ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಡಿ ಎಲ್ ಕೆ ಜಿ ಆರಂಭಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಲಾಗಿದೆ ಬಿಇಓ ಹಾಲಮೂರ್ತಿ ವಿಶ್ವಾಸ 

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 8

ಸುದ್ದಿ ಜಗಳೂರು ದಿನಾಂಕ:08.12.2023 ರಂದು ಸ.ಉ.ಹಿ.ಪ್ರಾ.ಶಾಲೆ ತಮಲೇಹಳ್ಳಿಯಲ್ಲಿ ಕೇಂದ್ರ ಪ್ರಾಯೋಜಿತ ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಎಲ್.ಕೆ.ಜಿ ಪೂರ್ವಪ್ರಾಥಮಿಕ ತರಗತಿ ಆರಂಭದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹಾಲಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ 2022_23 ರ ಆಯವ್ಯಯದಂತೆ ನಮ್ಮ ರಾಜ್ಯದಲ್ಲಿ ತಾಲ್ಲೂಕಿಗೆ ಒಂದು ಶಾಲೆಯಂತೆ ಒಟ್ಟು 129 ಪಿ.ಎಂ.ಶ್ರೀ ಶಾಲೆಗಳುಮಂಜೂರಾಗಿದ್ದು ನಮ್ಮ ತಾಲ್ಲೂಕಿನಲ್ಲಿ ತಮಲೇಹಳ್ಳಿ ಶಾಲೆಯು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು.

ಜಗಳೂರು ತಾಲೂಕಿನಲ್ಲಿ   ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮಲೇಹಳ್ಳಿ ಶಾಲೆಯು ಪಿ ಎಂ ಶ್ರಿ ಯೋಜನೆಗೆ ಆಯ್ಕೆ  ಆಗಿರುವುದು ತುಂಬಾ ಸಂತೋಷದ ಸಂಗತಿ..ಈ ಪಿಎಂಶ್ರೀ ಯೋಜನೆ ಯಡಿಯಲ್ಲಿ  ಈ ಶಾಲೆಗಳಿಗೆ  ಐದು ವರ್ಷಗಳ  2022_ ರಿಂದ 2026-2027 ನೇ ಸಾಲಿನವರಿಗೆ ಸುಮಾರು 5 ವರ್ಷಗಳ  ಅವಧಿಯಲ್ಲಿ   ಈ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಅಗತ್ಯ  ಮೂಲಭೂತ ಸೌಲಭ್ಯಗಳನ್ನು  ಕಲ್ಪಿಸಲು ಸರ್ಕಾರ ಕ್ರಿಯೆ ಯೋಜನೆಯನ್ನು ಸಿದ್ಧಗೊಳಿಸಿದೆ

.ಶಾಲೆಯಲ್ಲಿ ಶೈಕ್ಷಣಿಕ ಸಾಲಿಗೆ ಪೂರ್ವ ಪ್ರಾಥಮಿಕ ಎಲ್.ಕೆ.ಜಿ ಆರಭಿಸುವುದರೊಂದಿಗೆ ಶಾಲೆಯ ಕಟ್ಟಡಗಳ ನಿರ್ಮಾಣ, ವಿಜ್ಞಾನ. ಗಣಿತ ಪ್ರಯೋಗಾಲಯ. ಕ್ರೀಡಾ ಸಾಮಗ್ರಿಗಳ ಖರೀದಿ ಮತ್ತು ಶಾಲೆಯ ಭೌತಿಕ ಪರಿಸರ ಸೌಂದರ್ಯಕರಣಕ್ಕೆ ಅನುದಾನ ಬಿಡುಗಡೆಯಾಗಿದೆ. ಇಲ್ಲಿನ  ಪೋಷಕರು ಈ ಕಾರ್ಯಕ್ರಮದ ಪ್ರಯೋಜನೆ ಪಡೆದುಕೊಂಡು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು

  ಈ  ಯೋಜನೆಡಿಯಲ್ಲಿ ಆಯ್ಕೆಯಾದ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ . ಸರ್ಕಾರದ ಆದೇಶದಂತೆ   ಪಿ ಎಂ ಶ್ರೀ  ಯೋಜನೆಗೆ ಆಯ್ಕೆಯಾದ ಕರ್ನಾಟಕ ರಾಜ್ಯದ 129 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಎಲ್ ಕೆ ಜಿ ತರಗತಿಗಳು ಈ ಪ್ರಸಕ್ತ ಸಾಲಿನಲ್ಲಿ ಪ್ರಾರಂಭವಾಗುತ್ತಿವೆ    ಈ ಪ್ರಸಕ್ತ  ಶೈಕ್ಷಣಿಕ ವರ್ಷದಲ್ಲಿ ಈ  ದಿನಾಂಕ:08-12- 2023 ರಂದು ಪೂರ್ವ ಪ್ರಾಥಮಿಕ ಶಾಲೆಯ L K G ತರಗತಿ ಆರಂಭಿಸಲು ಶಾಲಾ  S D M C ಯವರು,ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು  ನಮ್ಮ ತಾಲೂಕಿನಲ್ಲಿ ಈ ಶಾಲೆ      ಪಿ ಎಂ ಶ್ರೀ ಶಾಲೆಗೆ  ಆಯ್ಕೆ  ಆಗಿರುವುದು ಈ ಶಾಲೆಯ ಮಕ್ಕಳ ಸೌಭಾಗ್ಯ ಎಂದು ಭಾವಿಸುತ್ತೇನೆ. 

