Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 22

ದಾವಣಗೆರೆ ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ ರವರಿಗೇ
” ಕರ್ನಾಟಕ ಮಾಧ್ಯಮ ರತ್ನ” ರಾಜ್ಯ ಪ್ರಶಸ್ತಿ
ದಾವಣಗೆರೆ ಡಿ ೧೮
ದಾವಣಗೆರೆ ಹಿರಿಯ ಮಾಧ್ಯಮ ಪತ್ರಕರ್ತ, ಸಾಂಸ್ಕೃತಿಕ ಸಂಘಟಕ ಇಪ್ಟಾ ಕಲಾ ತಂಡದ ಪುರಂದರ್ ಲೋಕಿಕೆರೆ ರವರಿಗೆ ಈ ಬಾರಿಯ ಕರ್ನಾಟಕ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ಪುರಂದರ್ ಸಮೀಪದ ಲೋಕಿಕೆರೆ ಗ್ರಾಮದ ರೈತ ಕುಟುಂಬದ ಹಿನ್ನೆಲೆ ಇರುವ
ಡಿ ಆರ್ ಆರ್ ಫ್ರೌಡಶಾಲೆ ಡಿ ಆರ್ ಎಂ ಕಾಲೇಜು ದಿನಗಳಲ್ಲಿ ಹತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸ್ಪಂದನ, ಇಪ್ಟಾ ಸಪ್ತಸ್ವರ ಸಾಹಿತಿ ಕಲಾತಂಡ ಬೀದಿನಾಟಕ ತಂಡ ಕಲಾವಿದ ರಾಗಿ ಸಕ್ರಿಯವಾಗಿ ತೊಡಗಿಸಿಕೊಂಡು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಶಂಕರ್ ಪಾಟೀಲ್ ರವರು ಹೊಯ್ಸಳ ಪತ್ರಿಕೆ ಮೂಲಕ ೧೯೯೨ ರಿಂದ ಪತ್ರಿಕಾ ರಂಗದಲ್ಲಿ ಸೇವೆ ಆರಂಭಿಸಿದ ಪುರಂದರ್ ಲೋಕಿಕೆರೆ ಹಿರಿಯ ಕಾರ್ಮಿಕ ಮುಖಂಡ ಶಾಸಕ ಕಾ.ಪಂಪಾಪತಿ ಸಂಪಾದಕತ್ವದ ಕ್ರಾಂತಿ ದೂತ , ವರದಿಗಾರ ಕೂಟದ ಅಧ್ಯಕ್ಷ ಕೆ ಏಕಾಂತಪ್ಪನವರ ಸಂಪಾದಕತ್ವದ ಮಲ್ನಾಡವಾಣಿ ಪತ್ರಿಕೆಯಲ್ಲಿ ಸತತ ಹಲವು ವಿಭಾಗಗಳಲ್ಲಿ ಕಾರ್ಯ ಪ್ರವೃತ್ತರಾಗಿ.ಹೆಮ್ಮೆಯ ಈ ಟಿವಿ ಕನ್ನಡ ಚಾನಲ್ ಅನ್ನದಾತ ವಿಭಾಗ ದಾವಣಗೆರೆ ಚಿತ್ರದುರ್ಗ ಹಾವೇರಿ ಜಿಲ್ಲೆಯ ವರದಿಗಾರರಾಗೀ ದಶಕಗಳ ಕಾಲ ಕೃಷಿ ಸಂಭಂದಿತ ರೈತ ಪರ ಯಾಶೋಗಾಥೆಗಳ ಪರಿಚಯಿಸುವ ಮೂಲಕ ರೈತರ ಸಮಸ್ಯೆ ಗಳ ಬಗ್ಗೆ ಇಡೀ ನಾಡಿಗೆ ಮುಟ್ಟಿಸಿದ ಹೆಗ್ಗಳಿಕೆ ಇವರದು
ನೇರ ನುಡಿ,ದಿಟ್ಟ ಬರಹಗಾರ
ನಾಡು ನುಡಿ ಅನ್ಯಾಯ ಗಳ ವಿರುದ್ಧ ಧ್ವನಿ ಎತ್ತುವ ಬಧ್ಧತೆಯುಳ್ಳ ಪುರಂದರ್ ಲೋಕಿಕೆರೆ ರವರಿಗೇ ಅವರು ನಿರಂತರ ೩೨ ವರ್ಷಗಳ ಮಾಧ್ಯಮ ನಿರತ ಸೇವೆ ಗುರುತಿಸಿ “ಕರ್ನಾಟಕ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿ
ನೀಡಲಾಗಿದೆ.
ಇದೇ ೨೩ ರಂದು ಬೆಳಿಗ್ಗೆ ೧೦.೩೦ ಕ್ಕೆ ನೆಡೆವ ರಾಜ್ಯ ಮಟ್ಟದ ಪತ್ರಕರ್ತ ರ ಕಾರ್ಯಾಗಾರ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೇ ಪ್ರತಿಭಾ ಪುರಸ್ಕಾರ ಸಮಾರಂಭ ಬೆಂಗಳೂರು ರವಿಂದ್ರ ಕಲಾಕ್ಷೇತ್ರದಲ್ಲಿ ನೆಡೆಯಲಿದೆ.

Leave a Reply

Your email address will not be published. Required fields are marked *

You missed

error: Content is protected !!