Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೪

ಅಂಬೇಡ್ಕರ್ ವೃತ್ತದ ಬಳಕೆ ಕಡ್ಡಾಯವಾಗಲು ಕೆಇಬಿ ಹೆಸರಿಗೆ ಮಸಿಬಳಿದು ಜಾಗೃತಿ.

ಜಗಳೂರು ಸುದ್ದಿ:ಅಂಬೇಡ್ಕರ್ ವೃತ್ತದ ನಾಮಕರಣ ಕಡ್ಡಾಯವಾಗಲಿ  ಎಂದುಅಂಬೇಡ್ಕರ್ ಪುತ್ಥಳಿ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆ ಮುಖಂಡರುಗಳು,ಅಧಿಕಾರಿಗಳು  ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ  ರಸ್ತೆ ಬದಿಯಲ್ಲಿನ ಅಂಗಡಿಗಳ ಬೋರ್ಡ್ ನಲ್ಲಿ ಕೆಇಬಿ ವೃತ್ತ ಎಂಬುದಕ್ಕೆ ಸಾಂಕೇತಿಕವಾಗಿ ಮಸಿಬಳಿಯುವ ಮೂಲಕ ಅಂಗಡಿ ಮಾಲಿಕರಿಗೆ ಮನವರಿಕೆ ಮಾಡಿದರು.

ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ಮಾತನಾಡಿ,ದಶಕಗಳ ಕನಸಿನಂತೆ ಪಟ್ಟಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣಗೊಂಡು ವರ್ಷಕಳೆದಿದೆ. ಅಲ್ಲದೆ ಸುಮಾರು ೧೯೮೩ ರಲ್ಲಿ ಪಪಂ ಪಂಚಾಯಿತಿ ವತಿಯಿಂದ ದಾಖಲೆಯಿದೆ  ಆದರೂ ಸಾರ್ವಜನಿಕರ ಗಮನಕ್ಕೆ ಅಂಬೇಡ್ಕರ್ ವೃತ್ತ ಎಂಬುದು ಖ್ಯಾತಿಹೊಂದಿಲ್ಲ.ಕಾರಣ ಕೆಇಬಿ ಕಛೇರಿ ಹೊಂದಿದ್ದರಿಂದ ಕೆಇಬಿ ವೃತ್ತ ಎಂದು ಇಂದಿಗೂ ಮನೆಮಾತಾಗಿದೆ.ಕೂಡಲೇ ಪಟ್ಟಣಪಂಚಾಯಿತಿ  ಅಧಿಕಾರಿಗಳು ವೃತ್ತದಲ್ಲಿನ ನೆರೆಹೊರೆಯ ಅಂಗಡಿ ಬೋರ್ಡ್ ಗಳಲ್ಲಿ ಅಂಬೇಡ್ಕರ್ ವೃತ್ತ ಎಂದು  ಕಡ್ಡಾಯವಾಗಿ ನಮೂದಿಸಲು  ಜಾಗೃತಿಮೂಡಿಸಬೇಕು ಎಂದು ಆಗ್ರಹಿಸಿದರು.

ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಓಬಣ್ಣ ಮಾತನಾಡಿ,ಅಂಬೇಡ್ಕರ್ ವೃತ್ತಕ್ಕೆ  ಸಾರ್ವಜನಿಕರು ಗುರುತಿಸುವಂತಹ ಬೃಹದಾಕಾರವಾಗಿ ಡಿಜಿಟಲ್ ನಾಮಫಲಕ,ಲ್ಯಾನ್, ಅಳವಡಿಸಬೇಕು.ಪುತ್ಥಳಿ ಚೌಕಟ್ಟಿನಲ್ಲಿ ಸುತ್ತಲೂ ಹಸಿರೀಕರಣವನ್ನಾಗಿ ಮಾರ್ಪಡಿಸಿ.ವಾಹನ ಸಂಚಾರದಿಂದ ಅವಘಡ ಜರುಗದಂತೆ ಹೈಮಾಸ್ಟ್ ದೀಪದಿಂದ ರಾತ್ರಿ ಕಂಗೊಳಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮೌಖಿಕ ಮನವಿ ಸ್ಚೀಕರಿಸಿ ಮಾತನಾಡಿ,ದೇಶಕ್ಕೆ ಸಂವಿಧಾನ  ಕೊಡುಗೆ ಕೊಟ್ಟಂತಹ ಮಹಾನ್ ನಾಯಕ  ಬಾಬಾ ಸಾಹೇಬರಿಗೆ ಪ್ರತಿಯೊಬ್ಬರೂ ಗೌರವಿಸಬೇಕು.ಹಲವು ವರ್ಷಗಳಿಂದ ಕೆಇಬಿ ಇಲಾಖೆ ಇರುವುದರಿಂದ ಜನರಲ್ಲಿ ರೂಢಿಯಾಗಿದೆ.ಇದೀಗ ಅಂಬೇಡ್ಕರ್ ಪುತ್ಥಳಿ ಹೊಂದಿದ್ದು.ಮುಂಬರುವ ದಿನಗಳಲ್ಲಿ ಸ್ವಾಭಾವಿಕವಾಗಿ  ಅಂಬೇಡ್ಕರ್ ವೃತ್ತದ ಪ್ರಚಾರವಾಗುತ್ತದೆ.ಹಾಗೂ ಅಗತ್ಯ ನಾಮಫಲಕ,ವಿದ್ಯುತ್ ದೀಪ ಅಳವಡಿಸಿ  ಸುತ್ತಲೂ ಅಭಿವೃದ್ದಿಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ ಭೇಟಿ ಭರವಸೆ :ಅಂಬೇಡ್ಕರ್ ವೃತ್ತಕ್ಕೆ ಶಾಸಕ.ಬಿ.ದೇವೇಂದ್ರಪ್ಪ ಭೇಟಿ ನೀಡಿ ನಾನು ಮೀಸಲಾತಿಯಡಿ ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾಗಿರುವೆ.ನಾನೊಬ್ಬ ಅಂಬೇಡ್ಕರ್ ಅಭಿಮಾನಿಯಾಗಿದ್ದು. ಅಂಬೇಡ್ಕರ್ ಪುತ್ಥಳಿಗೆ ನಮನ ಸಲ್ಲಿಸಿ.ನಂತರ ಅಂಬೇಡ್ಕರ್ ವೃತ್ತದ ಸರ್ವತೋಮುಖ ಅಭಿವೃದ್ದಿಗೆ ಬದ್ದನಾಗಿರುವೆ ಎಂದು ಭರವಸೆ ನೀಡಿದರು.

ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಪಿಎಸ್ ಐ ಸಾಗರ್,ದಲಿತ ಸಂಘಟನೆ ಮುಖಂಡರಾದ ವಕೀಲ ಹನುಮಂತಪ್ಪ,ಕುಬೇಂದ್ರಪ್ಪ,ಸತೀಶ್ ಮಲೆಮಾಚಿಕೆರೆ,ಮಂಜಣ್ಣ,ಶಿವಣ್ಣ,ಕರಿಬಸಪ್ಪ,ಉಮೇಶ್,ಶಿವಮೂರ್ತಿ,ಗೌರಿಪುರ ಸತ್ಯಮೂರ್ತಿ,ಕಾ.ನಿ.ಪ ಸಂಘದ ತಾಲೂಕು ಅಧ್ಯಕ್ಷ ಚಿದಾನಂದಪ್ಪ,ಪ್ರಗತಿಪರ ಮುಖಂಡರಾದ ವ್ಯಾಸಗೊಂಡನಹಳ್ಳಿ   ರಾಜಪ್ಪ ,ಧನ್ಯಕುಮಾರ್ ಎಚ್.ಎಂ.ಹೊಳೆ, ಮಾದಿಹಳ್ಳಿ ಮಂಜುನಾಥ್,ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!