ಶುಕ್ರದೆಸೆ ನ್ಯೂಸ್

ದಾವಣಗೆರೆ ಸುದ್ದಿ

ವರದಿ ಶುಕ್ರದೆಸೆ ನ್ಯೂಸ್

ಬಿಜೆಪಿ ತೆಕ್ಕೆಯಿಂದ ಲೋಕಸಭಾ ಕ್ಷೇತ್ರವನ್ನು ತೊಲಗಿಸಿ:ಸಚಿವ ಈಶ್ವರ ಖಂಡ್ರೆ ಕರೆ 

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೧೦

ದಾವಣಗೆರೆ ಸುದ್ದಿ:ಹೈಕಮಾಂಡ್ ಟಿಕೇಟ್ ಯಾರಿಗೆ ನೀಡಿದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವೈಮನಸ್ಸು ತೊರೆದು ಬಿಜೆಪಿ ತೆಕ್ಕೆಯಲ್ಲಿರುವ ಲೋಕಸಭಾ ಕ್ಷೇತ್ರಕ್ಕೆ ಮುಕ್ತಿನೀಡಬೇಕು ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.

ನಗರದ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪಕ್ಷದ ವರಿಷ್ಠರ ನಿರ್ಧಾರದಂತೆ  ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಶಾಸಕರ ಮುಂಚೂಣಿ  ಘಟಕಗಳ,ಹಾಗೂ ಮುಖಂಡರುಗಳ ಸಲಹೆ,ಅಭಿಪ್ರಾಯಗಳನ್ನು  ಸಂಗ್ರಹಿಸಿ ಹೈಕಮಾಂಡ್ ಗೆ ವರದಿ ಸಲ್ಲಿಸಲು ವೀಕ್ಷಕರನ್ನಾಗಿ ಜವಾಬ್ದಾರಿ ನನಗಿದೆ.ಪಾರದರ್ಶಕವಾಗಿ ನಿರ್ಭಯದಿಂದ ಪ್ರತಿ  ಆಕಾಂಕ್ಷಿಗಳ ಪರವಾದ ವರದಿ ತಾವು ನೀಡಬೇಕು ಎಂದರು.

ಬಿಜೆಪಿ ಅಸಂವಿಧಾನಿಕ ಪಕ್ಷ:ಕಳೆದ ಬಾರಿ ಬಿಜೆಪಿ ಪಕ್ಷಕ್ಕೆ ಬಹುಮತವಿಲ್ಲದಿದ್ದರೂ ಅಸಂವಿಧಾನಾತ್ಮಕವಾಗಿ ಹಿಂಬಾಗಲಿನಿಂದ ಆಪರೇಷನ್ ಮೂಲಕ  ಅಧಿಕಾರ ಪಡೆದು ಅವರು ನಡೆಸಿದ ಸುಳ್ಳಿನ,ಮೋಸದ, ಜನವಿರೋಧಿ ದುರಾಡಳಿತಕ್ಕೆ ಬೇಸತ್ತು ರಾಜ್ಯದ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠಕಲಿಸಿದ್ದಾರೆ ಎಂದು ಹೇಳಿದರು.

ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಅವರ ಆಡಳಿತ ಸರಕಾರ ದೇಶದ  ರೈತ,ಕಾರ್ಮಿಕ,ವಿರೋಧಿ ನೀತಿ ಅನುಸರಿಸುತ್ತಿದೆ.ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳು ಹುಸಿಯಾಗಿವೆ.ಇದುವರೆಗೂ ಅಚ್ಛೇದಿನ್ ಬಂದಿಲ್ಲ.ಕಪ್ಪುಹಣತರುವುದು,ಉದ್ಯೋಗ ಸೃಷ್ಠಿ,ಸೂರು,ಭ್ರಷ್ಟಾಚಾರ,ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದರು.ಅಲ್ಲದೆ ನೋಟ್ ಅಮಾನ್ಯೀಕರಣ ಅದಾನಿ,ಅಂಬಾನಿಯಂತಹ ಬಂಡವಾಳ ಶಾಹಿಗಳ ಖಜಾನೆ ತುಂಬಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಅದ್ಯಕ್ಷ ಹೆಚ್ ಬಿ ಮಂಜಪ್ಪ ರವರು ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ ಬಿ. ವಿನಯಕುಮಾರ್ ರವರು ತಲಾ ೫೦೦ ರೂ ಜನರಿಗೆ ಹಣ ಕೊಟ್ಟು ಕರೆಸಿ ಟಿಕೆಟ್ ಒತ್ತಡ ಹೇರಿ ಲಾಭಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು

