Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಅಕ್ಟೋಬರ್ 21
‘ ಬಲ್ಲಾಳ’ ಕಾದಂಬರಿ ಕೃತಿ ಬಿಡುಗಡೆ.
ಜಗಳೂರು ಸುದ್ದಿ:ತಾಲೂಕಿನ ತಮಲೇಹಳ್ಳಿ ಗ್ರಾಮದ ಗಿರಿಜಾ ಸಭಾಭವನದಲ್ಲಿ ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಶ್ರೀ ದಂಡಿನ ರಾಜಪ್ಪ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದ ಸ್ಮರಣಾರ್ಥವಾಗಿ ರಂಗಕರ್ಮಿ ಹಾಗೂ ಲೇಖಕ ಶಿವಕುಮಾರ್ ನಾಯಕ ದೊರೆ ವಿರಚಿತ ‘ಬಲ್ಲಾಳ’ಕಾದಂಬರಿ ಲೋಕರ್ಪಣೆ ಕಾರ್ಯಕ್ರಮ ಜರುಗಿತು..
ಕೃತಿಕಾರ ಲೇಖಕ ಶಿವಕುಮಾರ ನಾಯಕ ದೊರೆ ಮಾತನಾಡಿದರು ಡಿ ವೈ ಎಸ್ ಪಿ ಶಿವಕುಮಾರ್ ರವರ ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ನವರು ಕಳೆದ ವರ್ಷದಿಂದ ಸತತವಾಗಿ ದಂಡಿನ ರಾಜಪ್ಪ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆಹ್ವಾನಿಸಿ ಗೌರವಿಸುತ್ತಿರುವುದು ಹಾಗೂ ನಾನು ರಚಿಸಿದ ಕಾದಂಬರಿ ಬಿಡುಗಡೆ,ನಾಟಕ ಅಭಿನಯ ವೇದಿಕೆಗಳು ನನಗೆ ಸಂತೋಷ ತಂದಿದ್ದು ನಿಮ್ಮ ಆತಿಥ್ಯ ಸಂತೋಷ ತಂದಿದೆ ಎಂದು ಶ್ಲಾಘಿಸಿದರು..
ಮೈಸೂರು ಕೃಷಿ ತಜ್ಞ ಅವಿನಾಶ್ ಉಪನ್ಯಾಸ ನೀಡಿ,ಆಧುನಿಕವಾಗಿ ರೈತರು ಜಮೀನುಗಳಲ್ಲಿ ಕೃಷಿ ಉತ್ಪನ್ನಗಳಿಗೆ ಅಧಿಕ ವ್ಯಯ ಭರಿಸುತ್ತಿದ್ದು.ಪ್ಲಾಸ್ಟಿಕ್ ಸುಡುವುದರಿಂದ ವಿಷಪೂರಿತ ಅನಿಲಗಳಿಂದ ಒಝೋನ್ ಪದರದಲ್ಲಿ ರಂಧ್ರ ಉಂಟಾದ ಪರಿಣಾಮ ಪ್ರಕೃತಿ ವೈಪರಿತ್ಯದಿಂದ ಮಳೆಯ ಕೊರತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಹೊಸ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕಿದೆ.ಜಮೀನುಗಳಲ್ಲಿ ಟ್ರಂಚ್,ಬದು,ನಿರ್ಮಾಣ,ಇಳಿಜಾರು ಪ್ರದೇಶದಲ್ಲಿ ಗಿಡಮರಗಳನ್ನು ನೆಡುವ ಮೂಲಕ ನೀರಿನ ಸಂಗ್ರಹಣೆಯಾದರೆ ನಿರೀಕ್ಷಿತ ಬೆಳೆಗಳನ್ನು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಸಂಶೋಧಕ ಹಾಗೂ ಉಪನ್ಯಾಸಕ ಇಮಾಂ ಸಾಹೇಬ ಹಡಗಲಿ,ಬಲ್ಲಾಳ ಕಾದಂಬರಿಯ ತಿರುಳನ್ನು ಕಥಾ ರೂಪದಲ್ಲಿ ತಿಳಿಸಿದ ಅವರು,ಲೇಖಕ ದಂಡಿನ ಶಿವಕುಮಾರ್ ಅವರ ರಚಿಸಿದ ಸುಂದರ ಬಲ್ಲಾಳ ಕಾದಂಬರಿಯಲ್ಲಿ, ಗೂಳಿ ಕಾಳಗ,ಜಾನಪದ ಸೊಗಡು,ನಾಟಿ ವೈದ್ಯಕೀಯ ಪದ್ದತಿ,ಪ್ರಾಣಿದಯೆ,ಕಾರಹುಣ್ಣಿಮೆ ಹಬ್ಬದಲ್ಲಿ ಕರಿ ಮತ್ತು ಬಿಳಿ ಎತ್ತುಗಳ ಓಟದ ಸ್ಪರ್ಧೆ,ರಂಗನ ಪ್ರೇಮಕಥನ,ಫಸಲಿನ ನಿರೀಕ್ಷೆ ಎಲ್ಲವೂ ಅಡಗಿವೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್ ದಂಡಿನ ಮಾತನಾಡಿ,ತಮಲೇಹಳ್ಳಿ ಗ್ರಾಮದ ಸರ್ಕಾರಿ ನೌಕರರ ಸಹಕಾರದಿಂದ ನೌಕರರ ಸಂಘ ರಚಿಸಿ ಡಿಜಿಟಲ್ ಗ್ರಂಥಾಲಯ ತೆರೆಯಲಾಗಿದೆ.ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲಿದೆ.ನವೋದಯ,ಮೊರಾರ್ಜಿ ದೇಸಾಯಿ,ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಗಳ ಪ್ರವೇಶಾತಿ ಸ್ಪರ್ಧಾತ್ಮ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಟ್ರಸ್ಟ್ ವತಿಯಿಂದ ಉರಿಮೆಯ ಹಿರಿಯ ಕಲಾವಿದರಿಗೆ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಹಾಗೂ ಟ್ರಸ್ಟ್ ನಲ್ಲಿ ಟೈಲರಿಂಗ್ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಶಸ್ತಿ ಪತ್ರ,ವಿತರಿಸಲಾಯಿತು.
ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಪೂಜಾರ್ ಅಂಗಡಿ ಬೋರಯ್ಯ,ಸಾಹಿತಿ ಎನ್.ಟಿ.ಎರ್ರಿಸ್ವಾಮಿ,ಮೈಸೂರು ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ರೇವಣ್ಣಸ್ವಾಮಿ,ಸಹೋದರ ಪ್ರಹ್ಲಾದ್,ಸಹೋದರಿ ಲತಾ,ಡಿಪಿ ಹನುಮಂತಪ್ಪ,ಸೇರಿದಂತೆ ಕುಟುಂಬದ ಸದಸ್ಯರು,ಹಾಗೂ ತಾಲೂಕಿನ ಮುಖಂಡರುಗಳು,ಗ್ರಾಮಸ್ಥರು ಇದ್ದರು.