ದೇಶದ ಮೊಟ್ಟಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯಲ್ಲಿ ಬಡವರಿಗೆ ಆಹಾರ ಪದಾರ್ಥಗಳನ್ನು ನೀಡಿ ಹೆಚ್ಚು ಜನಪ್ರಿಯತೆ ಗಳಿಸಿ ಜನಪರವಾದ ಆಡಳಿತಕ್ಕೆ ಸಾಕ್ಷಿಯಾಗಿದ್ದರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ :ಶಾಸಕ.ಬಿ.ದೇವೇಂದ್ರಪ್ಪ ಹೇಳಿದರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on October 31
ಜಗಳೂರು ಸುದ್ದಿ:ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ದೂರ ದೃಷ್ಠಿ ಚಿಂತನೆ ಬಡವರ ಬಗ್ಗೆ ಇದ್ದ ಕಾಳಜಿ ಅವರ ಸರಳತೆಯ, ಆಡಳಿತ ವೈಖರಿ ಇಂದಿನ ರಾಜಕಾರಣಿಗಳಿಗೆ ಅದರ್ಶವಾಗಬೇಕಾಗಿದೆ ಎಂದು ಶಾಸಕ ಬಿ ದೇವೆಂದ್ರಪ್ಪ
ಪಟ್ಟಣದ ಜನಸಂಪರ್ಕಕೇಂದ್ರದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 39ನೇ ಪುಣ್ಯಸ್ಮರಣೆ ಹಾಗೂ ಸರ್ದಾರದ ವಲ್ ಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಇಂದಿರಾಗಾಂಧಿ ಅವರು ಶ್ರೀಮಂತ ಮನೆತನದಲ್ಲಿ ಜನಿಸಿದ್ದರು ಸಹ ಬಡವರ ದೀನದಲಿತರ ಬಗ್ಗೆಯಿದ್ದ ಕಾಳಜಿ ಕಳಕಳಿಯಿಂದ ಅಂದಿನ ತುರ್ತು ಪರಿಸ್ಥಿತಿಯಲ್ಲಿ ಹಸಿದವರಿಗೆ ಕೆಂಪುಜೋಳ ವಿತರಿಸಿ ಬಡವರ ಹಸಿವು ನೀಗಿಸಿ ದೇಶಕ್ಕೆ ಮಾದರಿ ಆಡಳಿತ ನೀಡಿ ಮಾದರಿ ಪ್ರಧಾನಿಯೆಂಬ ಹೆಗ್ಗಳಿಕೆಯಾಗಿದೆ. ಅವರು ಆಗರ್ಭ ಶ್ರೀಮಂತಿಕೆಯಿದ್ದರು ಸಹ ಪುಟ್ಟಮನೆಯಲ್ಲಿ ವಾಸವಾಗಿ ಬಡವರ ಪ್ರತಿಬಿಂಬವಾಗಿ ತನ್ನದೇ ಜೀವನಶೈಲಿಯಲ್ಲಿ ಪ್ರತಿಯೊಬ್ಬರ ಬದುಕಿನ ಆಶಾಕಿರಣವಾಗಿದ್ದರು. ಎಂದು ಬಣ್ಣಿಸಿದರು.
ದೇಶದ ಒಗ್ಗೂಡಿಕೆಗಾಗಿ 1885 ರಲ್ಲಿ ಎ.ಓ.ಹ್ಯೂಮ್ ಅವರು ಸ್ಥಾಪಿಸಿದ ಕಾಂಗ್ರೆಸ್ ಪಕ್ಷ ದೇಶದ ಜನಪರ ಜನಪ್ರಿಯ ಆಡಳಿತಕ್ಕೆ ಸಾಕ್ಷಿಯಾಗಿದೆ.ದೇಶಕ್ಕೆ ಸ್ವಾತಂತ್ರ್ಯ,ತ್ರಿವರ್ಣಧ್ವಜ ಒದಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಆಡಳಿತ ಸರಕಾರ ನೀಡಿದ್ದ ಭರವಸೆಯ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ.ಇದರ ಬಗ್ಗೆ ಅಪಪ್ರಚಾರಮಾಡಿದ್ದ ಬಿಜೆಪಿ ಪಕ್ಷದವರು ಮೊದಲ ಸರದಿಯಲ್ಲಿ ಫಲಾನುಭವಿಗಳಾಗಿ ಅನುಭವಿಸುತ್ತಿದ್ದಾರೆ.ಯಾರು ಈ ಸೌಲಭ್ಯ ಪಡೆದಿಲ್ಲ ಮಾಹಿತಿ ಕೊಡಿ ಎಂದು ಪ್ರಶ್ನೆಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಛೇರಿಯಿಲ್ಲದೆ ಪಕ್ಷದ ಸಭೆ ನಡೆಸಲು ಸ್ಥಳಕ್ಕಾಗಿ ಪರದಾಡಬೇಕಿತ್ತು.ಇದೀಗ ಚಿರಪರಿಚಿತ ಪಟ್ಟಣ ಪಂಚಾಯಿತಿ ಹಳೇ ಕಟ್ಟಡ ಜನಸಂಪರ್ಕ ಕೇಂದ್ರವಾಗಿ ಸುಂದರ ವಿನ್ಯಾಸದಲ್ಲಿ ಅಲಂಕಾರಗೊಂಡು ,ಪುಸ್ತಕಗಳ ಜ್ಞಾನಭಂಡಾರವಾಗಿ ಮಾರ್ಪಟ್ಟಿದೆ.ನನಗೆ ಟಿಕೇಟ್ ಕೊಟ್ಟು ಗೆಲ್ಲಿಸಿದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತನಾಗಿರುವೆ ಎಂದರು.
