Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 30
ವಿಶಿಷ್ಟ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆಯಿರುತ್ತದೆ ಆ ಪ್ರತಿಭೆಯನ್ನ ಶಿಕ್ಷಕರು ಮತ್ತು ಪೋಷಕರು ಗುರುತಿಸಬೇಕೆಂದರು ಬಡತನಕ್ಕಿಂತ ಮಿಗಿಲಾದ ಶಾಪ ಅಂಗವೈಕಲ್ಯತೆ:ಶಾಸಕ ಬಿ.ದೇವೇಂದ್ರಪ್ಪ ಕಳವಳ.
ಜಗಳೂರು ಸುದ್ದಿ:ವಿಕಲ ಚೇತನರು ನೈಜ ದೈವ ಸ್ವರೂಪಿಗಳು ಅವರ ಲಾಲನೆಪಾಲನೆಯಿಂದ ಪೋಷಕರಿಗೆ ಪುಣ್ಯಪ್ರಾಪ್ತಿಯಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಶಿಕ್ಷಣ ಇಲಾಖೆಯ ಸರ್ವಶಿಕ್ಷ ಅಭಿಯಾನದಡಿ ವಿಕಲಚೇತನ ಮಕ್ಕಳಿಗೆ ತ್ರಿಚಕ್ರ ಬೈಸಿಕಲ್,ಹಾಗೂ ಅಂಧ ಮಕ್ಕಳಿಗೆ ಸಾಧನಸಲಕರಣೆ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಲಕರಣಿ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಭಾವುಕರಾದ ಶಾಸಕ ಬಿ.ದೇವೇಂದ್ರಪ್ಪ:ಯಾವ ಜನ್ಮದ ಪಾಪವೋ ಹಾಡಿ,ನಲಿದು ಸಂತಸದಿಂದ ಸಂಭ್ರಮಿಸುವ ಸಂದರ್ಭದಲ್ಲಿ ವಿಕಲಚೇತನದಿಂದ ಮತ್ತೊಬ್ಬರನ್ನು ಅವಲಂಬಿಸಿರುವುದು ಕಂಡು ನನಗೆ ಮಾತು ಬರುತ್ತಿಲ್ಲ ಎಂದು ಭಾವುಕರಾದರು.
ಬಡತನಕ್ಕಿಂತ ಮಿಗಿಲಾದ ಶಾಪ ಅಂಗವೈಕಲ್ಯತೆ,ಆದ್ದರಿಂದ ಪ್ರತಿಯೊಬ್ಬರೂ ಅವರನ್ನು ತಾತ್ಸಾರಮಾಡದೆ ಗೌರವಿಸಬೇಕು ಪೋಷಕರಿಗೆ ಆತ್ಮಸ್ಥೈರ್ಯ ತುಂಬಬೇಕು.ಸರಕಾರದಿಂದ ಶಿಕ್ಷಣ ಇಲಾಖೆಯಡಿ ಅರ್ಹರನ್ನು ಗುರುತಿಸಿ ಅವರಿಗೆ ಗೃಹಪಾಠ,ಸಾಧನ ಸಲಕರಣೆ ವಿತರಿಸುತ್ತಿರುವುದು ಶ್ಲಾಘನೀಯ.ನಾನು ಕ್ಷೇತ್ರದಲ್ಲಿ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ಸದಾ ಬದ್ದನಾಗಿರುವೆ ಎಂದು ಭರವಸೆ ನೀಡಿದರು.
ಶಿಕ್ಷಕರ ವೃತ್ತಿ ಪವಿತ್ರವಾದದ್ದು ಕ್ಷೇತ್ರದಲ್ಲಿ ಕೆಲವರಿಂದ ಇಡೀ ಶಿಕ್ಷಕ ವೃಂದ ತಲೆತಗ್ಗಿಸುವಂತಾಗಿತ್ತು.ಅದಕ್ಕೆ ಕಾರಣ ರಾಜಕಾರಣದ ವ್ಯವಸ್ಥೆ ನನ್ನ ಆಡಳಿತಾವಧಿಯಲ್ಲಿ ಎಲ್ಲರೂ ಸರಿದಾರಿಗೆ ಬಂದು ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇದಕ್ಕೆ ಪ್ರಸಕ್ತ ಸಾಲಿನ ಸೆ.5 ರಂದು ನಡೆದ ಶಿಕ್ಷಕರ ದಿನಾಚರಣೆ ಸಾಕ್ಷಿಯಾಗಿತ್ತು ಎಂದು ಪ್ರಶಂಸಿದರು.
ಶಿಕ್ಷಕರಿಗೆ ಬೆಳದಿಂಗಳ ಊಟ ಕಾರ್ಯಕ್ರಮ:ಶೀಘ್ರದಲ್ಲಿ ತಾಲೂಕಿನ ಶಿಕ್ಷಕರಿಗೆ ಬೆಳದಿಂಗಳ ಊಟ ಕಾರ್ಯಕ್ರಮ ಆಯೋಜಿಸಿ ರಸಮಂಜರಿ,ಸಾಂಪ್ರಾದಾಯಿಕ ಹಬ್ಬದ ಊಟ ಸವಿದು ಶಿಕ್ಷಕರ ಮಧ್ಯೆ ಉತ್ತಮ ಬಾಂಧವ್ಯ ಬೆಸೆಯಲಾಗುವುದು ಸನ್ನದ್ದರಾಗಿ ಎಂದು ತಿಳಿಸಿದರು.
ಇದೇ ವೇಳೆ ಶಾಸಕ ಬಿ.ದೇವೇಂದ್ರಪ್ಪ ಅವರು ವೈಯಕ್ತಿಕ ಖರ್ಚಿನಲ್ಲಿ ತಾಲೂಕಿನ 76 ದೈಹಿಕ ಶಿಕ್ಷಕರಿಗೆ ಟ್ರ್ಯಾಕ್ ಶೂಟ್,ಸಮವಸ್ತ್ರಗಳನ್ನು ವಿತರಿಸಿದರು.
ಸಂದರ್ಭದಲ್ಲಿ ಬಿಇಓ ಹಾಲಮೂರ್ತಿ,ಬಿಆರ್ ಸಿ ಡಿಡಿ ಹಾಲಪ್ಪ,ಪ್ರಾಂಶುಪಾಲ ಎಎಲ್ ಟಿ ತಿಪ್ಪೇಸ್ವಾಮಿ,ವಿರೇಶ್,ದೈಹಿಕ ಶಿಕ್ಷಣಾಧಿಕಾರಿ ಸುರೇಶ್ ರೆಡ್ಡಿ,ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮೂರ್ತಿ,ಶಿಕ್ಷಕ ಸತೀಶ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್,ಅನೂಪ್ ರೆಡ್ಡಿ,ಷಂಷುದ್ದೀನ್,ಸೇರಿದಂತೆ ಇದ್ದರು.