Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೧೮

ಸೊಕ್ಕೆಯಲ್ಲಿ ಶಿರಡಿ ಸಾಯಿಬಾಬಾ ನೂತನ ದೇವಸ್ಥಾನ ಉದ್ಘಾಟನೆ

ಜಗಳೂರು ಸುದ್ದಿ:ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನವೆಂಬರ್ 20ರಿಂದ 23 ರವರೆಗೆ ಶಿರಡಿ ಸಾಯಿಬಾಬಾ ನೂತನ ದೇವಾಲಯದ ಪ್ರಾರಂಭೋತ್ಸವ ವಿಮಾನ ಗೋಪುರ,ಕಳಸಾರೋಹಣ ಹಾಗೂ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ಜರುಗಲಿವೆ ಎಂದು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಹೇಳಿದರು‌

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ನಮ್ಮ ತಂದೆ ತಿಪ್ಪೇಸ್ವಾಮಿ ಅವರ ಸಂಕಲ್ಪದೊಂದಿಗೆ ಕುಟುಂಬದ ಆರಾಧ್ಯ ದೈವ ಶಿರಡಿ ಸಾಯಿಬಾಬಾ ದೇವರ ಕೃಪೆ ನನ್ನ ಗ್ರಾಮಕ್ಕೆ ಬಂದು ಬೇಕಿದೆ ಎಂಬ ಸದುದ್ದೇಶದಿಂದ ಸುಸಜ್ಜಿತ ದೇವಸ್ಥಾನ ನಿರ್ಮಿಸಲಾಗಿದೆ.20ರಿಂದ 23 ರವರೆಗೆ ಮೂರು ದಿನಗಳ ಕಾರ್ಯ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಹಾಗೂ ಅಡ್ಡಪಲ್ಲಕ್ಕಿ ಉತ್ಸವ,ಹೋಮಗಳು,ಪಂಚಾಮೃತ ಅಭಿಷೇಕಗಳು ನಡೆಯಲಿದ್ದು.ನೆರೆಹೊರೆಯ ತಾಲೂಕಿನ‌ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ಸುತ್ತೂರು ಮಠದ ಲಿಂಗೈಕ್ಯ ಜಗದ್ಗುರು ಡಾ.ಶ್ರೀ.ಶಿವರಾತ್ರಿ ರಾಜೇಂದ್ರ,ಪರಮಪೂಜ್ಯ ಜಗದ್ಗುರು ದೇಶಿಕೇಂದ್ರ ಮಹಾಸ್ವಾಮಿಗಳು,ಡಾ.ಶಿವಾನುಭವ ಚರವರ್ಯ ಕರಿವೃಷಭ ದೇಶಿಕೇಂದ್ರ ಶಿವಯೊಗೀಶ್ವರ ಮಹಾಸ್ವಾಮಿಜಿ,ಕಣ್ವಕುಪ್ಪೆ ಗವಿಮಠದ ಷ.ಬ್ರ.ಡಾ.ನಾಲ್ವಡಿ ಶಾಂತಲಿಂಗ ಮಹಾಸ್ವಾಮಿಜಿ ಅವರು ಧಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ,ಸಚಿವ ಡಿ.ಸುಧಾಕರ್,ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ಅಸಗೋಡು ಜಯಸಿಂಹ,
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್,ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ,ಚನ್ನಗಿರಿಯ ಬಸವರಾಜ್ ಶಿವಗಂಗಾ,ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್,ಉದ್ಯಮಿ ಮಂಜುನಾಥ್,ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ,ಮಾಜಿ ಶಾಸಕರಾದ ಎಚ್.ಪಿ.ರಾಜೇಶ್,ಎಸ್.ವಿ‌.ರಾಮಚಂದ್ರ,ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಾಜಿ ಜಿ.ಪಂ.ಸದಸ್ಯ ಸೊಕ್ಕೆ ನಾಗರಾಜ್ ಮಾತನಾಡಿ,ತಾಲೂಕಿನ ಗಡಿಗ್ರಾಮ ಸೊಕ್ಕೆಯಲ್ಲಿ ಸುಸಜ್ಜಿತ ಸುಂದರ ವಿನ್ಯಾಸದೊಂದಿಗೆ ಶಿರಡಿ ಸಾಯಿಬಾಬಾ ನೂತನ ದೇವಸ್ಥಾನ ಉದ್ಘಾಟನೆ ಗೊಳ್ಳಲಿದೆ.ಸುತ್ತಮುತ್ತಲಿನ ತಾಲೂಕಿನ ಭಕ್ತ ಸಮೂಹ ಆಗಮಿಸಿ ಸನ್ನಿಧಾನದಲ್ಲಿ ಭಕ್ತಿ ಪರ್ವ ಮೆರೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ತಿರುಮಲೇಶ್,ಎ.ಎಂ ಮರುಳಾರಾಧ್ಯ,ಗ್ರಾ.ಪಂ.ಸದಸ್ಯ ಕೂಡ್ಲಿಗಿ ಬಸಣ್ಣ,ಮಲ್ಲೇಶ್,ಗೋವಿಂದಪ್ಪ,ಹಳ್ಳೆಪ್ಪ,ಪರುಶರಾಮ್ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!