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ಇಂದಿರಾಗಾಂಧಿ ಅವರು ಪ್ರಧಾನಮಂತ್ರಿ ಯಾಗಿದ್ದ ವೇಳೆ ದೇಶಾಭಿಮಾನದ ಕೊರತೆ,ದೇಶದಲ್ಲಿ ಕ್ಷಾಮ ಆವರಿಸಿ ತುರ್ತುಪರಿಸ್ಥಿತಿಯಲ್ಲಿ ಜನತೆಗೆ ಒಪ್ಪತ್ತಿನ ಊಟಕ್ಕೂ ಕಷ್ಟವಿದ್ದಾಗ ಆಹಾರ ದಾಸ್ತಾನು ಪೂರೈಕೆಯೊಂದಿಗೆ,ನೆರೆಹೊರೆಯ ದೇಶಗಳ ಆಕ್ರಮಣದಿಂದ ರಕ್ಷಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.ಅದರೆ ಕೇಂದ್ರದ ಬಿಜೆಪಿ ಆಡಳಿತ ಸರಕಾರ ಅವರ ಜಾತಿ ರಹಿತ ,ಜನಪರ ಕಾರ್ಯಕ್ರಮಗಳನ್ನು ಹಂತಹಂತವಾಗಿ ವಿಮುಖಗೊಳಿಸಿ ಇಂದಿರಾ ಗಾಂಧಿ ಅವರ ಹೆಸರನ್ನು ಅಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಖಲಿಸ್ಥಾನದಿಂದ ಭಾರತೀಯರನ್ನು ರಕ್ಷಿಸಿ ತಾನು ಅಂಗರಕ್ಷಕನ ಗುಂಡಿಗೆ ಬಲಿಯಾಗಿ ಹುತಾತ್ಮರಾದರು.ಪಾಕಿಸ್ತಾನ ಬಾಂಗ್ಲದೇಶವನ್ನು ವಿಭಜನೆಗೊಳಿಸಿದ ಧೀಮಂತ ಮಹಿಳೆ.ಶಿಕ್ಷಣ,ಆರೋಗ್ಯ,ಕೃಷಿ,ಪಂಚವಾರ್ಷಿಕ ಯೋಜನೆ,ಬಡತನ ನಿವಾರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು ಎಂದು ತಿಳಿಸಿದರು.
ಕೆಪಿಸಿಸಿ ಎಸ್‌ಸಿ ಘಟಕದ ಸಿ.ತಿಪ್ಪೇಸ್ವಾಮಿ ಮಾತನಾಡಿ,ಇತ್ತೀಚಿನ ಯುವಸಮೂಹದಲ್ಲಿ ದೇಶಾಭಿಮಾನ ಕ್ಷೀಣಿಸುತ್ತಿದೆ.ತುರ್ತು ಪರಿಸ್ಥಿತಿಯಲ್ಲಿ ರಷ್ಯಾ,ಅಮೆರಿಕಾ ದೇಶಗಳಲ್ಲಿ ಸಾಕುಪ್ರಾಣಿಗಳಿಗೆ ಬಳಸುತ್ತಿದ್ದ ಕೆಂಪು ಜೋಳವನ್ನು ಆಮದು ಮಾಡಿ ದೇಶದ ಜನರನ್ನು ಬದುಕಿಸಿದರು.ಇಂತಹ ಕಾಂಗ್ರೆಸ್ ಪಕ್ಷದ ನಾಯಕರ ಕೊಡುಗೆ ಅಪಾರ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಓಬಣ್ಣ,ಪ್ರಕಾಶ್ ರೆಡ್ಡಿ,ಗುರುಮೂರ್ತಿ,ಕಾನನಕಟ್ಟೆ ಪ್ರಭು,ಕಾಟಪ್ಪ,ಅಹಮ್ಮದ್ ಅಲಿ,ಮಾಳಮ್ಮನಹಳ್ಳಿ ವೆಂಕಟೇಶ್,ಗುಡ್ಡದಲಿಂಗನಹಳ್ಳಿ ನಾಗರಾಜ್,ವಿಜಯ್ ಕೆಂಚೋಳ್,ಸತ್ಯಮೂರ್ತಿ,ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ಪ.ಪಂ ಸದಸ್ಯ ರಮೇಶ್ ರೆಡ್ಡಿ,ನಾಮನಿರ್ದೇಶಿತ ಸದಸ್ಯರಾದ ತಾನಾಜಿ,ಜಯ್ಯಣ್ಣ,ಶಾಂತಕುಮಾರ್,ಸೇರಿದಂತೆ ಇದ್ದರು.