ಕಳೆದ ದಿನಗಳ ಹಿಂದೆ ನಮ್ಮ ಶುಕ್ರದೆಸೆ ಪತ್ರಿಕೆ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿ ನೆನೆಗುದಿಗೆ ಜನಪ್ರತಿನಿಧಿಗಳು ಮೌನ ಎಂದು ವ್ಯಾಪಕ ವರದಿ ಮಾಡಲಾಯಿತು ಎಚ್ಚೆತ್ತ ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರರವರ ಇಚ್ಚಾಶಕ್ತಿಯ ಸಹಕಾರದಿಂದ ಇದೀಗ ಪುತ್ಥಳಿ ಸಕಾರಗೊಂಡಿದೆ. ಶಾಸಕರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಪುತ್ಥಳಿ ಅನಾವರಣ ಜಗಳೂರು ಇತಿಹಾಸದಲ್ಲಿಯೆ ಸುವರ್ಣಕ್ಷಾರಗಳಲ್ಲಿ ದಾಖಲೆಯ ದಿನ ದಿ ಮಾರ್ಚ್ 13 ಸೋಮುವಾರ ಶಾಸಕರ ಅಧ್ಯಕ್ಷತೆಯಲ್ಲಿ ಮಾನ್ಯ ಕೇಂದ್ರ ಸಚಿವ ಎ ನಾರಯಣಸ್ವಾಮಿರವರಿಂದ ಲೋಕರ್ಪಣೆಗೊಳ್ಳುತ್ತಿರುವುದು ಸಂತೋಷದ ಸಂಗತಿ ಒಟ್ಟಾರೆ ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರರವರು ನಿಜಕ್ಕೂ ಕೂಡ ನುಡಿದಂತೆ ನಡೆದಿದ್ದಾರೆ . ಪುತ್ಥಳಿಯ ಸ್ಥಾಪನೆ ಮಾಡುವುದು ಶತ ಸಿದ್ದ ಎಂದು
ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಬಹುಜನ ಅಭಿಮಾನಿಗಳಿಗೆ ಮಾತು ಕೊಟ್ಟಂತೆ ಸ್ಥಾಪನೆ ಮಾಡಿರುವುದು ಅಂಭಿನಂದನಾರ್ಹ ಪುತ್ಥಳಿ ಸ್ಥಾಪನೆ ಮಾಡಲು ಶ್ರಮಿಸಿದ ಪುತ್ಥಳಿ ಸಮಿತಿ ಹಿರಿಯ ಮತ್ತು ಕಿರಿಯ ಪದಾಧಿಕಾರಿಗಳು ಶ್ರಮಿಸಿದ ದಲಿತ ಬಂಧುಗಳು ಬಹುಜನ ಅಭಿಮಾನಿಗಳಿಗೆ .ಜೈ ಭೀಮ ಅಭಿಮಾನಿಗಳಿಗೆ ಹೃದಯ ಪೂರ್ವಕ ನಮನಗಳು