Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ 22
ಜಗಳೂರು ಸುದ್ದಿ:ಭಾರತ ದೇಶದಲ್ಲಿ ಸಾಧು ಸಂತರು ನೆಲೆಸಿದ ಪುಣ್ಯ ಭೂಮಿಯಾಗಿದೆ.ಅಭಿವೃದ್ದಿಯ ಜೊತೆ ಧಾರ್ಮಿಕ ಸೇವೆ ಅಗತ್ಯ ಎಂದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಶಿರಡಿ ಸಾಯಿಬಾಬಾ ದೇವಾಲಯ ಮತ್ತು ವಿಮಾನ ಗೋಪುರ,ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಮನುಷ್ಯನ ಅತಿಯಾದ ಸ್ವಾರ್ಥಲಾಲಸೆ ಪ್ರಮಾದದಿಂದ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ .ಕಳೆದ ವರ್ಷ ಕೋವಿಡ್ ಮಹಾಮಾರಿ ಆಕ್ರಮಣದಿಂದ ದೇಶದಲ್ಲಿ ಸರಣಿ ಮರಣಮೃದಂಗವೇ ಭಾರಿಸಿತು.ಆದರೆ ಕೆಲ ಮುನ್ನೆಚ್ಚರಿಕೆಯಿಂದ ವಿಶ್ವಕ್ಕೆ ಹೋಲಿಸಿದರೆ ಭಾರತ ಸ್ವಲ್ಪ ನಿಯಂತ್ರಣಕ್ಕೆ ಬಂದಿತು ಎಂದು ಹೇಳಿದರು.
ಸಮಾಜದಲ್ಲಿ ಧಾರ್ಮಿಕ ಸೇವೆಗೈದರೆ ಪುಣ್ಯಪ್ರಾಪ್ತಿ ಸಾಧ್ಯ.ಸೊಕ್ಕೆ ತಿಪ್ಪೇಸ್ವಾಮಿ ಅವರು ಸಚಿವಾಲಯದಲ್ಲಿ ಸೇವೆಗೈದಿದ್ದಾರೆ.ಇಂದು ಸ್ವಗ್ರಾಮದಲ್ಲಿ ಜನಕಲ್ಯಾಣಕ್ಕಾಗಿ ದೇವಸ್ಥಾನ ನಿರ್ಮಿಸಿ ಭಕ್ತಿ ಪರ್ವ ಮೆರೆದ ಅವರ ವ್ಯಕ್ತಿತ್ವ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಪ್ರಸಕ್ತ ಸಾಲಿನಲ್ಲಿ ಶತಮಾನಗಳ ನಂತರ ಭೀಕರ ಬರಗಾಲ ಸವಾಲಾಗಿ ಪರಿಣಮಿಸಿದೆ.ಪ್ರಕೃತಿ ಮುನಿಸಿದರೆ ಯಾವ ಆಡಳಿತ ಸರಕಾರಗಳಿದ್ದರೂ ತತ್ತರಿಸುತ್ತವೆ.ಆದರೂ ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತ ಸರಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ,ಹಾಗೂ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬರನಿರ್ವಹಣೆಗೆ ಕಂಕಣ ಬದ್ದರಾಗಿದ್ದೇವೆ ಎಂದು ಭರವಸೆ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ತಾಲೂಕಿನಲ್ಲಿ ಬರ ಆವರಿಸಿರಬಹುದು.ಆದರೆ ಭಕ್ತಿ ಪರ್ವಕ್ಕೆ ಬರವಿಲ್ಲ.ಆಧ್ಯಾತ್ಮಿಕತೆಯಿಂದ ನೆಮ್ಮದಿ ಸಾಧ್ಯ.ಹಲವಾರು ಧಾರ್ಮಿಕ ಸ್ಥಳಗಳ ಕೇಂದ್ರವಾಗಿರುವ ತಾಲೂಕಿನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಿಸಿರುವುದು.ಸುತ್ತಮುತ್ತಲಿನ ತಾಲೂಕಿನ ಬಾಬಾ ಭಕ್ತಾದಿಗಳ ದರ್ಶನಕ್ಕೆ ಅನುಕೂಲವಾಗಲಿದೆ ಆಧ್ಯಾತ್ಮಿಕತೆಗೆ ನನ್ನ ಸಹಕಾರವಿದೆ ಎಂದರು.
