ಕಲಬುರ್ಗಿ ವಕೀಲ ಈರನಗೌಡನನ್ನು ಬರ್ಬರ್ ಹತ್ಯೆ ಮಾಡಿದ ಅರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ  ಸರ್ಕಾರಕ್ಕೆ ವಕೀಲರ ಸಂಘದಿಂದ  ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 8

ಜಗಳೂರು ಸುದ್ದಿ:ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿ ಕಲಬುರಗಿ ಜಿಲ್ಲೆಯ ವಕೀಲ ಈರನಗೌಡ ಪಾಟೀಲ್ ಅವರ ಬರ್ಬರ ಹತ್ಯೆ ಖಂಡಿಸಿ ತಾಲೂಕು ನ್ಯಾಯವಾದಿಗಳ ಸಂಘದಿಂದ ಮನವಿ ಸಲ್ಲಿಸಿದರು‌.

ತಾಲೂಕು ನ್ಯಾಯ ವಾದಿಗಳ ಸಂಘದ ತಾಲೂಕು ಅಧ್ಯಕ್ಷ ಇ.ಓಂಕಾರೇಶ್ವರ ಮಾತನಾಡಿ,ಇದೇ ಡಿಸೆಂಬರ್ 7 ರಂದು ಕಲಬುರಗಿ ಜಿಲ್ಲೆಯ ನ್ಯಾಯವಾದಿಗಳ ಸಂಘದ ಸದಸ್ಯ ಈರನಗೌಡ ಪಾಟೀಲ್ ಅವರನ್ನು ದುಷ್ಕರ್ಮಿಗಳು ಹಾಡುಹಗಲೇ ಹಲ್ಲೆ ಮಾಡಿ,ಹತ್ಯೆ ನಡೆಸಿರುವುದು ವಕೀಲರಿಗೆ ಕಾನೂನು ಭದ್ರತೆಯಿಲ್ಲದೆ ನಾಗರೀಕ ಸಮಾಜದಲ್ಲಿ ತಲೆತಗ್ಗಿಸುವಂತಾಗಿದೆ.ಹತ್ಯೆಗೈದ ದುಷ್ಕರ್ಮಿಗಳಿಗೆ ತನಿಖಾಧಿಕಾರಿಗಳ ಮೂಲಕ ಸೂಕ್ತ ತನಿಖೆ ವರದಿ ಪಡೆದು  ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂದರ್ಭದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ತಾಲೂಕು ಪ್ರಧಾನ‌ಕಾರ್ಯದರ್ಶಿ ಕೆ.ವಿ.ರುದ್ರೇಶಿ,ಖಜಾಂಚಿ ಸಿ.ಬಸವರಾಜ್,ಪದಾಧಿಕಾರಿಗಳಾದ ಡಿ.ವಿ.ನಾಗಪ್ಪ, ಆರ್‌.ಓಬಳೇಶ್,ಸುನಿಲ್ ಕುಮಾರ್,ಗೌಡಗೊಂಡನಹಳ್ಳಿ ಬಸವರಾಜ್,ಅಶೋಕ್ ಕುಮಾರ್,ತಿಪ್ಪೇಸ್ವಾಮಿ,ಭೂಪತಿ,ಶ್ರೀನಿವಾಸ್ ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!