ಈ ಯೋಜನೆಯ ಅಡಿಯಲ್ಲಿ ನಮ್ಮ  ಸರ್ಕಾರಿ ಶಾಲೆಗಳಲ್ಲಿ  ಪೂರ್ವ ಪ್ರಾಥಮಿಕ ಶಾಲೆ ಆರಂಭವಾಗುತ್ತಿರುವುದು ಸಹ ಸತೋಷದ ಸಂಗತಿ.  ಈ ಶಾಲೆಯಲ್ಲಿ ಕಾರ್ಯನಿರ್ವಹಿಸುವಂತ ಎಲ್ಲಾ ಶಿಕ್ಷಕರು ಉತ್ತಮವಾಗಿ ಕರ್ತವ್ಯ ಪಾಲನೆ ಮಾಡಿ  ಮಕ್ಕಳಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ಅಲ್ಲದೆ ಈ ಯೋಜನೆಯ ಅಡಿಯಲ್ಲಿ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರ  ಶಾಲಾ   ಕಟ್ಟಡ ,ಶೌಚಾಲಯ ಕುಡಿಯುವ ನೀರು   ಪೀಠೋಪಕರಣಗಳು, ಶಾಲಾ ಕಟ್ಟಡ ದುರಸ್ತಿ ಅಲ್ಲದೆ ಇತರೆ  ಎಲ್ಲಾ ಶೈಕ್ಷಣಿಕವಾಗಿ ಮತ್ತು ಶಾಲಾ ಭೌತಿಕವಾಗಿ  ಅಭಿವೃದ್ಧಿಹೊಂದಲು  ಎಲ್ಲಾ ಸೌಲಭ್ಯಗಳಿಗೆ ಈ ಯೋಜನೆಯ ಅಡಿಯಲ್ಲಿ ಅನುದಾನ  ದೊರೆಯಲಿದೆ ಅದನ್ನು ಸದುಪಯೋಗಪಡಿಸಿಕೊಂಡು ಶಾಲೆಯನ್ನು  ಜಿಲ್ಲೆಯಲ್ಲಿ  ಉತ್ತಮ ಮಾದರಿ ಶಾಲೆಯನ್ನಾಗಿಸಲು ಎಲ್ಲರೂ ಒಟ್ಟಾಗಿ ಶ್ರಮವಹಿಸಿ ಎಂದರು.  ಹಾಗೇನೆ ಪೋಷಕರು ಸಹ ಇದಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಹಿರಿಯರು ಈ ನಮ್ಮ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

 ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ್ ಅವರು ಮಾತನಾಡಿ ನಮ್ಮ ಶಾಲೆಗೆ ಪಿಎಂಶ್ರೀ ಯೋಜನೆಗೆ ಆಯ್ಕೆ   ಆಗಿರುವುದು, ನಮ್ಮ  ಗ್ರಾಮಕ್ಕೆ ಶುಕ್ರ ಧಸೆ ತಿರುಗಿದೆ ಎಂದು ಶ್ಲಾಘಿಸಿದರು.  ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು   ತಪ್ಪದೇ ಪ್ರತಿದಿನ ಶಾಲೆಗೆ ಕಳುಹಿಸಿ ಇದರ ಸದುಪಯೋಗ ಪಡೆಯಬೇಕು ಎಂದರು.

 ನಮ್ಮ ಶಾಲೆಯಲ್ಲಿ  13 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಕರು ತುಂಬಾ ಉತ್ತಮವಾಗಿ  ಕಾರ್ಯನಿರ್ವಹಿಸಿದ್ದಾರೆ. 

 ಮಕ್ಕಳಿಗೆ ಉತ್ತಮವಾಗಿ ಕಲಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದರ ಸದುಪಯೋಗವನ್ನು ಎಲ್ಲಾ ಪೋಷಕರು  ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು. ಈ ನಮ್ಮ ಶಾಲೆಯಲ್ಲಿರುವ ಶಿಕ್ಷಕರ ಒಟ್ಟಿಗೆ ಎಸ್ ಡಿ ಎಮ್ ಸಿ ಯವರಾದ ನಾವು , ನಮ್ಮ ಶಾಲೆಯ  ಶಾಲೆ ಪ್ರಗತಿಗೆ  ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ  ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಶ್ವಿನಿ ಅಂಜಿನಪ್ಪ..ಗ್ರಾಮಪಂಚಾಯ್ತಿ ಸದಸ್ಯೆ ಚೌಡಮ್ಮ ತಿಮ್ಮಪ್ಪ. ಟಿ.ಪಿ.ಇ.ಒ ಸುರೇಶ್ ರೆಡ್ಡಿ. ಬಿ.ಆರ್.ಪಿ ಈರಪ್ಪ ಎಲ್. ಮಹಮದ್ ಜಾವಿದ್. ಸಿ.ಆರ್.ಪಿ ಲೋಕೇಶ ಆರ್. ಮುಖ್ಯ ಶಿಕ್ಷಕಿ ಸರೋಜಮ್ಮ ಆರ್ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್.  ಒ.ಬಿ ತಿಮ್ಮಪ್ಪ.ಶರಣಪ್ಪ ಮತ್ತು ಶಾಲೆಯ ಸಿಬ್ಬಂಧಿ ವರ್ಗ ಹಾಜರಿದ್ದರು. ಶಿಕ್ಷಕ ಸುಭಾನ್ ಸಾಬ್ ಸ್ವಾಗತಿಸಿದರು. ಶಿಕ್ಷಕಿ ಹುಸೇನ್ ಬಿ ವಂದಿಸಿದರು. ಹೆಚ್.ಜಿ ಲೋಕೇಶಿ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

You missed

error: Content is protected !!