ಶುಕ್ರದೆಸೆ ನ್ಯೂಸ್ :-ಜಗಳೂರು

ಕ್ಷೇತ್ರಕ್ಕೆ ನೂತನವಾಗಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ  ಎಸ್ ಎಸ್ ಮಲ್ಲಿಕಾರ್ಜುನ ರವರಿಗೆ   ಅದ್ದೂರಿ ಸ್ವಾಗತದೊಂದಿಗೆ ಕ್ಷೇತ್ರದ    ಶಾಸಕ ಬಿ ದೇವೇಂದ್ರಪ್ಪ ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಬರಮಾಡಿಕೊಂಡರು .

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೨೧ 

ಜಗಳೂರು ಪಟ್ಟಣಕ್ಕೆ  ಸಚಿವರಾಗಿ ಆಯ್ಕೆಯಾದ ದಿನಗಳಿಂದಲೂ ಕ್ಷೇತ್ರಕ್ಕೆ   ಗಣಿ ಮತ್ತು ಭೂವಿಜ್ಞಾನ   ಹಾಗೂ ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ರವರು ಆಗಮಿಸಿರಲಿಲ್ಲ ಆದ್ದರಿಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತ ಅಭಿಮಾನಿಗಳು ಮತ್ತು ಶಾಸಕರು ಅದ್ದೂರಿ ಸಂಭ್ರದಿಂದ ಬರಮಾಡಿಕೊಂಡು ಬೃಹತ್ತಾದ ಹೂವಿನ  ಹಾರ ಹಾಕಿ  ಸ್ವಾಗತ ಕೋರಿದರು ನಂತರ 

ಪಟ್ಟಣದ ತಾಪಂ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ  ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ  ಅಧಿಕಾರಿಗಳ  ಪ್ರಗತಿಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು . 

ಜಗಳೂರು ಕ್ಷೇತ್ರದಲ್ಲಿ ಈ ಬಾರಿ ಬರಪರಿಸ್ಥಿತಿಯಲ್ಲಿ ಬೆಳೆ ಹಾನಿ 

ಕೇಂದ್ರದ ಎನ್ ಡಿ ಆರ್ ಎಫ್ ಬರ ಅಧ್ಯಯನ ತಂಡಕ್ಕೆ ₹250 ಕೋಟಿ ಬರಪರಿಹಾರಕ್ಕೆ ಪ್ರಸ್ತಾವನೆ ವರದಿ ನೀಡಿದರು ಇದುವರೆಗೂ ಹಣ ಬಿಡುಗಡೆಯಾಗಿಲ್ಲ.ಜಿಲ್ಲಾ ಸಂಸದರು ಬರ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ವಿಫಲವಾಗಿದ್ದಾರೆ   ರೈತರು ಸಂಸದರಿಗೆ ಪ್ರಶ್ನಿಸಿಬೇಕಿದೆ ಎಂದು ಹೇಳಿದರು. ಅಧಿಕಾರಿಗಳು ಪಟ್ಟಣದ ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರು ಕಛೇರಿಗೆ ಬಂದಾಗ ಸ್ವಂದಿಸಿ ಕೆಲಸ ಮಾಡುವಂತೆ ತಿಳಿಸಿದರು.ನರೇಗಾ ಯೋಜನೆಯಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಿ ಮುಂಜಾಗ್ರತೆ ಬೇಸಿಗೆ ಮುನ್ನ ಕುಡಿಯುವ ನೀರಿನ ಅಭಾವವಾಗದಂತೆ ನಿಗಾಹವಹಿಸಿ ಎಂದರು

ಸಚಿವ ಎಸ್ ಎಸ್ ಎಂ ಅಧಿಕಾರಿಗಳಿಗೆ ತರಾಟೆ 

ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರ ಕೆಲಸ ಮಾಡಿ ಸರ್ಕಾರದ ಯೋಜನೆಗಳನ್ನು ಪ್ರಮಾಣಿಕವಾಗಿ ತಲುಪಿಸಬೇಕು .

