ಶುಕ್ರದೆಸೆ ನ್ಯೂಸ್
ಸೋಲು ಗೆಲುವು ಮರೆತು ಸ್ನೇಹ ಸಂಗಮವೆ ಶಾಶ್ವತ ಹಾಲಿ ಶಾಸಕ ಹಾಗೂ ಮಾಜಿ ಶಾಸಕರುಗಳು ಪರಸ್ವರ ಹಸ್ತಲಾಘವ ಚಹಾಕೂಟದಲ್ಲಿ ಭಾಗಿಯಾದ ತ್ರಿಮೂರ್ತಿಗಳು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೫
ಶಾಸಕ.ಬಿ ದೇವೇಂದ್ರಪ್ಪ ನಿವಾಸದಲ್ಲಿ ಮಾಜಿ ಶಾಸಕರಾದ ಎಸ್ ವಿ ಆರ್ ಹಾಗೂ ಹೆಚ್. ಪಿ .ಆರ್ ರವರು ಸೌಹರ್ದ ಚಹಾ ಕೂಟದಲ್ಲಿ ಭಾನುವಾರ ಭಾಗಿಯಾಗಿದ್ದ ಕಂಡು ಬಂದಿತು..
ಚುನಾವಣೆಗಳು ಬರುತ್ತವೆ ಹೋಗುತ್ತವೆ ಆದರೆ ಪ್ರೀತಿ ವಿಶ್ವಾಸವೆ ಶಾಶ್ವತ ಎಂಬುದಕ್ಕೆ ಮತ್ತೊಂದು ಹೆಸರೆ ಜಗಳೂರು ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರುಗಳು ಜೋತೆಗೆ ಚಹಾ ಕೂಟ ಸಂಗಮಕ್ಕೆ ಸಾಕ್ಷಿಯಾಗಿದ್ದಾರೆ. ಜಗಳೂರು ಕ್ಷೇತ್ರದ ಹಾಲಿ ಶಾಸಕ ಬಿ ದೇವೇಂದ್ರಪ್ಪರವರು ಸಂಘಜೀವಿ ಸ್ನೇಹಿಮಯಿಯಾಗಿ ಅಜಾತು ಶತ್ರು ಎಂಬುದಕ್ಕೆ ಹಾಲಿ ಮಾಜಿಗಳ ಸ್ನೇಹ ಕೂಟವೆ ಸಾಕ್ಷಿಯಾಗಿದೆ.
.ಕಳೆದ ನಾಲ್ಕೈದು ತಿಂಗಳ ಹಿಂದೆ ನಡದ ವಿಧಾನ ಸಭಾ ಕ್ಷೇತ್ರದ ಚುನಾವಣೆ ಕಣದಲ್ಲಿ ಜಗಳೂರು ಕ್ಷೇತ್ರ ಕಾಂಗ್ರೆಸ್ .ಬಿ ಜೆ ಪಿ.ಮತ್ತು ಪಕ್ಷೇತರ ನಡುವೆ ಬಾರಿ ಪೈಪೋಟಿ ಚುನಾವಣೆ ಏರ್ಪಟ್ಟಿತ್ತು .ಚುನಾವಣೆ ಕಣದಲ್ಲಿ ಅವರ ಅವರ ರಾಜಕೀಯ ಸಿದ್ದಾಂತ ನೆಲೆಯಲ್ಲಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಎಲ್ಲಿಲ್ಲದ ಕಸರತ್ತು ನಡೆಸಿ ಕೂತೂಹಲಕರವಾಗಿ ತ್ರಿಮೂರ್ತಿಗಳ ತ್ರಿಕೋನ ಸ್ವರ್ಧೆ ಹಿಡಿ ರಾಜ್ಯವನ್ನೆ ಆಚ್ಚರಿಗೋಳಿಸಿದ ಚುನಾವಣೆ ಕಾವು ನೋಡಗರ ಗಮನ ಸೆಳೆದಿತ್ತು..ಇದೀಗ ಚುನಾವಣೆ ನಂತರ ಇದೆ ಮೊದಲ ಬಾರಿಗೆ ಹಾಲಿ ಶಾಸಕರಾದ ದೇವೆಂದ್ರಪ್ರ ಹಾಗೂ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರ. ಮತ್ತು ಹೆ ಚ್ ಪಿ ರಾಜೇಶ್. ಚಳಕೆರೆ ಕ್ಷೇತ್ರದ ಶಾಸಕ ಟಿ ರಘಮೂರ್ತಿಯವರು ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ ಹಿನ್ನೆಲೆಯಲ್ಲಿ ಶಾಸಕರ ನಿವಾಸದಲ್ಕಿ ಒಂದೆಡೆ ಸೇರಿ ರಾಜಕೀಯ ಚರ್ಚೆಗಳು ಮತ್ತು ತಾಲ್ಲೂಕಿನ ಅಭಿವೃದ್ಧಿ ಕುರಿತು ಕೆಲವೊತ್ತು ಚರ್ಚೆ ನಡೆಸಿರುವ ದೃಶ್ಯ ಕಂಡು ಬಂದಿತು
ಹಾಲಿ ಶಾಸಕರು ಅವರ ನಿವಾಸದಲ್ಲಿ ಚಹಾ ಕೂಟ ಏರ್ಪಡಿಸಿ ಮಾಜಿ ಶಾಸಕರಾದ ಹೆಚ್ ಪಿ ರಾಜೇಶ್. ಮತ್ತು ಎಸ್ ವಿ ರಾಮಚಂದ್ರ ಹಾಗೂ ಚಳಕೆರೆ ಕ್ಷೇತ್ರದ ಶಾಸಕ ರಘಮೂರ್ತಿ ರವರಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ.
ಇದೆ ಸಂದರ್ಭದಲ್ಲಿ ಚಳಕೆರೆ ಶಾಸಕ ಟಿ ರಘಮೂರ್ತಿಯವರು ಶಾಸಕ ದೇವೇಂದ್ರಪ್ಪರವರು ಜಗಳೂರು ಪಟ್ಟಣದ ಹೃದಯ ಬಾಗದಲ್ಲಿ ಸ್ಥಾಪಿಸಿರುವ ಮಾದರಿ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಮ್ಮ ಕ್ಷೇತ್ರದಲ್ಲಿ ನಿರ್ಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಣ್ಣಸೂರಜ್ಜ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್.ಮಹಮದ್ ಗೌಸ್.ತೋರಣಗಟ್ಟೆ ಜೀವಣ್ಣ.ಶಂಭುಲಿಂಗಪ್ಪ..ಮುಖಂಡರಾದ ಅನೂಪ್ ರೆಡ್ಡಿ.ಪಲ್ಲಾಗಟ್ಟೆ ಶೇಖೆಪ್ಪ. ಸೇರಿದಂತೆ ಹಾಜರಿದ್ದರು.