ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಮುನ್ನ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ ಕೆಲಸ ಮಾಡಿ :ಶಾಸಕ.ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
.Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೭
ಜಗಳೂರು ಸುದ್ದಿ:ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಸೋಮವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ನಂತರ ಮಾತನಾಡಿದರು.
ಜಗಳೂರು ತಾಲ್ಲೂಕಿನಲ್ಲಿ ಈ ಬಾರಿ ಮಳೆ ಪ್ರಮಾಣದ ಕೊರತೆಯಿಂದ ಬರದ ಛಾಯೆ,ಆವರಿಸಿದೆ ಮತ್ತೊಂದೆಡೆ ಅಂತರ್ಜಲದ ಮಟ್ಟ ಕ್ಷೀಣಿಸುತ್ತಿದೆ. ಜನಜಾನುವಾರುಗಳಿಗೆ ಕುಡಿಯುವ ನೀರು ಸಮಸ್ಯೆ ಉದ್ಬವಾಗುವ ಮುನ್ನ ಅಧಿಕಾರಿಗಳು ದುಡಿಯುವ ಕೈಗಳಿಗೆ .ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನೀಡಬೇಕು ಹಾಗೂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಿಸಲು ಸಜ್ಜಾಗುವಂತೆ ತಿಳಿಸಿದರು ಸಾದ್ಯವಾದಷ್ಟು ರೈತರಿಂದ ಖಾಸಗಿ ಕೊಳವೆಬಾವಿಯಿಂದ ಟ್ಯಾಂಕರ್ ಗಳ ಮೂಲಕ ನೀರಿನ ಪೂರೈಕೆಗೆ ಸಿದ್ದರಾಗಿ .ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಬಗ್ಗೆ ದೂರುಗಳು ಕೇಳಿ ಬಂದಿವೆ ಶೀಘ್ರ ಕಾಮಗಾರಿಗಳುನ್ನು ಪೂರ್ಣಗೊಳಿಸುವಂತೆ .ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಿದರು.
ಸರಕಾರದಿಂದ ಮಹಿಳೆಯರಿಗೆ ವರದಾನವಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮಾವಾಗದೆ ತಾಂತ್ರಿಕ ದೋಷದಿಂದ ಬ್ಯಾಂಕ್ ಗಳಿಗೆ ಅಲೆದಾಡುತ್ತಿದ್ದಾರೆ.ಶೀಘ್ರದಲ್ಲೇ ಸರಿಪಡಿಸು ಕಾರ್ಯನಿರ್ಹಿಸಬೇಕು ಎಂದು ಸಿಡಿಪಿಓ ಬಿರೇಂದ್ರಕುಮಾರ್ ಅವರಿಗೆ ತಿಳಿಸಿದರು.
ಪ್ರಸಕ್ತಸಾಲಿನಲ್ಲಿ 464.6 ಮಿ.ಮೀ ಮಳೆಯಾಗಬೇಕಿತ್ತು.ಆದರೆ ಕೇವಲ 295.6 ಮಳೆಯಾಗಿದೆ.ಹಿಂಗಾರು ಹಂಗಾಮಿನಲ್ಲಿ ಕಡಲೆ,ಶೇಂಗಾ,ಸೂರ್ಯಕಾಂತಿ,ದ್ವಿದಳ,ಏಕದಳ ಬೆಳೆವಾರು ಬಿತ್ತನೆ ಬೀಜಗಳಿಗೆ ಒಟ್ಟು 9100 ಕ್ವಿಂಟಾಲ್ ಬೇಡಿಕೆಯಿದ್ದು.1010 ಕ್ವಿಂಟಾಲ್ ದಾಸ್ತಾನು ಸಂಗ್ರಹವಿದೆ.ಯೂರಿಯಾ,ಡಿಎಪಿ,ಎಂ.ಓ.ಪಿ.ಎಸ್ ಎಸ್ ಪಿ ವಿವಿಧ ಸಂಯುಕ್ತ ಗೊಬ್ಬರಗಳಿಗೆ ರಸಗೊಬ್ಬರದ ಬೇಡಿಕೆಯಂತೆ ಒಟ್ಟು 3772.3 ಕ್ವಿಂಟಾಲ್ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್ ಉಲ್ಲಾ ಮಾಹಿತಿ ನೀಡಿ,ಜಲಜೀವನ್ ಮಿಷನ್ ಯೋಜನೆಯಡಿ ಅನುಮೋದನೆಗೊಂಡ ಒಟ್ಟು 167 ಕಾಮಗಾರಿಗಳಲ್ಲಿ 29 ಕಾಮಗಾರಿಗಳು ಪೂರ್ಣಗೊಂಡಿದ್ದು.62 ಕಾಮಗಾರಿಗಳು ಟೆಂಡರ್ ಹಂತದ ಪ್ರಗತಿಯಲ್ಲಿವೆ.20 ಕಾಮಗಾರಿಗಳ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಪ್ರಗತಿ ವರದಿ ಮಂಡಿಸಿದರು.
ಬಿಇಓ ಹಾಲಮೂರ್ತಿ ಅವರು ಶಿಕ್ಷಣ ಇಲಾಖೆಯಡಿ ವಿವಿಧ ಗ್ರಾಮಗಳಲ್ಲಿನ ಶಿಥಿಲಗೊಂಡ ಶಾಲಾ ದುರಸ್ಥೀಕರಣ,ನೂತನ ಕೊಠಡಿಗಳ ನಿರ್ಮಾಣ ಗಳ ಪ್ರಗತಿ,ಶೈಕ್ಷಣಿಕ ಸೌಲಭ್ಯಗಳ ಗುರಿ,ಪ್ರಗತಿಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ವಿವಿಧ ಇಲಾಖೆಗಳಡಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ವರದಿಯನ್ನು ಆಯಾ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಸಲ್ಲಿಸಿದರು.
ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾಖಾನ್,ತಾ.ಪಂ ಇಓ ಕರಿಬಸಪ್ಪ,ತಹಶೀಲ್ದಾರ್ ಗ್ರೇಡ್ -2 ಮಂಜಾನಂದ,ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಭಾಗವಹಿಸಿದ್ದರು.