ದಾವಣಗೆರೆ: ಕೈದಾಳೆ ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾರಥೋತ್ಸವವು ಫೆ.24ರಂದು ಬೆಳಿಗ್ಗೆ 7:45ಗಂಟೆಗೆ ನೆರವೇರಲಿದ್ದು, ಫೆ.25ರಂದು ಸಂಜೆ 5 ಗಂಟೆಗೆ ಶ್ರೀಸ್ವಾಮಿಯ ದಿಬ್ಬಣ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ 3 ರಿಂದ ಜವಳ ಕಾರ್ಯಕ್ರಮವಿದ್ದು, 6:30ಕ್ಕೆ ಜೋಡಿ ಬಸವಗಳ ಹಾಗೂ ಗ್ರಾಮದ ಟ್ರ‍್ಯಾಕ್ಟರ್ಗಳ ಮೂಲಕ ಮೆರವಣಿಗೆಯೊಂದಿಗೆ ಪಾನಕ ವಿತರಣಿ ನಡೆಯಲಿದೆ. ಸಂಜೆ 9:30ಕ್ಕೆ ಅಗ್ನಿಕುಂಡ ಪೂಜೆ ಮತ್ತು ಓಕಳಿ ಹಾಗೂ ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ವೀರಗಾಸೆ. ಮುಂಜಾನೆ 2:30ಕ್ಕೆ ಶ್ರೀ ಸ್ವಾಮಿಯ ನಡೆಮಡಿಯೊಂದಿಗೆ ಅಗ್ನಿಕುಂಡ ಪ್ರವೇಶ ಇರಲಿದೆ.
ರಥೋತ್ಸವಕ್ಕೂ ಮುನ್ನ ದಿನವಾದ ಫೆ.22ರ ಸಂಜೆ 6-30 ರಿಂದ ಮತ್ತು ಫೆ. 23 ರಂದು ಬೆಳಿಗ್ಗೆ 7:30 ರಿಂದ ಉತ್ತರಭಾದ್ರ ನಕ್ಷತ್ರದಲ್ಲಿ ಗೋಧೂಳಿ ಉತ್ಸವದೊಂದಿಗೆ ಮತ್ತು ಗಜ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ, ರಾತ್ರಿ 10:30ಕ್ಕೆ ರಥದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ. ರಾತ್ರಿ 11 ರಿಂದ ಶ್ರೀ ಸ್ವಾಮಿಯ ರಥಕ್ಕೆ ಅರಿಶಿಣ ಎಣ್ಣೆ ಧಾರಣೆ ನಡೆಯಲಿದೆ ಎಂದು ಕೈದಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಟ್ರಸ್ಟ್ ಮಂಡಳಿ ತಿಳಿಸಿದೆ.