by editor m.rajappa vyasagondanahalli

Shukradeshe online online portal Kannada news June date 1_6_2026 Sunday

ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸೇನೆ ರಾಜ್ಯ ಮಹಿಳಾ ಘಟಕದ ಪ್ರದಾನಕಾರ್ಯದರ್ಶಿ ಬಾಗ್ಯಲಕ್ಷ್ಮಿ ಚಂದಾಪುರ ಒತ್ತಾಯಿಸಿದ್ದಾರೆ

ಇತ್ತಿಚಿಗೆ ಸುರಿದ ಬಾರಿ ಗಾಳಿ ಮಳೆಗೆ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ ಬೆಳೆ ಹಾನಿಯಾಗಿ ಅಪಾರ ನಷ್ಟ ಅನುಭವಿಸಿರುವ ರೈತರಿಗೆ ಕೃಷಿ ಇಲಾಖೆಯ ಮೂಲಕ ತಕ್ಷಣವೇ ಸಮೀಕ್ಷೆ ನಡೆಸಿ, ಎನ್‌ಡಿಆರ್‌ಎಫ್ (NDRF) ಹಾಗೂ ರಾಜ್ಯ ಸರ್ಕಾರದ ಮಾನದಂಡಗಳ ಪ್ರಕಾರ ಸೂಕ್ತ ಬೆಳೆ ಹಾನಿ ಪರಿಹಾರ ಒದಗಿಸಬೇಕು.

ರಾಣೆಬೆನ್ನೂರು ತಾಲ್ಲೂಕಿನ ಹಿರೆಬಿದರೆ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಇತ್ತಿಚಿಗೆ ಗಾಳಿ ಮಳೆಗೆ ಕಟಾವಿಗೆ ಬಂದ ಭತ್ತ ನೆಲಕ್ಕೆ ಉರುಳಿ ಬೆಳೆ ನಷ್ಟವಾಗಿದೆ ರೈತರು ಸಾಲಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.ಸರ್ಕಾರ ಕೂಡಲೆ ಬೆಳೆ ಪರಿಹಾರ ನೀಡಬೇಕು. ಎಂದು ಕರ್ನಾಟಕರ ರಾಜ್ಯ ರೈತ ಸೇನೆ ರಾಜ್ಯ ಮಹಿಳಾ ಘಟಕದ ಪ್ರದಾನಕಾರ್ಯಧರ್ಶಿ ಭಾಗ್ಯಲಕ್ಷ್ಮೀ ಚಂದಾಪುರವರು ಹಿರೆಬಿದರೆ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಪತ್ರಿಕೆ ಮೂಲಕ ಸರ್ಕಾರಕ್ಜೆ ಒತ್ತಾಯಿಸಿದ್ದಾರೆ.

ನೂತನವಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೈತರ ಸಾಲ ಮನ್ನಾ ಮಾಡಲಿ .ಇತ್ತಿಚಿಗೆ ಅವರು ರೈತ ಸಂಘದ ಪದಾಧಿಕಾರಿಗಳೊಂದಿಗೆ ರಾಣೆಬೆನ್ನೂರು ತಾಲ್ಲೂಕಿನ ಹಿರೆಬಿದರೆ ಗ್ರಾಮದ ರೈತರ ಜಮಿನುಗಳಿಗೆ ಭೇಟಿ ನೀಡಿ ಮಳೆಗೆ ಹಾನಿಗೊಳಗಾದ ಬೆಳೆ ವಿಕ್ಷಣೆ ನಡೆಸಿ ತಿಳಿಸಿದ್ದಾರೆ.

..ನೂತನ ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಮತ್ತು ಹೊಸ ಸಾಲ ನೀಡಿಕೆಗೆ ಅನುಕೂಲ ಮಾಡಿಕೊಡಬೇಕು.ಬೆಳೆ ವಿಮೆ ಪರಿಹಾರ: ಬೆಳೆ ವಿಮೆ ಮಾಡಿಸಿರುವ ರೈತರಿಗೆ ವಿಮಾ ಕಂಪನಿಗಳು ಶೀಘ್ರವಾಗಿ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಇಲಾಖೆ ಮಧ್ಯಪ್ರವೇಶಿಸಲು ಕ್ರಮಕೈಗೊಳ್ಳಬೇಕೆಂದರು.


ಇತ್ತಿಚಿಗೆ ಸುರಿದ ಬಿರುಗಾಳಿ ಸಹಿತ ಮಳೆ ಪರಿಣಾಮ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾನಿಯಾಗಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ ಈ. ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸೇನೆ ಮುಖಂಡ ಹುಲೇಹಾಳ್ ನಾಗಣ್ಣ.ಮುಖಂಡರಾದ ಈರುಪಣ್ಣ. ಹಿರೆಬಿದರೆ ಗ್ರಾಮದ ರೈತ ಮುಖಂಡ ಚೇಂಡೆರ್ ಕುಬೇರಪ್ಪ .ಬಿರಪ್ಪ ಚಂದಾಪುರ. ಗುಡ್ಡಾ ಚಂದಾಪುರ ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

error: Content is protected !!