edtor by m.rajappa vyasagondanahalli

By shukradeshe news online portal Kannada news may 20_5_2026 wednesday

ಸುದ್ದಿ ಜಗಳೂರು
ಇ-ಫಾರ್ಮಸಿ ಆನ್‌ಲೈನ್ ಔಷಧಿ ಖರಿದಿಸುವುದು ಒಂದು ಅಪಾಯಕಾರಿ.ಅದಲ್ಲದೆ ಮಳಿಗಳಲ್ಲಿ ನಾವುಗಳು ವೃತ್ತಿಯಾಗಿ ಬಾಡಿಗೆ ಕಟ್ಟಿಕೊಂಡು ಮಾರಾಟ ಮಾಡುತ್ತಿರುವ ನಮಗೆ ಅನ್ಯಾಯವಾಗುತ್ತಿದೆ ಕಡಿವಾಣ ಹಾಕುವಂತೆ ತಹಶೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಜಗಳೂರು ತಾಲ್ಲೂಕು ಔಷಧ ವ್ಯಾಪರಿಗಳ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಆಲ್ ಇಂಡಿಯಾ ಔಷಧ ವ್ಯಾಪಾರಿಗಳ ಸಂಘ ಬಂಧ್ ಕರೆ ನೀಡಿದ ಹಿನ್ನಲೆಯಲ್ಲಿ ಜಗಳೂರು ಪಟ್ಟಣದಲ್ಲಿ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಅನ್ ಲೈನ್ ಮೂಲಕ ಔಷಧಿ‌ ಖರಿಸುವುದರಿಂದ ನಾಗರೀಕರ ಅರೋಗ್ಯದ ಮೇಲೆ ದುಷ್ಪಾರಿಮ ಮತ್ತು ಅಡ್ಡಪರಿಣಾಮ ಬೀರಲಿದೆ ಇ ಪಾರ್ಮಸಿ ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ತಾಲ್ಲೂಕು ತಹಶೀಲ್ದಾರ್ ಕಛೇರಿಗೆ ಪ್ರತಿಭಟನಕಾರರು ಆಗಮಿಸಿ ಉಪಾ ತಹಶೀಲ್ದಾರ್ ಮಂಜಾನಂದರವರಿಗೆ ಮನವಿ ಸಲ್ಲಿಸಿ ಇ ಪಾರ್ಮಸಿ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಪ್ರತಿಭಟಿಸಿದರು.

ಈ ವೇಳೆ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಸದಸ್ಯರಾದ ಬಿ.ಎಂ. ಮಂಜುನಾಥ ಮಾತನಾಡಿ ಇ ಪಾರ್ಮಸಿ ಮನೆ ಬಾಗಿಲಿಗೆ ಔಷಧಿ ತಲುಪಿಸುವ ಮೂಲಕ ಅನುಕೂಲ ಒದಗಿಸುತ್ತದೆಯೆ ಅದರೆ ಕೆಲವು ಪ್ರಮುಖ ಸಮಸ್ಯೆಗಳು ಮತ್ತು ದುಷ್ಪಾರಿಣಾಮಗಳನ್ನು ಕೂಡ ಹೊಂದಿದೆ ಎಂದರು.

ಔಷಧಿ ವ್ಯಾಪಾರಿಗಳ ಸಂಘದ ತಾಲ್ಲೂಕು ಅದ್ಯಕ್ಷರಾದ ಕೆ.ಎಂ.ಮಂಜಣ್ಣ ಮಾತನಾಡಿ ಇ ಪಾರ್ಮಸಿ ಖರಿದಿಸುವುದರಿಂದ ಮುಖ್ಯವಾದ ಅಪಾಯಗಳೆಂದರೆ ನಕಲಿ ಅಥವಾ ಕಳಪೆ ಗುಣಮಟ್ಟದ ಔಷಧಿಗಳ ಪೂರೈಕೆ, ಕಟ್ಟುನಿಟ್ಟಾದ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ನೀಡುವುದು ಮತ್ತು ರೋಗಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ..ಆನ್‌ಲೈನ್ ಫಾರ್ಮಸಿಗಳಿಂದ ಉಂಟಾಗುವ ಪ್ರಮುಖ ದುಷ್ಪಾರಿಣಾಮಗಳು ಹೆಚ್ಚು ನಕಲಿ ಮತ್ತು ಕಳಪೆ ಔಷಧಗಳಿಂದ ಆಪಾಯ ಇದನ್ನು ವಿರೋಧಿಸಿ ಭಾರತೀಯಾ ಔಷಧ ವ್ಯಾಪಾರಿಗಳ ಸಂಘ ಬಂದ್ ಕರೆ ನೀಡಿದೆ ನಾವು ನಮ್ಮ ತಾಲ್ಲೂಕಿನ ಜನತೆ ಪರವಾಗಿ ಯಾವುದೇ ಔಷಧಿ ಅಂಗಡಿಗಳನ್ನ ಬಂದ್ ಮಾಡದೇ ಕಪ್ಪು ಬಟ್ಟೆ ಧರಿಸಿ ಶಾಂತಿಯುವಾಗಿ ತಾಲ್ಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಗಮನಹರಿಸಲು ವಿನಂತಿಕೊಳ್ಳುತ್ತಿದ್ದೆವೆ ಎಂದು ತಿಳಿಸಿದರು.

ಸಂಘದ ಪ್ರದಾನ ಕಾರ್ಯದರ್ಶಿ ಶಾಂತಪ್ಪ ಬಡೀಗೇರ್ ಮಾತನಾಡಿದರು. ವೈದ್ಯರ ಸಲಹೇ ಇಲ್ಲದೆ ಸ್ವತ ಅನ್ ಲೈನ್ ಮೂಲಕ ಔಷಧಿ ಖರಿದಿಸುವುದು ಸೂಕ್ತವಲ್ಲ ನಮ್ಮ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಆದೇಶದ ಮೇರೆಗೆ ಈ ದಿನ ನಾವು ತಹಶೀಲ್ದಾರ್ ರವರಿಗೆ ಮನವಿ ಪತ್ರ ನೀಡಿ ಮನವರಿಕೆ ಮಾಡಿಕೊಡುವ ಮೂಲಕ ನಾಗರೀಕರ ಹಿತಾ ಕಾಪಾಡುವುದೇ ನಮ್ಮ ಉದ್ದೇಶ ಎಂದರು

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರಶಾಂತ..ವಿಶ್ವನಾಥ ಮೆಡಿಕಲ್ ನ ನಿರಂಜನ್ ಕಂಬಳಿಮಠ. ಅಭಿಷೇಕ್. ಕೃಷ್ಣಪ್ರಸಾದ್. ಅಜಯ್. ಗುರುಸಿದ್ದಶಾಸ್ತ್ರಿ. ಉಮೇಶ್.ತೇಜಶ್ವಿನಿ. ಸುನಿಲ್. ನಾಗರಾಜ್. ಬನಶಂಕರಿ ಮೆಡಿಕಲ್ ಉಮಾಶಂಕರ್. ಲೋಕೇಶ್. ವಿನಯ್. ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

error: Content is protected !!