Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೧೯

.ಒಳಮೀಸಲಾತಿ ಜಾರಿಗಾಗಿ ಮಾದಿಗ ಛಲವಾದಿ ಸಮುದಾಯದ ಮುಖಂಡರುಗಳು ಕ್ಷೇತ್ರದ  ಶಾಸಕರಿಗೆ ಮನವಿ ನೀಡಿ ಬೆಳಗಾವಿ ಅಧಿವೇಶನದಲ್ಲಿ ದ್ವನಿ ಎತ್ತುವಂತೆ 

ಜಗಳೂರು ಸುದ್ದಿ:ಪಟ್ಟಣದ ಜನಸಂಪರ್ಕ ಕಛೇರಿ ಮುಂಬಾಗ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ಮಾದಿಗ ಹಾಗೂ ಛಲವಾದಿ ಸಮಾಜದ ಮುಖಂಡರುಗಳು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮುಖಾಂತರ ಪ್ರಮುಖ‌ಬೀದಿಗಳಲ್ಲಿ ಸಂಚರಿಸಿ ಜನಸಂಪರ್ಕ ಕಛೇರಿ ಮುಂಬಾಗ ಜಮಾಯಿಸಿದರು.

ಮಾದಿಗ ಸಮಾಜದ ಹಿರಿಯ ಮುಖಂಡ ಶಂಭುಲಿಂಗಪ್ಪ ಮಾತನಾಡಿ,ದಶಕಗಳಿಂದ ಹೊರಾಟ ನಡೆಸುತ್ತಾ ಬಂದಿದ್ದರೂ ಆಡಳಿತ ಕಳೆದ ಅವಧಿಯಲ್ಲಿನ ಆಡಳಿತ ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ನ್ಯಾ.ಸದಾಶಿವ ಆಯೋಗ ಇದುವರೆಗೂ ಜಾರಿಗೊಂಡಿಲ್ಲ.ರಾಜ್ಯದಲ್ಲಿ ಮಾದಿಗ ಹಾಗೂ ಛಲವಾದಿ ಸಮುದಾಯಗಳು ಅಸ್ಪೃಶ್ಯತೆ ಅನುಭವಿಸುವುದಲ್ಲದೆ.ಸಾಮಾಜಿಕ,ಆರ್ಥಿಕ,ರಾಜಕೀಯ,ಶೈಕ್ಷಣಿಕ ಕ್ಷೇತ್ರಗಳಲ್ಲಿ  ಅವಕಾಶ ವಂಚಿತರಾಗುತ್ತಿದ್ದಾರೆ.ಸಾಮಾಜಿಕ ನ್ಯಾಯದಡಿ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ.ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ನಾಯಕರಾಗಿದ್ದು.ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೊಳಿಸುವಂತೆ ಕ್ಷೇತ್ರದ ಶಾಸಕರು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಒತ್ತಡ ತರಬೇಕು ಎಂದು ಮನವಿಮಾಡಿದರು.

ಶಾಸಕ ಬಿ.ದೇವೇಂದ್ರಪ್ಪ ಅವರು ಮನವಿ ಸ್ವೀಕರಿಸಿ ಮಾತನಾಡಿ,ನಾನು ಒಬ್ಬ ಎಸ್ ಟಿ ಮೀಸಲಾತಿ ಕ್ಷೇತ್ರದ ಶಾಸಕನಾಗಿ.ಶೋಷಿತ ಸಮುದಾಯಗಳ ಧ್ವನಿಯಾಗುವೆ.ನಾವುಕೂಡ  ಎಸ್ ಟಿ ಮೀಸಲಾತಿ ಹೆಚ್ಚಳ ಹೊರಾಟ ನಡೆಸುತ್ತಿದ್ದೇವೆ.ಡಾ.ಬಿ.ಆರ್ .ಅಂಬೇಡ್ಕರ್ ಅವರ ಸಂವಿಧಾನದಡಿ ಮೀಸಲಾತಿ ಪ್ರತಿಯೊಬ್ಬರ ಹಕ್ಕು.ಎಸ್.ಸಿ.ಪಟ್ಟಿಯಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಮಾದಿಗ ಹಾಗೂ ಛಲವಾದಿಗಳು ತಮ್ಮ ನೋವು,ಜೀವನ ಸ್ಥಿತಿಗತಿಗಳನ್ನು ನಾನು ಹತ್ತಿರದಿಂದ ಮನಗಂಡಿದ್ದು‌.ಬೆಳಗಾವಿ ಅಧಿವೇಶನದಲ್ಲಿ ತಮ್ಮ ಮನವಿಯನ್ನು ಸರಕಾರದ ಗಮನಹರಿಸುವೆ ಎಂದು ಭರವಸೆ ನೀಡಿದರು.

ಸಂದರ್ಭದಲ್ಲಿ ಛಲವಾದಿ ಸಮಾಜದ ಮುಖಂಡ ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕರಾದ ಸಿ.ತಿಪ್ಪೇಸ್ವಾಮಿ,ಬಿ.ಮಹೇಶ್ವರಪ್ಪ, ಮಾದಿಗ ಸಮಾಜದ ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ,ಭಾರತ ಗ್ಯಾಸ್ ಮಾಲೀಕ ಓಬಣ್ಣ,ಗೌರಿಪುರ ಸತ್ಯಮೂರ್ತಿ,ಗೌರಿಪುರ ಕುಬೇರಪ್ಪ,ಪಾಪಯ್ಯ,ಕುಬೇಂದ್ರಪ್ಪ,ಸತೀಶ್ ಮಲೆಮಾಚಿಕೆರೆ,ಧನ್ಯಕುಮಾರ್ ಎಚ್.ಎಂ ಹೊಳೆ,ಮಾದಿಹಳ್ಳಿ ಮಂಜುನಾಥ್,ಬಸವರಾಜ್,ಸಿದ್ದಮ್ಮನಹಳ್ಳಿ ವೆಂಕಟೇಶ್,ರೇಣುಕೇಶ್ ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!