ಜಗಳೂರು ಸುದ್ದಿ:ರಾಜಪ್ರಭುತ್ವಕ್ಕೆ ಇತಿಶ್ರೀ ಹಾಡಿ ಸಂವಿಧಾನದಡಿ  ಪ್ರಜಾಪ್ರಭುತ್ವ ವ್ಯವಸ್ಥೆ ಕಲ್ಪಿಸಿದ  ಸಂವಿಧಾನವೇ ಶ್ರೇಷ್ಠ ಎಂದು ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ‌.ಪಾಲಯ್ಯ ಅಭಿಪ್ರಾಯಪಟ್ಟರು.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 6

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿ ಪರ‌ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್ .ಅಂಬೇಡ್ಕರ್ ಅವರ  67 ನೇ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಸಂವಿಧಾನ ಪೂರ್ವದಲ್ಲಿ ಮತದಾನದಹಕ್ಕು ಕೇವಲ  ಒಂದು ವರ್ಗಕ್ಕೆ ಸೀಮಿತವಾಗಿತ್ತು.ಹಾಗೂ ರಾಜಮನೆತನದವರು ವಂಶ ಪರಂಪರೆಯಾಗಿ ಪರ್ಯಾಯವಾಗಿ   ಆಡಳಿತದ ಅಧಿಕಾರ ಅನುಭವಿಸುತ್ತಿದ್ದರು.ಆದರೆ ಸಂವಿಧಾನ ಜಾರಿಯಾದ ನಂತರ ದೇಶದ ಸಾಮಾನ್ಯ ಪ್ರಜೆಗೂ ಆಡಳಿತದ ಅಧಿಕಾರ ಲಭಿಸಲು ಹಾಗೂ ಅವಕಾಶ ವಂಚಿತ ಮಹಿಳೆಯರಿಗೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಚಲಾಯಿಸಲು ಅವಕಾಶ ಒದಗಿಸಿರುವುದು ನಮ್ಮೆಲ್ಲರ ಸೌಭಾಗ್ಯ.ನಾನು ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿರುವೆ.ಸ್ಥಳೀಯ ಆಡಳಿತ ವಿಕೇಂದ್ರಿಕರಣದಲ್ಲಿ ತಾಲೂಕಿನಲ್ಲಿ ಸಾವಿರಾರು ಜನ ಅಧಿಕಾರ ಅನುಭವಿಸಿದ್ದರೂ ಪ್ರಜಾಪ್ರಭುತ್ವಕ್ಕೆ ಕಾರಣವಾದ ಬಾಬಾಸಾಹೇಬರನ್ನು ಮಾತ್ರ ಯಾರೋಬ್ಬರೂ ಸ್ಮರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರು ಒಳಗೊಂಡಂತೆ ಶೋಷಿತ ವರ್ಗಕ್ಕೆ ವಿದ್ಯಾಭ್ಯಾಸಕ್ಕೆ ನಿರಾಕಾರಣೆಯಿದ್ದ ಸಂದರ್ಭದಲ್ಲಿ ಬಾಬಾಸಾಹೇಬರು ವಿದೇಶದಲ್ಲಿ ಅಭ್ಯಾಸ ಮಾಡಿ ದೇಶಕ್ಕೆ ಸಂವಿಧಾನ ರಚಿಸಿದ ಮಹಾನಾಯಕರಾಗಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆಯಿಂದ.ನನ್ನ ಆಡಳಿತಾವಧಿಯಲ್ಲಿ ಪಟ್ಟಣದ ಕೇಂದ್ರಸ್ಥಾನದಲ್ಲಿ  ಪುತ್ಥಳಿ ನಿರ್ಮಿಸಿ ಋಣ ತೀರಿಸಿರುವೆ ಎಂದರು.

ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ,

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ  ಬಿಕ್ಷೆಯಿಂದ ನಾವು ಬದುಕುತ್ತಿದ್ದೇವೆ.ಅವರ ಜೀವಿತಾವಧಿ ಯಲ್ಲಿ ಅಂದಿನ ಸಮಾಜದಲ್ಲಿ ಅನುಭವಿಸಿದ ಸಾಮಾಜಿಕ ಶೋಷಣೆ,ಅಸ್ಪೃಶ್ಯತೆ, ಉಪದ್ರವಗಳು,ಸಂಕಷ್ಟಗಳನ್ನು ನೈಜಜೀವನಾಧಾರಿತ ಧಾರವಾಹಿ ಮಹಾನಾಯಕದಲ್ಲಿ ಚಿತ್ರೀಕರಣಗೊಂಡಿದೆ. ಪ್ರತಿಯೊಬ್ಬರೂ ವೀಕ್ಷಿಸಿ ಮನಗಾಣಬೇಕಿದೆ ಎಂದರು.

ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ,ಬಾಬಾಸಾಹೇಬರ  ಜನ್ಮ,ವಿದ್ಯಾಭ್ಯಾಸ,ಬೌದ್ದಧರ್ಮ ಸ್ವೀಕಾರ,ಅಸ್ಮಿತೆ ಹಾಗೂ ಅಂತ್ಯಸಂಸ್ಕಾರವಾದ ಸ್ಥಳಗಳು ಅವರ ಅನುಯಾಯಿಗಳಿಗೆ ಇಂದಿಗೂ ಪುಣ್ಯಭೂಮಿಗಳಾಗಿವೆ.ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ ಸರ್ವರಿಗೂ ಸಮಪಾಲಿನ ಪರಿಕಲ್ಪನೆಯಲ್ಲಿ ಸಂವಿಧಾನದ ಆಶಯಗಳು ಪಾಲನೆಯಾಗುತ್ತಿವೆ ಎಂದರು.

ಪೊಲೀಸ್  ನಿರೀಕ್ಷಕ  ಶ್ರೀನಿವಾಸ್ ರಾವ್ ಮಾತನಾಡಿ,ಅಂಬೇಡ್ಕರ್ ಆಶಯದಂತೆ ಎಲ್ಲಾ ಸಮುದಾಯದವರು  ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಸಂಘಟನೆಗಳು ವೈಮನಸ್ಸುಗಳಿಂದ ವಿಮುಖಗೊಳ್ಳುತ್ತಿವೆ.ಅಂಬೇಡ್ಕರ್ ಅವರ ಚರಿತ್ರೆ  ವಿದೇಶಿಗಳಲ್ಲಿ ಪ್ರಾರಂಭವಾಗಿವೆ.ಆದರೆ ನಮ್ಮ ದೇಶದಲ್ಲಿ ಸೃಷ್ಠಿಸಿದ  ಚರಿತ್ರೆ ಓದಲು ಸಮಯವಿಲ್ಲ  ವಿಷಾದ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ‌ ಎನ್ ಟಿ ಎರ್ರಿಸ್ವಾಮಿ ಮಾತನಾಡಿ ಸಮಾಜದಲ್ಲಿ ಸ್ವಾಭಿಮಾನದ ಬದುಕುವ ಹಕ್ಕು ನೀಡಿದ  ಅಂಬೇಡ್ಕರ್ ರವರ ಸಂವಿಧಾನ ದೇಶದ ಪ್ರತಿಯೊಬ್ಬ ಮಾನವನ ಕಲ್ಯಾಣಕ್ಕೆ ಅತ್ಯಂತ ಸಹಕಾರಿಯಾಗಿದೆ.ಪ್ರಥಮವಾಗಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿ ಮಹಿಳಾ ಸ್ವಾತಂತ್ರ್ಯ ಸಬಲಿಕರಣಕ್ಕೆ ಆವಕಾಶ ಕಲ್ಪಿಸಿ ಸಮಾಜದಲ್ಲಿ ಶಾಂತಿ ಸಹೋದರರಂತೆ ಜೀವಿಸಲು ಅಂಬೇಡ್ಕರ್ ರವರ ಕಾನೂನುಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಎಸ್ ಎಸ್ ತಾಲೂಕು ಅಧ್ಯಕ್ಷ ಕುಬೇಂದ್ರಪ್ಪ,ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಸಿದ್ದಪ್ಪ,ದಲಿತ ಸಂಘಟನೆ ಒಕ್ಕೂಟದ ತಾಲೂಕು ಅಧ್ಯಕ್ಷ ರಾಜಪ್ಪ ವ್ಯಾಸಗೊಂಡನಹಳ್ಳಿ,ಕೆಪಿಸಿಸಿ ಎಸ್ ಸಿ ಘಟಕದ ಸಿ.ತಿಪ್ಪೇಸ್ವಾಮಿ, ತಾಯಿಟೋಣಿ ಬಾಬು

,ಪ್ರಗತಿಪರ ಸಂಘಟನೆ ಮುಖಂಡ ಮಾದಿಹಳ್ಳಿ ಮಂಜುನಾಥ್,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,ಪ.ಪಂ  ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್,ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಲೋಹಿತ್,ಮುಖಂಡರಾದ ಮಾಜಿ  ಮಂಜಣ್ಣ,ಸಿದ್ದಮ್ಮನಹಳ್ಳಿ ವೆಂಕಟೇಶ್,ರಾಜಶೇಖರ್,ಕುಮಾರ್,ರುದ್ರೇಶ್,ಗೌರಿಪುರ ಕುಬೇರಪ್ಪ,ಕೆಳಗೋಟೆ ಅಹಮ್ಮದ್ ಅಲಿ, ದೋಣಿಹಳ್ಳಿ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಜೀರ್ ಅಹಮ್ಮದ್,ಮೆದಗಿನಕೆರೆ ಹನುಮಂತಪ್ಪ ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!