Editor m rajappa vyasagondanahalli

By shukradeshenews Kannada | online news portal |Kannada news online   October 22

ನಾಗ್ಪುರ ದೀಕ್ಷಾ ಭೂಮಿಯಾತ್ರಾರ್ಥಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ.

ಜಗಳೂರು ಸುದ್ದಿ:ಮಹಾರಾಷ್ಟ್ರದ ನಾಗ್ಪುರ ಬೌದ್ದ ಧರ್ಮದ ಪವಿತ್ರ ಸ್ಮಾರಕ.ಬಾಬಾಸಾಹೇಬರ ಅಂಬೇಡ್ಕರ್ ದೀಕ್ಷೆಪಡೆದಿದ್ದು ಅವರ ಅನುಯಾಯಿಗಳಿಗೆ ಪವಿತ್ರ ಸ್ಥಳ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪರ್ಣೆ ಮಾಡಿ ನಂತರ ನಾಗ್ಪುರ ದೀಕ್ಷಾ ಭೂಮಿ ಗೆ ತೆರಳುವ 25 ಯಾತ್ರಾರ್ಥಿಗಳಿಗೆ ಹಸಿರು ನಿಶಾನೆ ತೋರಿಸಿ ಶುಭಕೋರಿ ಪ್ರಯಾಣ ಸುಖಕರವಾಗಿರಲಿ ಎಂದು ಆಶಿಸಿ ಮಾತನಾಡಿದರು.

ಗೌತಮ ಬುದ್ದನ ಜೀವನ ಮತ್ತು ಬೋಧನೆ‌ ಭವ್ಯವಾದವು.ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು.ಅಂತಹ ಬೌದ್ದ ಧರ್ಮದ ದೀಕ್ಷೆ ಸ್ವೀಕರಿಸಿದ ಸಂವಿಧಾನ ಶಿಲ್ಪಿ ಮಹಾನ್ ನಾಯಕ ಬಾಬಾಸಾಹೇಬ ಡಾ ಬಿ ಆರ್ ಅಂಬೇಡ್ಕರ್ ರವರ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶೋಷಿತ ಸಮುದಾಯ ಗಳ ಕಾಳಜಿಯಿಂದ ಸಮಾಜಕಲ್ಯಾಣ ಇಲಾಖೆಯಡಿ ಎಸ್ ಸಿ ಎಸ್ ಟಿ ಸಮುದಾಯದ ಅಂಬೇಡ್ಕರ್ ಅನುಯಾಯಿಗಳಿಗೆ ಅರ್ಜಿ ಆಹ್ವಾನಿಸಿ ಆಯ್ಕೆಯಾದ ಪ್ರತಿಯೊಬ್ಬರಿಗೂ ತಲಾ ₹5000 ವೆಚ್ಚದಲ್ಲಿ ದೀಕ್ಷಾಭೂಮಿ ಯಾತ್ರಾರ್ಥಿಗಳಿಗೆ ಊಟ ವಸತಿ,ಸಾರಿಗೆ ಸೌಕರ್ಯ ಒದಗಿಸುತ್ತಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ತಾಲೂಕಿನಲ್ಲಿ ಮಾಹಿತಿ ಕೊರತೆಯಿಂದ ಕೆಲವರೇ ತೆರಳುತ್ತಿದ್ದಾರೆ.ಮುಂದಿನ ಬಾರಿ ಪೂರ್ವಭಾವಿ ಸಭೆ ಕರೆದು ಇಲಾಖೆಯವರು ಜಾಗೃತಿ ಮೂಡಿಸಬೇಕು.ಗ್ರಾಮೀಣ ಭಾಗದಿಂದಲೂ‌ ಅಧಿಕ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಸರಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು.ಇದೀಗ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಅಲ್ಲದೆ ಅದ್ದೂರಿಯಾಗಿ ಸ್ವಾಗತಿಸಲಾಗುವುದು ಅಲ್ಲಿನ ಅನುಭವ,ವಿಚಾರ ವಿನಿಮಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಶಾಸಕರು

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ಬಾಬಾಸಾಹೇಬರು ಹಿಂದೂ ಧರ್ಮದಲ್ಲಿನ ಮತಾಂಧತೆ, ಅಸ್ಪೃಶ್ಯತೆಯಿಂದ ಬೇಸತ್ತು ಬೌದ್ದ ಧರ್ಮ ದೀಕ್ಷೆ ಸ್ವೀಕರಿಸಿದರು.ಅಂದು 4 ಲಕ್ಷ ಅನುಯಾಯಿಗಳು ಬೌದ್ದ ಧರ್ಮ ಸ್ವೀಕರಿಸಿದ ಇತಿಹಾಸವಿದೆ.ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕು.ದೇಶದಲ್ಲಿ ಮನುವಾದಿಗಳಿಂದ ಕೋಮುವಾದಕ್ಕೆ ಮುಕ್ತಿನೀಡಬೇಕು.ಪ್ರತಿ ವರ್ಷ ನಾಗ್ಪುರ ದೀಕ್ಷಾ ಭೂಮಿಗೆ ಪ್ರತಿವರ್ಷ ಲಕ್ಷಾಂತರ ಅಂಬೇಡ್ಕರ್ ವಾದಿಗಳು ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.ತಾಲೂಕಿನ ಪದವೀಧರ ಎಸ್ ಸಿ ಎಸ್ ಟಿ ಸಮುದಾಯದ ಯುವಕರು ಜಾಗೃತರಾಗಬೇಕಿದೆ ಎಂದರು.

ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ಶಂಭುಲಿಂಗಪ್ಪ, ಕಾಂಗ್ರೆಸ್ ಮುಖಂಡ ಕೆ ಎಸ್ ಪ್ರಭಣ್ಣ. ಭರತ್ ಗ್ಯಾಸ್ ಮಾಲಿಕ ಒಬಪ್ಪ. ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ನಿಲಯ ಮೇಲ್ವಿಚಾರಕರಾದ ಮಹಾಬಲೇಶ್,ಮಹಮ್ಮದ್ ಫಯಾಜ್ ಭಾಷಾ, ರಾಜ್ಯ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದ ಗೌರವ ಅಧ್ಯಕ್ಷ ಸಿ.ಬಸವರಾಜ್,ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜ್,ರಾಜ್ಯ ಉಪಾಧ್ಯಕ್ಷರಾದ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ,ಧನ್ಯಕುಮಾರ್ ಎಚ್.ಎಂ.ಹೊಳೆ,ಪ್ರಧಾನಕಾರ್ಯದರ್ಶಿ ಚಿಕ್ಕಮ್ಮಮಹಟ್ಟಿ ಮಂಜುನಾಥ್,ಖಜಾಂಚಿ ಮಾರುತಿ,ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಮಾದಿಹಳ್ಳಿ ಮಂಜುನಾಥ್,ಬಸವರಾಜ್ ಸಿದ್ದಮ್ಮನಹಳ್ಳಿ,ಕಾರ್ಯದರ್ಶಿಗಳಾದ ಮರೇನಹಳ್ಳಿ ಬಾಬು,ಮಾರಪ್ಪ,ನಿರ್ದೇಶಕರಾದ ಜಗದೀಶ್, ಸಂದೀಪ್ ಸಿಎಂ ಹೊಳೆ,ಸತೀಶ್ ಮಲೆಮಾಚಿಕೆರೆ,ಜೀವನ್,ಸಂದೀಪ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ಓಬಣ್ಣ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!