿದರು.
By shukradeshenews Kannada | online news portal |Kannada news online
By shukradeshenews | published on October 18
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾದಿಗ ಸಮುದಾಯದ ಮುಖಂಡರುಗಳುನ್ನು ಮತ್ತು ಕ್ಷೇತ್ರದ ಶಾಸಕ ಬಿ ದೇವೆಂದ್ರಪ್ಪ ರವರಿಗೆ ಆಹ್ವಾನಿಸಿ ದಿನಾಂಕ 22 -10-2023 ರ ಭಾನುವಾರ ನಡೆಯಲಿರುವ ದೀಪಾ ಆರಾಧನೆ ಮತ್ತು ಚಂಡಿಕಾ ಹೋಮದಲ್ಲಿ ಭಾಗವಹಿಸುವಂತೆ ಆಹ್ವಾನ ಕರೆ ನೀಡಿ ಭಕ್ತರುನ್ನುದ್ದೆಶಿಸಿ ಮಾತನಾಡಿದರು ನಮ್ಮ ಶ್ರೀ ಮಠ ಮೂಲ ಮಠವಾಗಿದ್ದು ನಮ್ಮ ಸಮಾಜದ ಏಳ್ಗಿಗೆ ಶ್ರಮಿಸಲಿದೆ ಸಮುದಾಯದ ಸಂಘಟನೆ ಮೂಲಕ ನಮ್ಮ ಮೂಲ ಗುರುಗಳ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ ಅಸ್ತಿತ್ವ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಗುರು ಪರಂಪರೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಬಾಗದಲ್ಲಿ ನಮ್ಮ ಮಠದ ಹಿರಿಯ ಗುರುಗಳಾದ ಶ್ರೀ ಮಾರ್ಕಾಂಡಯ್ಯ ಮುನಿ ಸ್ವಾಮೀಜಿಯವರು ಹೆಚ್ಚು ಭಕ್ತರ ಸಂಪರ್ಕ ಹೊಂದಿರುವ ಪ್ರದೇಶವಾಗಿದ್ದು ಅವರು ಭಕ್ತರ ಮೇಲೆ ಇಟ್ಟಿರು ಪ್ರೀತಿ ವಿಶ್ವಾಸ ನಂಬಿಕೆ ಇಟ್ಟಿರುವ ಚಿಂತನೆ ಮೌಲ್ಯಗಳುನ್ನು ಪಾಲಿಸಿಕೊಂಡು ಹೋಗುವ ದಿಸೆಯಲ್ಲಿ ನಾವುಗಳು ಸಾಗಿದ್ದೆವೆ .
ಶಾಸಕರು ತಪ್ಪದೆ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಕರೆ ನೀಡಿದರು. ಕ್ಷೇತ್ರದ ಶಾಸಕ ಬಿ. ದೇವೆಂದ್ರಪ್ಪ ರವರು ಉತ್ತಮ ವಾಗ್ಮಿಗಳು ಮತ್ತು ವಿಚಾರವಂತ ಶಾಸಕರಿದ್ದು ಮತ್ತೂಷ್ಟು ಸಂವಿಧಾನಿಕ ಆಡಳಿತ ವ್ಯವಸ್ಥೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು.
