Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೫
ಮಾನವ ಬಂಧುತ್ವ ವೇದಿಕೆ ಕಲಾತಂಡದ ಲೋಕಿಕೆರೆ ಅಂಜಿನಪ್ಪ ಸೇರಿದಂತೆ ಜಗಳೂರಿನ ಪ್ರಗತಿಪರ ಮುಖಂಡರುಗಳು ಸ್ಥಳ ವೀಕ್ಷಣೆ ನಡೆಸಿದರು
ನವೆಂಬರ್ 9 ರಂದು ‘ ಬುದ್ದನ ಬೆಳಕು’ನಾಟಕ ಪ್ರದರ್ಶನ:ವಕೀಲ ಬಸವರಾಜ್
ಜಗಳೂರು ಸುದ್ದಿ:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆ ಮುಖಂಡರುಗಳು ‘ ಬುದ್ದನ ಬೆಳಕು’ ನಾಟಕೋತ್ಸವ ಯಶಸ್ವಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ವಿಕಾಸ್ ಆರ್.ಮೌರ್ಯ ಅವರ ವಿರಚಿತ,ಡಿಂಗ್ರಿ ನರೇಂದ್ರ ಅವರ ನಿರ್ದೇಶನದ ಬುದ್ದನ ಬೆಳಕು ನಾಟಕವನ್ನು ಬಂಧುತ್ವ ಕಲಾತಂಡದಿಂದ ರಾಜ್ಯದ ವಿವಿಧ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ನಾಟಕೋತ್ಸವ ಪ್ರದರ್ಶನಮಾಡಲಾಗುತ್ತಿದೆ.ನವೆಂಬರ್ 9 ಗುರುವಾರದ ಸಂಜೆ 6 ಗಂಟೆಗೆ ಪಟ್ಟಣದ ಬಯಲುರಂಗ ಮಂದಿರದಲ್ಲಿ ನಾಟಕಾಭಿನಯ ಪ್ರದರ್ಶನಗೊಳ್ಳಲಿದೆ ಗೌತಮ ಬುದ್ದ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಅಭಿಮಾನಿಗಳು ವಿವಿಧ ಸಂಘಸಂಸ್ಥೆಯ ಮುಖಂಡರುಗಳು,ವಿದ್ಯಾರ್ಥಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡ ವಕೀಲ ಟಿ.ಬಸವರಾಜ್ ಮರೇನಹಳ್ಳಿ ಅವರು ಕರೆ ನೀಡಿದರು.
ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ತಾಲೂಕು ಸಂಚಾಲಕ ಧನ್ಯಕುಮಾರ್ ಎಚ್.ಎಂ.ಹೊಳೆ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಮುಖಂಡರಾದ ಶಂಭುಲಿಂಗಪ್ಪ,ಹಟ್ಟಿ ತಿಪ್ಪೇಸ್ವಾಮಿ,ಪ್ರಾಂಶುಪಾಲ ನಾಗಲಿಂಗಪ್ಪ,ಹನುಮಂತಾಪುರ ಶಿವಕುಮಾರ್,ಕಾನನಕಟ್ಟೆ ಪ್ರಭು,ವಕೀಲರಾದ ಸಣ್ಣ ಓಬಯ್ಯ,ನಾಗೇಶ್,ಪ.ಪಂ ಸದಸ್ಯ ಲುಕ್ಮಾನ್ ಖಾನ್,ಉಪನ್ಯಾಸಕ ಎ.ಪಿ.ನಿಂಗಪ್ಪ,ರಾಜಪ್ಪ ವ್ಯಾಸಗೊಂಡನಹಳ್ಳಿ,ಮಲೆಮಾಚಿಕೆರೆ ಸತೀಶ್,ಮಾದಿಹಳ್ಳಿ ಮಂಜುನಾಥ್,ಗೋಗುದ್ದು ತಿಪ್ಪೇಸ್ವಾಮಿ,ಹನುಮಂತಪ್ಪ,ಬಡಪ್ಪ,ಪರುಶರಾಮ್,ಅನ್ವರ್ ಅಲಿ,ಸೇರಿದಂತೆ ಇದ್ದರು.