Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 22
ಶಿಕ್ಷಕರು ಸಾಧಕರನ್ನು ಸೃಷ್ಠಿಸುವ ಕಾರ್ಖಾನೆಗಳು:ಗೋವಿಂದರಾಜ್ ಅಭಿಮತ.
ಜಗಳೂರು ಸುದ್ದಿ:ಶಿಕ್ಷಕರು ಸಮಾಜದಲ್ಲಿ ಸಾಧಕರನ್ನು ಸೃಷ್ಠಿಸುವ ಕಾರ್ಖಾನೆಗಳಿದ್ದಂತೆ ಎಂದು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಗೋವಿಂದರಾಜ್ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಬಿಎಡ್ ಪ್ರ ಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ದೀಪದಾನ ಕಾರ್ಯಕ್ರಮದಲ್ಲಿ ಅವರು ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರದಲ್ಲಿ ಸಾಮಾರ್ಥ್ಯವನ್ನು ಗುರುತಿಸಿ ಪ್ರೊತ್ಸಾಹಿಸಿ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕಿದೆ.ಕನ್ನಡ ಭಾಷೆಯ ಕುರಿತು ತಾತ್ಸಾರ ಸಲ್ಲದು.ಕಠಿಣ ಪರಿಶ್ರಮದಿಂದ ಸಾಧನೆ ಸುಲಭ ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಉದಯೋನ್ಮುಖ ಪ್ರತಿಭೆಗಳಿದ್ದು ಉದ್ಯೋಗಕ್ಕಾಗಿ ಸ್ಥಳೀಯ ಪ್ರದೇಶ ಅವಲಂಬಿಸದೆ ದೇಶದ ಯಾವುದೇ ಭಾಗದಲ್ಲಿ ವೃತ್ತಿ ಆರಂಭಿಸಿ ಆಸ್ತಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಸ್ರೋ ಸಂಸ್ಥೆಯಲ್ಲಿ ನನ್ನೊಳಗೊಂಡಂತೆ ಸಹಸ್ರಾರು ಇಂಜಿನಿಯರ್ ಗಳು ಸೇವೆ ಗೈಯುತ್ತಿದ್ದು.ಸಂಸ್ಥೆಯ ಹಿರಿಯ ವಿಜ್ಞಾನಿ ಕಿರಣ್ ಕುಮಾರ್ ಅವರೊಂದಿಗೆ ಸತತ ಪ್ರಯತ್ನದಿಂದ ಕಡಿಮೆ ವೆಚ್ಚದಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ ಗೊಂಡು ವಿಶ್ವಯೋಜನೆಯಾಗಿ ಹೊರಹೊಮ್ಮಿದೆ.ಇದರಿಂದ ಚಂದ್ರನಮೇಲ್ಮೈಯಲ್ಲಿ ನೀರಿನ ಅಂಶ ಗುರುತಿಸಲು ಕಾರಣವಾಯಿತು.ಇದೀಗ ಚಂದ್ರಯಾನ-3,ಆದಿತ್ಯ ಎಲ್ -1,ಗಗನಯಾನ ರೂಪರೇಶಗಳು ಆರಂಭವಾಗಲು ಸಹಕಾರಿಯಾಯಿತು.ಸೋವಿಯತ್,ಅಮೇರಿಕಾ ದೇಶಗಳು ಭಾರತದ ಇಸ್ರೋ ಸಂಸ್ಥೆಯನ್ನು ಶ್ಲಾಘಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಅಮರಭಾರತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ವೇತಾ ಮಧು ಮಾತನಾಡಿ,ಮನುಷ್ಯನ ಜೀವನದಲ್ಲಿ ಗಳಿಕೆ ಉಳಿಕೆ ಮಧ್ಯೆ ನೆಮ್ಮದಿ ಅಗತ್ಯ. ಶಿಕ್ಷಣ ಸಂಸ್ಥೆಗಳು ನೆಮ್ಮದಿಯ ತಾಣಗಳಿದ್ದಂತೆ.ದೇಶದಲ್ಲಿ ಮಾನವ ಸಂಪನ್ಮೂಲ ಸದೃಢ ಆರೋಗ್ಯಕರವಾಗಿರಬೇಕು.ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪೋಷಕರೊಂದಿಗೆ ಶಿಕ್ಷಕರ ಪಾತ್ರ ಅಪಾರವಾಗಿದೆ.ತರಗತಿಯಲ್ಲಿ ಶಿಕ್ಷಕರು ಮಕ್ಕಳಿಗೆ ವಿಷಯ ಪಾಂಡಿತ್ಯದೊಂದಿಗೆ ಬೋಧಿಸಬೇಕು ಎಂದು ಕಿವಿಮಾತು ಹೇಳಿದರು.
ನಾಲಂದ ಪಿಯು ಕಾಲೇಜು ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ ಮಾತನಾಡಿ,ಶಿಕ್ಷಣ ಪದವಿ ಪಡೆದ ನಂತರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಅಧ್ಯಯನದೊಂದಿಗೆ ಸಾಧಿಸುವ ಛಲ ತಮ್ಮದಾಗಬೇಕಿದೆ ಎಂದರು.
ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದ ಅಕ್ಕ ಭಾರತಿ,ಪ್ರಾಂಶುಪಾಲ ಎಸ್.ಆರ್. ಕಲ್ಲೇಶಿ ,ಉಪನ್ಯಾಸಕರಾದ ರಾಜೇಶ್ ಜೈನ್,ಕೊಟ್ರೇಶ್,ರಾಜಕುಮಾರ್ ,ಬಸಪ್ಪ,ರಾಘವೇಂದ್ರ,ಕಾಶಿನಾಥ್,ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.
