ಮಾರ್ಚ್ 18 ರಂದು ಜಗಳೂರು ಪಟ್ಟಣಕ್ಕೆ ಪ್ರಹ್ಲಾದ್ ಜೋಶಿ ಆಗಮನ ಅಪ್ಪರ್ ಭದ್ರಾ ಯೋಜನೆ ಭೂಮಿ ಪೂಜೆ ನೇರವೇರಿಸಲಾಗುವುದು ಎಂದು ಶಾಸಕ ಎಸ್ ವಿ ರಾಮಚಂದ್ರ ಹೇಳಿದರು ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಬಿ ಜೆ ಪಿ ಎಸ್ಸಿ ಮೋರ್ಚಾ ಸಮಾವೇಶದ ಅಂಗವಾಗಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಭೆಯನ್ನುದ್ದೇಶಿ ಮಾತನಾಡಿದರು ಬರುವ ಮಾರ್ಚ್ 18 ರಂದು ಜಗಳೂರಿನ ಮಹತ್ವದ ಯೋಜನೆ ಅಪ್ಪರ್ ಭದ್ರಾ ನೀರಾವರಿ ಯೋಜನೆಯ ಭೂಮಿ ಪೂಜೆಯನ್ನು ಕೇಂದ್ರ ಮಂತ್ರಿಗಳಾದ ಪ್ರಹ್ಲಾದ ಜೋಶಿಯವರಿಂದ ಚಾಲನೆಗೊಳ್ಳುವುದು ಪುನ ತಾಲ್ಲೂಕಿನ ಕೆಲ ಅಭಿವೃದ್ಧಿ ಕಾಮಗಾರಿಗಳಾದ 450 ಕೊಟಿ ರೂಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಭೂಮಿ ಪೂಜೆ ನೇರವೆರಿಸಲಾಗುವುದು ಎಂದು ಅವರು ತಿಳಿಸಿದರು . ಆ ದಿನವೆ ಎಸ್ಸಿ ಮೋರ್ಚಾ ಸಮಾವೇಶವು ಕೂಡ ಜರುಗುವುದು ಇನ್ನು 15 ದಿನಗಳಲ್ಲಿಯೆ ಕೆರೆ ತುಂಬಿಸುವ ಯೋಜನೆಡಿಯಲ್ಲಿ 10 ಕೆರೆಗಳಿಗೆ ನೀರುಣಿಸಲಾಗುವುದು ಭರವಸೆ ನೀಡಿದರು… ಬಿ ಜೆ ಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಹನುಮಂತನಾಯ್ಕ್ ಮಾತನಾಡಿ ಜಗಳೂರು ಪ್ರದೇಶದಲ್ಲಿ ಎಸ್ಸಿ ಮೋರ್ಚಾ ಸಮಾವೇಶ ಜರುಗುವುದರಿಂದ 15 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷಿಯಿದೆ.ಎಸ್ಸಿ ಮೋರ್ಚಾ ರಾಜ್ಯ ನಾಯಕರುಗಳು ಸಹ ಆಗಮಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಯಾವ ಜನಾಂಗದ ನಿಗಮ ಮಂಡಳಿ ಮಾಡಿರಲಿಲ್ಲ ಇದೀಗ ನಮ್ಮ ಭಾರತೀಯ ಜನತಾ ಪಕ್ಷ ಸರ್ವರ ಪ್ರತ್ಯೇಕ ನಿಗಮ ಮಂಡಳಿ ರಚಿಸಿ ಆ ಮೂಲಕ ಸೌಲಭ್ಯಗಳನ್ನು ಎಸ್ಸಿ ಎಸ್ಟಿ .ಎಲ್ಲಾ ವರ್ಗದವರಿಗೆ ಮೀಸಲು ಸೌಲಭ್ಯ ಸಿಗುವಂತ ವ್ಯವ ಕಲ್ಪಿಸಿದೆ. ಬಿ ಜೆ ಪಿ ಮುಖಂಡ ಆರುಂಡಿ ನಾಗರಾಜ್ ಮಾತನಾಡಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಜಾಗೃತಿಯಾಗಬೇಕು ಚುನಾವಣೆ ಸಮೀಪಿಸುತ್ತಿದ್ದು ಸೇನಾನಿಗಳಂತೆ ಭೂತ ಮಟ್ಟದಲ್ಲಿ ಕೆಲಸ ಮಾಡಿ ಸರ್ಕಾರದ ಯೋಜನೆಗಳನ್ನು ಜನತೆಗೆ ತಿಳಿಸುವ ಮೂಲಕ ಪುನ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮಿಸಬೇಕು.18 ರಂದು ಜರುಗುವ ಎಸ್ಸಿ ಮೋರ್ಚಾ ಸಮಾವೇಶಕ್ಕೆ ಎಲ್ಲಾ ಇತರೆ ವರ್ಗದ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನ ಯಶ್ ಸ್ವಿಗೋಳಿಸುವಂತೆ ಕರೆ ನೀಡಿದರು ಈ ಸಂದರ್ಭದಲ್ಲಿ ಬಿ ಜೆ ಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ .ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ.ಮಾಜಿ ಜಿಪಂ ಸದಸ್ಯ ಸೊಕ್ಕೆ ನಾಗರಾಜ್.ಮುಖಂಡ ಶಶಿಧರ್.ತಾಪಂ ಮಾಜಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದಣ್ಣ.ಮಾಜಿ ಪಪಂ ಅದ್ಯಕ್ಷ ಅರ್ ತಿಪ್ಪೇಸ್ವಾಮಿ. ಮುಖಂಡರಾದ .ಗಂಗಾಧರ್.ಬಸರವರಾಜ್.ಸೇರಿದಂತೆ ಮುಂತಾದವರು ಹಾಜರಿದ್ದರು.