ಈ ವೇಳೆ ಶಾಸಕ ಬಿ ದೇವೆಂದ್ರಪ್ಪ ಶ್ರೀಗಳ ಅಶಿರ್ವಾದ ಪಡೆದು ಮಾತನಾಡಿದರು ಶ್ರೀಮಠಕ್ಕೆ ನಮ್ಮ ತನು ಮನ ಧನ ಸಹಕಾರದೊಂದಿಗೆ ಸಹಕಾರ ನೀಡುವೆ ನಮ್ಮ ಶೋಷಿತ ಸಮುದಾಯದ ಮಠಗಳು ಅಭಿವೃದ್ಧಿಯಾಗದೆ ಸಮುದಾಯಗಳು ಅಭಿವೃದ್ಧಿಯಾಗಲು ಅಸಾಧ್ಯ ಸ್ವಾಮೀಜಿಯವರು ಸಮಾಜದ ಸಂಘಟನೆ ಮಾಡುವ ಮೂಲಕ ಸಮಾಜದ ಅಭಿವೃದ್ಧಿಯಾಗುವುದರ ಜೊತೆಗೆ ಮಠಮಾನ್ಯಗಳು ಉನ್ನತಿಯಾಗಬೇಕು. ನಾನು ಪ್ರತ್ಯೇಕವಾಗಿ ಶ್ರೀಮಠಕ್ಕೆ ಸಮುದಾಯದ ಮುಖಂಡರೊಂದಿಗೆ ಭೇಟಿ ನೀಡುವೆ ತಮ್ಮ ಆತಿಥ್ಯವನ್ನ ಸ್ವಿಕರಿಸುವೆ . ನಾನು ಕ್ಷೇತ್ರದಲ್ಲಿ ಕೇವಲ ರಸ್ತೆ ಚರಂಡಿ ಮಾಡುವುದಿಲ್ಲ ಜನತೆಗೆ ಮೂಲಭೂತ ಸೌಕರ್ಯಗಳು ಒದಗಿವುದರ ಜೊತೆಗೆ ಶಿಕ್ಷಣ ಆರೋಗ್ಯ ಮಾನವೀಯತೆ ಅಧ್ಯಾತ್ಮಿಕ ವೈಚಾರಿಕತೆ ವಿಚಾರದ ಮೂಲಕ ಸಮಾಜದ ಕಣ್ಣು ತೆರೆಸುವಂತ ಕೆಲಸ ಮಾಡಲು ಸದಾ ಸಿದ್ದನಿರುವೆ ನಿಮ್ಮಂತಹ ಶ್ರಿಗಳ ಅಶಿರ್ವಾದ ನಮ್ಮ ಮೇಲೆರಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯ ಮುಖಂಡರಾದ ಜಿ ಹೆಚ್ ಶಂಭುಲಿಂಗಪ್ಪ. ಹಟ್ಟಿ ತಿಪ್ಪೇಸ್ವಾಮಿ. ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ ಮಹೇಶ್.ಮುಖಂಡ ಭರತ್ ಗ್ಯಾಸ್ ಮಾಲೀಕ ಓಬಪ್ಪ.ನಿವೃತ್ತ ಪೌರ ನೌಕರ ಸಂಘದ ಪಾಪಣ್ಣ.ನಿವೃತ್ತ ಕೆ ಇ ಬಿ ನೌಕರ ಶಿವಣ್ಣ. ಮಾಜಿ ಪಪಂ ಅದ್ಯಕ್ಷ ಪಿ ಮಂಜುನಾಥ .ಕಾಂಗ್ರೆಸ್ ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಗುತ್ತಿದುರ್ಗ ಮಹಾಂತೇಶ್.ಅಂಬೇಡ್ಕರ್ ಪುತ್ಥಳಿ ನಿರ್ವಹಣೆ ಸಮಿತಿ ಅಧ್ಯಕ್ಷ ಪೂಜಾರಿ ಸಿದ್ದಪ್ಪ.ವಕೀಲ ಹನುಮಂತಪ್ಪ. ಹಾಲೇಶ್. ಸಹೋದರ ಸಮಾಜದ ಮುಖಂಡ ಕೆ ಎಸ್ ಪ್ರಭು.ಕಾಂಗ್ರೆಸ್ ಯುವ ಘಟಕದ ವಿಜಯ್ ಕೆಂಚೊಳ್. ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಹೆಚ್ ಆರ್ ಬಸವರಾಜ್.ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ. ಬಾಬು ಮರೆನಹಳ್ಳಿ.ಬಸವರಾಜ್ ಸಿದ್ದಮ್ಮನಹಳ್ಳಿ. ಮಾದಿಹಳ್ಳಿ ಮಂಜುನಾಥ. ಬಿ ಓ ಮಾರುತಿ. ದಸಂಸ ಮುಖಂಡರಾದ ಕುಬೇರಪ್ಪ.ಮಲೆಮಾಚಿಕೆರೆ ಸತೀಶ್.ಚಂದ್ರಪ್ಪ.ನಿಬಗೂರು ಮುನಿಸ್ವಾಮಿ. ಸೇರಿದಂತೆ ಮುಂತಾದವರು ಹಾಜರಿದ್ದರು.