ಸುದ್ದಿ
ಜಗಳೂರು ತಾಲೂಕಿನ ಮರೆನಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬುವವರಿಗೆ ಸೇರಿದ 6 ಮೇಕೆಗಳು ಸಿಡಿಲಿಗೆ ಬಲಿ

ಈ ದಿನ ಭಾನುವಾರ ಸಾಯಂಕಾಲ ಸುರಿದ ಗಾಳಿ ಮಳೆ ಬಂದ ಪರಿಣಾಮ ರಭಸವಾಗಿ ಬಡಿದ ಸಿಡಿಲಿಗೆ ಮೇಕೆಗಳು ಬಲಿಯಾಗಿವೆ. ಜಗಳೂರು ತಾಲ್ಲೂಕಿನ ಮರೆನಹಳ್ಳಿ ಗ್ರಾಮದ ಕೃಷ್ಣಪ್ಪ ಎಂಬುವವರು ಆಡವಿಯಲ್ಲಿ ಮೇಕೆ ಮೇಯಿಸಲು ಹೋದ ಸಂದರ್ಭದಲ್ಲಿ ಈ ದಿನ ಗಾಳಿ ಮಳೆ ಹೆಚ್ಚಾಗಿ ಸಿಡಿಲು ಬಡಿದ ಪರಿಣಾಮ 6 ಮೇಕೆಗಳು ಆಹುತಿಯಾಗಿವೆ ಎಂದು ರೈತ ಕಂಗಾಲಾಗಿರುತ್ತಾನೆ. ತಾಲೂಕಿನ
ಕೃಷ್ಣಪ್ಪ ಎಂಬುವವರಿಗೆ ಸೇರಿದ ಮೇಕೆಗಳು ಮೃತಪಟ್ಟಿವೆ. ಸುಮಾರು 60 ಸಾವಿರ ರೂ. ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಸಂಬಂಧಿಸಿದ ಪಶುವೈದ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ ಈ ಕುರಿತಂತೆ ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.

ಮರೆನಹಳ್ಳಿ ಗ್ರಾಮದ ರೈತ ಬಡ ಕುಟುಂಬದ ಕೃಷ್ಣಪ್ಪ ಮೇಕೆಗಳನ್ನೆ ತನ್ನ ಕಸುಬುನ್ನಾಗಿಸಿಕೊಂಡು ಮೇಕೆ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಆದರೆ ಇದೀಗ 6 ಮೇಕೆಗಳು ಸಿಡಿಲಿಗೆ ಬಲಿಯಾಗಿರುವುದರಿಂದ ರೈತ ನಷ್ಠಕ್ಕೆ ಸಿಲುಕಿದ್ದಾನೆ ಆದ್ದರಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ಕೋಡಿಸಿಕೊಡಬೇಕೆಂದು ವಕೀಲರಾದ ಮರೆನಹಳ್ಳಿ ಬಸವರಾಜ್ ಶುಕ್ರದೆಸೆ ನ್ಯೂಸ್ ಮೀಡಿಯಾ ಮೂಲಕ ಒತ್ತಾಯಿಸಿದ್ದಾರೆ.

.

Leave a Reply

Your email address will not be published. Required fields are marked *

error: Content is protected !!