ಜಿ ಬಿ ವಿನಯಕುಮಾರ್ ಮಾದ್ಯಮದವರೊಂದಿಗೆ ಪ್ರತಿಕ್ರಿಯೆಸಿ ಸತತ ೨೦ ವರ್ಷಗಳ ಕಾಲ ಸ್ವರ್ಧಾತ್ಮಕ ಜಗತ್ತಿನಲ್ಲಿ ಇನ್ಸೈಟ್ ಕೋಚಿಂಗ್ ಸೆಂಟರ್ ಆರಂಭಿಸಿ ರಾಜ್ಯದ ಸಾವಿರಾರು ಬಡ ವರ್ಗದ ಹಿಂದೂಳಿದ ಶೋಷಿತ ವರ್ಗದ ನಿರುದ್ಯೋಗ ಯುವ ಸಮೂಹಕ್ಕೆ ವಸತಿಯುತ ಯುಪಿ ಎಸ್ ಸಿ ಮತ್ತು ಕೆಪಿಎಸ್ ಸಿ ಪರಿಕ್ಷಾರ್ಥಿಗಳಿಗೆ ತರಬೇತಿಯೊಂದಿಗೆ ಕನಸ್ಸುಗಳನ್ನು ಅರಳಿಸಿರುವೆ.ಹಾಗೂ ನಾನು ಸಾಮಾಜಿಕ ಸೇವೆಗೈದ ಪರಿಣಾಮ ಸ್ವಯಂಪ್ರೇರಿತವಾಗಿ ಬೆಂಬಲಕ್ಕೆ ಕಾರ್ಯಕರ್ತರು ಆಗಮಿಸಿದ್ದಾರೆ. ಅವರಿಗೆ ಮಾಹಿತಿ ಶಿಕ್ಷಣದ ಪುಸ್ತಕ ಅಧ್ಯಯನದ ಕೊರೆತೆಯಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಬಿ ವಿನಯಕುಮಾರ್ ರವರ ಅಭಿಮಾನಿಗಳು ಅವರ ಭಾವಚಿತ್ರವಿರುವ ಫ್ಲಕ್ಸ್ ಹಿಡಿದು ವಿನಯ ಕುಮಾರವರಿಗೆ ಟಿಕೆಟ್ ನೀಡುವಂತೆ ಬೆಂಬಲ ವ್ಯಕ್ತಪಡಿಸಿ ಚುನಾವಣೆ ವೀಕ್ಷಕರಾದ ಈಶ್ವರ್ ಕಂಡ್ರೆಯವರಿಗೆ ಪ್ಲಕ್ಲ್ ತೋರಿಸಿ ಬೆಂಬಲ ವ್ಯಕ್ತಪಡಿಸಿದರು

ಮಾಧ್ಯಮಗಳ ವರದಿಯಂತೆ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಮಾಧ್ಯಮಗಳ ವರದಿಯಂತೆ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತ ಗಳಿಸಲಿದೆ.ಮಾಧ್ಯಮಗಳು ಅವರ ಪರವಾಗಿದ್ದರೂ ಸಹ ಭಯದಿಂದ ಬಿತ್ತರಿಸುತ್ತಾರೆ.ಅಲ್ಲದೆ ರಾಜ್ಯದಲ್ಲಿ ಏಪ್ರಿಲ್ ನಲ್ಲಿ ನಡೆಯುವ ಲೋಕಸಭಾ ಚುನಾವಣೆ ಸವಾಲಾಗಿದೆ.ರಾಜ್ಯ ದಲ್ಲಿ ಅಧಿಕಾರದಲ್ಲಿರುವ  ಕಾಂಗ್ರೆಸ್ ಪಕ್ಷದ ಸರಕಾರದ ಸುಭದ್ರ ಆಡಳಿತಕ್ಕೆ  ಲೋಕಸಭೆ ಚುನಾವಣೆಯ ಗೆಲುವು ಅಗತ್ಯವಿದೆ.ಒಟ್ಟು 28 ಕ್ಷೇತ್ರಗಳಲ್ಲಿ 25 ಸಾಧಿಸಲೇಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ಹೈಕಮಾಂಡ್ ನಿರ್ಧಾರದಂತೆ ಟಿಕೇಟ್ ಸಿಕ್ಕರೂ ಒಗ್ಗಟ್ಟಿನಿಂದ ಶ್ರಮಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ.ಜಗಳೂರು ಕ್ಷೇತ್ರದಲ್ಲಿ ನಾನು ಸಂಪೂರ್ಣ ಕಾಂಗ್ರೆಸ್ ಪಕ್ಷದಿಂದ ಅತ್ಯಧಿಕ ಮತಗಳನ್ನು ಹಾಕಿಸಲು ಕಟಿಬದ್ದರಾಗಿದ್ದೇವೆ ಎಂದರು.

ಸಂದರ್ಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ,ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಆಕಾಂಕ್ಷಿಗಳಾದ ವಿನಯ್ ಕುಮಾರ್,ಶಿವಕುಮಾರ್,ಒಡೆಯರ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!