ಪಿಡಿಓ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ   

ದೇವಿಕೆರೆ 

.ಗುತ್ತಿದುರ್ಗ .ಹನುಮಂತಪುರ ಕೆಚ್ಚೆನಹಳ್ಳಿ ವಿವಿಧ ಗ್ರಾಪಂ ಗಳಲ್ಲಿ ಮಹಾತ್ಮ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆಡಿಯಲ್ಲಿ ಟಾರ್ಗೆಟ್ ರಿಚ್ ಮಾಡದೇ ಕಡಿಮೆಯಾಗಿದೆ ದೇವಿಕೆರೆ ಗ್ರಾಪಂ ಬಾಗದಲ್ಲಿ ಉತ್ತಮ ಸಿ ಸಿ ರಸ್ತೆ ನಿರ್ಮಾಣ ಮಾಡಿರುತ್ತಾರೆ . ಅಧಿಕಾರಿಗಳು ಬೆಜವಾಬ್ದರಿ ಮಾಡದೆ ಕೆಲಸ ಮಾಡಿ ಎಂದು ಚುರುಕು ಮಟ್ಟಿಸಿದರು‌.

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದು ಕೇಂದ್ರದ ಜಲಜೀವನ ಮಿಷನ್ ಯೋಜನೆಡಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ ಎಂದರು 

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ,ಒಂದು ಕಡೆ ಬರ ಮತ್ತೊಂದೆಡೆ ಹನುಮಂತಾಪುರ ಸೇರಿದಂತೆ ವಿವಿದೆಡೆ ನೀರಿನ ಆಹಾಕಾರ ಹೆಚ್ಚುತ್ತಿದ್ದು.ಸಾರ್ವಜನಿಕರಿಗೆ ಪಿಡಿಓ ಗಳು ಕೈಗೆ ಸಿಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ.ಕೇಂದ್ರಸ್ಥಾನದಲ್ಲಿದ್ದು ಸಮಸ್ಯೆಗಳಿಗೆ ಸ್ಪಂದಿಸಬೇಕು ನಿರ್ಲಕ್ಷ್ಯ ವಹಿಸಿದರೆ ನಿಮ್ಮ‌ರಕ್ಷಣೆಗೆ ಯಾರೂ ಬರುವುದಿಲ್ಲ ಎಂದು ಪಿಡಿಓ ಕೊಟ್ರೇಶ್ ಸೇರಿದಂತೆ ಇತರರಿಗೆ ಎಚ್ಚರಿಸಿದರು.

ತಾಲೂಕಿಗೆ ಡಯಾಲಿಸಿಸ್ ಯಂತ್ರಗಳ ಅವಶ್ಯಕತೆಯಿದೆ.ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗೆ ದಾವಣಗೆರೆಗೆ ತೆರಳುವ ಅನಿವಾರ್ಯತೆಯಿದೆ.ಅಲ್ಲದೆ ಟಿಎಚ್.ಓ ಕಛೇರಿಯ ಹಳೆಯ ಕಟ್ಟಡ ಸಂಪೂರ್ಣ  ಶಿಥಿಲಾವಸ್ಥೆಯಲ್ಲಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ.ಅಲ್ಲದೆ ಸುತ್ತಲೂ ಅನೈಮರ್ಲ್ಯತೆ ತಾಂಡವಾಡುತ್ತಿದೆ.ಕೂಡಲೇ  ಸ್ವಚ್ಛತೆ ಗೊಳಿಸಬೇಕು ಎಂದು ಸೂಚಿಸಿದರು.

ಬಾಡಿಗೆ ಕಟ್ಟಡದಲ್ಲಿ  ಕಾರ್ಯನಿರ್ವಹಿಸುವ ಇಲಾಖೆಗಳನ್ನು ಪಟ್ಟಣ ಪಂಚಾಯಿತಿ ಸುಸಜ್ಜಿತ ಕಟ್ಟಡಕ್ಕೆ ವರ್ಗಾಯಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ ಎಂ ವಿ .ವೆಂಕಟೇಶ್ ಮಾತನಾಡಿ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮೀ ಯೊಜನೆಯಿಂದ ಯಾವ ಕುಟುಂಬಗಳು ವಂಚಿತವಾಗದಂತೆ ಬಾಕಿಯಿರುವ ,ಫಲಾನುಭವಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿ ಕೆಲಸ ಮಾಡಿ ಎಂದರು .

.ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಮಾತನಾಡಿದರು

ಮನರೇಗಾ ಯೋಜನೆಯಡಿ ಕೂಲಿಕಾರರಿಗೆ ತಪ್ಪದೆ ಕೂಲಿ  ಹಣ ಪಾವತಿಬೇಕು ಈ ಯೋಜನೆ ಮಹತ್ವದ ಯೋಜನೆಯಾಗಿದ್ದು ಇಂತ ಬರ ಪರಿಸ್ಥಿತಿಯಲ್ಲಿ ದುಡಿಯುವ ಕೈಗಳಿಗೆ ಅತ್ಯಂತ ಸಹಕಾರಿಯಾಗಿದೆ ಇದರ ಜೊತೆಗೆ ವಯಕ್ತಿಕ ಕಾಮಗಾರಿ ಸಮುದಾಯ ಸಾರ್ವಜನಿಕ ಕಾಮಗಾರಿ ಗಳಾದ ಸಿಸಿ ರಸ್ತೆ. ಶಾಲಾ ಕಾಂಪೌಂಡ್. ಹಾಗೂ ವಯಕ್ತಿಕ ದನದ ಕೊಟ್ಟಿಗೆಯಂತ ಕಾಮಗಾರಿ ಆಯ್ಕೆ ಮಾಡಿಕೊಂಡು ಸರ್ಕಾರದ ಹಣ ದುರ್ಬಳಕೆಯಾಗದಂತೆ ಕಾರ್ಯ ಚುರುಕುಗೋಳಿಸಿ 

ತಾ.ಪಂ ಯೋಜನಾಧಿಕಾರಿ ಚಂದ್ರಶೇಖರ್ ವರದಿ ಮಂಡಿಸಿದರು ಉದ್ಯೋಗ ಖಾತ್ರಿ .ಸರಕಾರದ ನಿಯಮದಂತೆ  60:40 ಅನುಪಾತದಲ್ಲಿ  ಕೂಲಿ ಮತ್ತು ಸಾಮಾಗ್ರಿ ಹಣ ಪಾವತಿಗೆ ಅವಕಾಶ ವಿದ್ದು.ಆದರೆ ತಾಲೂಕಿನಲ್ಲಿ ಕಾಮಗಾರಿಗಳ  ಗುಣಮಟ್ಟಕ್ಕಾಗಿ  75:25 ಅನುಪಾತದಲ್ಲಿ ಕೂಲಿ ಮತ್ತು ಸಾಮಾಗ್ರಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿವೆ ಎಂದು ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥನ್ ಕಿಮಾವತ್ ವರದಿ ನೀಡಿದರು ವಾಡಿಕೆಗಿಂತ 

361 ಮಿ.ಮೀ ಕಡಿಮೆ ಮಳೆಯಾಗಿದೆ‌.ಮಳೆಯ ಕೊರತೆಯಿಂದ ಮುಂಗಾರು ಬೆಳೆ ಶೇ.70ರಿಂದ 80 ರಷ್ಟು ಬೆಳೆ ಇಳುವರಿ ಕಡಿಮೆಯಾಗಿದೆ‌.ಶೇಕಡ 80ರಿಂದ  90 ರಷ್ಟು  ನಷ್ಟವಾಗಿರುವ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಒಟ್ಟು ಪ್ರತಿ ಎಕರೆಗೆ ₹13000  ದವರೆಗೆ ಪರಿಹಾರ ನೀಡಲಾಗುವುದು.  ಇತ್ತೀಚೆಗೆ ಮಳೆಯಾಗಿದ್ದು ಕಡಲೆ 3100 ಹೆಕ್ಟರ್ ಪ್ರದೇಶ ಹಿಂಗಾರು ಬಿತ್ತನೆಕಾರ್ಯ ನಡೆದಿದೆ ಎಂದರು   

ಸಂದರ್ಭದಲ್ಲಿ ಜಿ.ಪಂ.ಸಿಇಓ ಸುರೇಶ್ ಬಿ.ಇಟ್ನಾಳ್,ಅಪರ ಜಿಲ್ಲಾಧಿಕಾರಿ ಲೊಕೇಶ್,ಉಪವಿಭಾಗ ಅಧಿಕಾರಿ ದುರ್ಗಶ್ರೀ,ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ,ತಹಶೀಲ್ದಾರ್ ಸಯ್ಯದ್ ಕಲೀಂಉಲ್ಲಾ,ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!