ಮಂಡ್ಯ ಶಾಸಕ ರವಿಕುಮಾರ್ ಗೌಡ ಮಾತನಾಡಿ,
ಧಾರ್ಮಿಕ ಕೇಂದ್ರಗಳು ಶಾಂತಿ ನೆಮ್ಮದಿಯ ತಾಣವಾಗಿವೆ.
ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹೆಚ್ಚು ದೇವಸ್ಥಾನಗಳು ನಿರ್ಮಾಣಗೊಂಡರೆ ಧಾರ್ಮಿಕ ಪರಂಪರೆ ಹಾಗೂ ವಿಶ್ವಕ್ಕೆ ಗುರುವಾಗಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ನನ್ನ ಆಡಳಿತಾವಧಿಯಲ್ಲಿ ಗುರುತಿಸಲಾಗಿದ್ದ 40ಎಕರೆ ಸರಕಾರಿ ಜಮೀನು ಪಾಳುಬಿದ್ದಿದೆ.ಶಾಸಕರು ಹಾಗೂ ಕೃಷಿ ಸಚಿವರು ಕಾಳಜಿವಹಿಸಿ ಸಿರಿಧಾನ್ಯಗಳ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಇದರಿಂದ ಬರದನಾಡಿನ ರೈತರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಗ್ರಾ.ಪಂ ಮಾಜಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ,ನನ್ನ ತಂದೆ ತಿಪ್ಪೇಸ್ವಾಮಿ ಅವರ ಸಂಕಲ್ಪದಂತೆ ಸೊಕ್ಕೆ ಗ್ರಾಮದಲ್ಲಿ ಸುಂದರ ವಿನ್ಯಾಸದೊಂದಿಗೆ ದೇವಾಸ್ಥಾನ ನಿರ್ಮಾಣ ಮಾಡಲು ಸಹಕಾರಿಯಾಗಿದೆ..ಇಲ್ಲಿನ ಭಕ್ತರಿಗೆ ಸಮಾನತೆಯ ನೈತಿಕ ಜೀವನ,ನಂಬಿಕೆ,ಮತ್ತು ತಾಳ್ಮೆಗೆ ಸ್ಪೂರ್ತಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇವಸ್ಥಾನದ ನಿರ್ಮಾತೃ ಹಾಗೂ ವಿವಿಧ ಇಲಾಖೆಗಳ ಸಚಿವರುಗಳಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಸೊಕ್ಕೆ ಗ್ರಾಮದ ತಿಪ್ಪೇಸ್ವಾಮಿ ಸ್ವಾಗತಿಸಿದರು.
ಸಂದರ್ಭದಲ್ಲಿ ಡಾ.ಶಿವಾನುಭವ ಚರವರ್ಯ ಕರಿವೃಷಭ ದೇಶಿಕೇಂದ್ರ ಶಿವಯೊಗೀಶ್ವರ ಮಹಾಸ್ವಾಮಿಜಿ,ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ,ದಕ್ಷಿಣ ಭಾರತದ ಆರ್ ಎಸ್ ಎಸ್ ಪ್ರಮುಖ ಎನ್.ತಿಪ್ಪೇಸ್ವಾಮಿ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ,ದಕ್ಷಿಣ ಕನ್ನಡದ ಖ್ಯಾತ ಉದ್ಯಮಿ ಪರ್ವತಶೆಟ್ರು,ಚಲನಚಿತ್ರ ನಟ ಡಾಲಿ ಧನಂಜಯ್,
ನಾಗಭೂಷಣ್,ಸಂಗೀತ ನಿರ್ದೇಶಕ ಅನೂಪ್ ಸಿಲಿನ್,
ಪುಟ್ಟರಾಜ್,ಮುರಳಿ,ಜಿ.ಆರೋಗ್ಯ ಸಚಿವರ ಆಪ್ತ ಸಹಾಯಕ ನಾಗರಾಜ್,ತಹಶೀಲ್ದಾರ್ ಸೈಯದ್ ಕಲೀಂ ಉಲ್ ,ಮುಖಂಡರಾದ ಗಡಿಮಾಕುಂಟೆ, ಎ.ಎಂ.ಮರುಳಾರಾಧ್ಯ, ಮಾಜಿ ಜಿಪಂ ಸದಸ್ಯ ಸೊಕ್ಕೆ ನಾಗರಾಜ್,ಗ್ರಾ.ಪಂ ಅಧ್ಯಕ್ಷ ತಿರುಮಲ ಸೇರಿದಂತೆ ಭಾಗವಹಿಸಿದ್ದರು.