ಅಂಬೇಡ್ಕರ್ ಅವರ ಆಶಯದಂತೆ ಮೌಢ್ಯಮುಕ್ತ ಸಮಾಜಕ್ಕೆ ಕೈಜೋಡಿಸಿ:ಕಾನನಕಟ್ಟೆ ಪ್ರಭು ಕರೆ 

ಜಗಳೂರು ಸುದ್ದಿ:ಡಾ.ಬಿ.ಆರ್.ಅಂಬೇಡ್ಕರ್ ಅವರ  ಆಶಯದಂತೆ ಮೌಢ್ಯಮುಕ್ತ‌ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು  ಎಂದು‌ ಮಾನವ ಬಂಧುತ್ವ ವೇದಿಕೆ ಜಿಲ್ಲಾ  ಮುಖಂಡ ಕಾನನಕಟ್ಟೆ ಪ್ರಭು ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದಿಂದ ಹಮ್ಮಿಕೊಂಡಿದ್ದ 67 ನೇ ಪರಿನಿಬ್ಬಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೋಷಿತ ಸಮುದಾಯಗಳು  ಮೌಢ್ಯ, ಕಂದಾಚಾರಗಳು ಬಲಿಯಾಗುತ್ತಿರುವುದು  ಬೇಸರದ ಸಂಗತಿ.ಮಾನವ ಬಂಧುತ್ವವೇದಿಕೆ ಮೂಲಕ ಮಾನ್ಯ ಸಚಿವರಾದ ಸತೀಶ್ ಜಾರಕಿಹೊಳೆ ಅವರು ಬುದ್ದ ಬಸವ ಅಂಬೇಡ್ಕರ್ ಅವರ ಆದರ್ಶಗಳನ್ನು ಸ್ಮಶಾನ ವಾಸ್ತವ್ಯ,ಬಸವಪಂಚಮಿ ಆಚರಣೆ  ಮೂಲಕ  ವಿವಿಧ ವೈಚಾರಿಕತೆಯನ್ನು ಯುವ ಪೀಳಿಗೆಗೆ ಪಸರಿಸುತ್ತಿದ್ದಾರೆ.ತಾಲೂಕಿನಲ್ಲಿಯೂ ಇಂದು ರುದ್ರಭೂಮಿಯಲ್ಲಿ ಸ್ಮಶಾನ ವಾಸ್ಯವ್ಯ ನಡೆಸಲಾಗುವುದು ಎಂದು ತಿಳಿಸಿದರು.

  ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರ ಸಂಘದ ರಾಜ್ಯ ಗೌರವ ಅಧ್ಯಕ್ಷ ಸಿ.ಬಸವರಾಜ್ ಮಾತನಾಡಿ,ಅಂಬೇಡ್ಕರ್ ಸಂವಿಧಾನ ಜಾರಿಗೊಂಡು 6 ದಶಕಗಳು ಕಳೆದರೂ ಶೋಷಣೆ ತಪ್ಪಿಲ್ಲ. ತಳಸಮುದಾಯಗಳು ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.

ಸಂದರ್ಭದಲ್ಲಿ  ಮುಖಂಡ ನಜೀರ್ ಅಹಮ್ಮದ್,ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಕ್ಕಮ್ಮನಹಟ್ಟಿ ಮಂಜಣ್ಣ,ಉಪಾಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ ,ಕಾರ್ಯದರ್ಶಿ ಮರೇನಹಳ್ಳಿ ಬಾಬು,ಸಂಘಟನಾ ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್,ಕಾನೂನು ಸಲಹೆಗಾರ ಗೋಗುದ್ದು ತಿಪ್ಪೇಸ್ವಾಮಿ,ಖಜಾಂಚಿ ಮಾರುತಿ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!