Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on October 30

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕಾಗಿ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ.

ಜಗಳೂರು ಸುದ್ದಿ:ತಾಲೂಕು ಕಛೇರಿ ಮುಂಬಾಗ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಶೀಘ್ರವೇ ನಮ್ಮ ಹಕ್ಕುಗಳಿಗಾಗಿ ಸರ್ಕಾರ ಆಲಿಸುವಂತೆ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲ್ ಅವರ ಮೂಲಕ ಸರಕಾರಕ್ಕೆ ಲಿಖಿತವಾಗಿ ಮನವಿ ಸಲ್ಲಿಸಿ ಆಗ್ರಹಿಸಿದರು..

ಎಐಟಿಯುಸಿ ಗೌರವ ಅಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿದರು,ಕಳೆದ ವರ್ಷ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಹಲವಾರು ರೀತಿಯ ಕಿಟ್,ಲ್ಯಾಪ್ ಟಾಪ್,ಟ್ಯಾಬ್,ಶಾಲಾ ಕಿಟ್,ಆರೋಗ್ಯ ತಪಾಸಣೆ,ಇತರೆ ತರಬೇತಿ ಹೆಸರಿನಲ್ಲಿ ಕಾರ್ಮಿಕರು ದುಡಿದ ಹಣದ ಸೆಸ್ ಹಣವನ್ನು ಆಡಳಿತ ಬಿಜೆಪಿ ಸರಕಾರ ಸಾಕಷ್ಟು ದುಂದು ವೆಚ್ಚ ಮಾಡಿ ಕಾರ್ಮಿಕರ ಹಕ್ಕುಗಳಿಗೆ ಕೊಡಲಿ ಪೆಟ್ಟು ಎಂದು ಆರೋಪಿಸಿದರು.

ರಾಜ್ಯದ ಆಡಳಿತ ಕಾಂಗ್ರೆಸ್ ಸರಕಾರ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮ ತಕ್ಷಣ ನಿಲ್ಲಿಸಬೇಕು.ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು.ಬೋಗಸ್ ಕಾರ್ಡ್ ತಡೆಯಲು ಕ್ರಮ ಕೈಗೊಳ್ಳಬೇಕು.ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಲು ಭಾರತ ದೇಶದ ಅತ್ಯಂತ ಹಿರಿಯ ಕಾರ್ಮಿಕಸಂಘಟನೆ ಎಐಟಿಯುಸಿ ಗೆ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಪ್ರಧಾನ‌ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು.ಕೂಲಿಕಾರ್ಮಿಕರು ಆರ್ಥಿಕ ಸಂಕಷ್ಟ ಸಿಲುಕಿದ್ದಾರೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಾಕಿ ಇರುವ ಸುಮಾರು 14ಲಕ್ಷ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಕೂಡಲೇ ವಿಲೆವಾರಿ ಮಾಡದಿರುವದು ಗಾಯದಮೇಲೆ ಬರೆಎಳೆದಂತಾಗಿದೆ.ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರ ಗಮನಹರಿಸಬೇಕು ಇಲ್ಲವಾದರೆ ಉಗ್ರಸ್ವರೂಪದ ಹೊರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ,ಪ್ರಧಾನಕಾರ್ಯದರ್ಶಿ ಗೊಲ್ಲರಹಟ್ಟಿ ತಿಪ್ಪೇಸ್ವಾಮಿ,ಮುಖಂಡರಾದ ಯೊಗೇಶ್,ದೇವಿಕೆರೆ ಮಧು,ಬಸವರಾಜ್,ಶಿವಮೂರ್ತಿ,ಪಂಪಾಪತಿ,ಗುರು,ಶೇಖರಪ್ಪ,ಅಜ್ಜಪ್ಪ,ಮಂಜುಳಾ ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!